ಪಂದ್ಯಕ್ಕೂ ಮುನ್ನವೇ ಭಾರತವನ್ನು ಕೆಣಕಿದ ಬಾಂಗ್ಲಾ ನಾಯಕ; ಆತನ ಗುರಿ ಏನಂತೆ ಗೊತ್ತೇ?? ವಿಶ್ವಕಪ್ ಗೆಲ್ಲಲು ಬಂದಿಲ್ಲ, ಆದರೆ.
ಟಿ20 ವಿಶ್ವಕಪ್ ನಲ್ಲಿ ಪ್ರತಿಯೊಂದು ತಂಡವು ಸಹ ಗೆಲ್ಲುವ ಉದ್ದೇಶದಿಂದ ಎಲ್ಲ ತಯಾರಿಗಳನ್ನು ನಡೆಸುತ್ತಿದೆ. ಪ್ರತಿಯೊಂದು ತಂಡವು ತಮ್ಮ ಬೆಸ್ಟ್ ನೀಡುವ ಪ್ರಯತ್ನದಲ್ಲಿದೆ. ಹೀಗಿರುವಾಗ ವಿಶ್ವಕಪ್ ನಲ್ಲಿ ನಮ್ಮ ಭಾರತ ತಂಡ ಮೇಲುಗೈ ಸಾಧಿಸುತ್ತಿದೆ ಎಂದು ಹೇಳಬಹುದು. ಸೌತ್ ಆಫ್ರಿಕಾ ವಿರುದ್ಧ ಒಂದು ಪಂದ್ಯ ಸೋತಿದ್ದರು ಸಹ, ಭಾರತ ತಂಡದ ಬ್ಯಾಟಿಂಗ್ ಲೈನಪ್ ಮತ್ತು ಬೌಲಿಂಗ್ ಎರಡು ಕೂಡ ಉತ್ತಮವಾಗಿದೆ. ಅಲ್ಲದೆ ಭಾರತ ತಂಡ ಮುಂಬರುವ ಎರಡು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ನೇರವಾಗಿ ಆಯ್ಕೆಯಾಗುತ್ತದೆ. ನವೆಂಬರ್ 2ರಂದು ನಾಳೆ ಭಾರತ ವರ್ಸಸ್ ಬಾಂಗ್ಲಾದೇಶ್ ಪಂದ್ಯ ನಡೆಯಲಿದ್ದು, ಈ ಪಂದ್ಯದ ಹಿಂದಿನ ದಿನ ನಡೆದಿರುವ ಪ್ರೆಸ್ ಮೀಟ್ ನಲ್ಲಿ ತಂಡದ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ಭಾರತದ ಬಗ್ಗೆ ಹೇಳಿಕೆ ನೀಡಿ, ತಮ್ಮ ತಂಡವನ್ನು ಕೆಣಕಿದ್ದಾರೆ.
ಬಾಂಗ್ಲಾದೇಶ್ ತಂಡವು ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವಕಾರಣ ಇವರ ನೆಟ್ ರನ್ ರೇಟ್ -1.533 ಆಗಿದೆ, ಇನ್ನೆರಡು ಪಂದ್ಯಗಳಲ್ಲಿ ಗೆದ್ದಿದ್ದರು ಸಹ ನೆಟ್ ರನ್ ರೇಟ್ ಕಡಿಮೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ್ ತಂಡಕ್ಕೆ ಭಾರತವನ್ನು ಸೋಲಿಸುವುದು ಬಹಳ ಕಷ್ಟದ ವಿಷಯ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಶಕೀಬ್, “ನಾವು ಇಲ್ಲಿ ವಿಶ್ವಕಪ್ ಗೆಲ್ಲವ ಉದ್ದೇಶದಿಂದ ಬಂದಿಲ್ಲ. ವಿಶ್ವಕಪ್ ಗೆಲ್ಲುವ ಉದ್ದೇಶದಿಂದ ಬಂದಿರುವುದು ಭಾರತ ತಂಡ. ನಾಳಿನ ಪಂದ್ಯದಲ್ಲಿ ನಾವು ಭಾರತ ತಂಡವನ್ನು ಸೋಲಿಸಿದರೆ, ಅದು ತಿರುಗುಬಾಣ ಆಗುತ್ತದೆ.

ಹಾಗಾಗಿ ನಾವು ಭಾರತ ತಂಡವನ್ನು ಸೋಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ, ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ..” ಎಂದಿದ್ದಾರೆ ಶಕೀಬ್. ಈ ಹೇಳಿಕೆ ಈಗ, ಭಾರತ ತಂಡವನ್ನು ಮತ್ತು ಟೀಮ್ ಇಂಡಿಯಾದ ಅಭಿಮಾನಿಗಳನ್ನು ಕೆಣಕುವ ಹೇಳಿಕೆ ಆಗಿದ್ದು, ನಾಳಿನ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು ಎನ್ನುವ ಮಾತಾಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳುಬರುತ್ತಿದೆ. ನಮ್ಮ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್ ಎರಡು ಕೂಡ ಅದ್ಭುತವಾಗಿದೆ. ಇನ್ನು ಬಾಂಗ್ಲಾದೇಶ್ ಕ್ಯಾಪ್ಟನ್ ಅವರೇ ವಿಶ್ವಕಪ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿಲ್ಲ, ಬ್ಯಾಟ್ಸ್ಮನ್ ಆಗಿ ಮೂರು ಪಂದ್ಯಗಳಲ್ಲಿ 10ರ ಸರಾಸರಿಯಲ್ಲಿ ಕೇವಲ 3 ರನ್ ಗಳಿಸಿದ್ದಾರೆ, ಬೌಲಿಂಗ್ ನಲ್ಲಿ 3ವಿಕೆಟ್ಸ್ ಪಡೆದಿದ್ದಾರೆ. ಈ ತಂಡದವರು ಭಾರತದ ಸೂರ್ಯಕುಮಾರ್ ಯಾದವ್ ಅವರನ್ನು ಎದುರಿಸುವುದು ಬಹಳ ಕಷ್ಟವಾಗುತ್ತದೆ. ಟಿ20 ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತವಾದ ಬ್ಯಾಟ್ಸ್ಮನ್ ಎಂದು ಸ್ವತಃ ಶಕೀಬ್ ಒಪ್ಪಿಕೊಂಡಿದ್ದರು. ನಾಳಿನ ಪಂದ್ಯದಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.