Neer Dose Karnataka
Take a fresh look at your lifestyle.

ವೀಕೆಂಡ್ ವಿಥ್ ರಮೇಶ್ ನಲ್ಲಿ ಕ್ಯಾಮೆರಾ ಹಿಂದಿನ ದರ್ಶನ್ ವ್ಯಕ್ತಿತ್ವ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತೇ? ಡಿಲೀಟ್ ಮಾಡಲಾದ ವಿಡಿಯೋ ದಲ್ಲಿ ಏನಿದೆ ಗೊತ್ತೇ??

2,105

ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಹೆಸರುವಾಸಿಯಾಗಿದ್ದ ನಟರೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಇವರ ಸ್ನೇಹ ಎಂಥದ್ದು ಎಂದು ಇಡೀ ಕರ್ನಾಟಕಕ್ಕೆ ಗೊತ್ತು. ಸ್ನೇಹದಲ್ಲಿ ಇವರಿಬ್ಬರನ್ನು ಮೀರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಗಾಢವಾದ ಸ್ನೇಹ ಈ ಇಬ್ಬರು ಯಶಸ್ವಿ ನಟರ ನಡುವೆ ಬಹಳ ವರ್ಷದಿಂದ ಇತ್ತು. ವಿಷ್ಣುವರ್ಧನ್ ಅವರ ದಿಢೀರ್ ಅಗಲಿಕೆ ಇವರಿಬ್ಬರ ಸ್ನೇಹಕ್ಕೆ ಪೆಟ್ಟು ನೀಡಿತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ನಂತರ ಸ್ನೇಹಕ್ಕೆ ಹೆಸರುವಾಸಿಯಾದ ಇನ್ನಿಬರು ನಟರು ಕಿಚ್ಚ ಸುದೀಪ್ ಮತ್ತು ಡಿಬಾಸ್ ದರ್ಶನ್. ವಿಷ್ಣು ಅಂಬರೀಶ್ ಅವರ ಹಾದಿಯಲ್ಲೇ ಇವರಿಬ್ಬರು ನಡೆಯುತ್ತಿದ್ದರು. ಇವರಿಬ್ಬರ ಸ್ನೇಹ ಕಂಡು, ಈ ಇಬ್ಬರು ನಟರ ಅಭಿಮಾನಿಗಳು ಕೂಡ ವಿಷ್ಣು ಅಂಬಿ ಸ್ನೇಹಕ್ಕೆ ಹೋಲಿಕೆ ಮಾಡುತ್ತಿದ್ದರು.

ದರ್ಶನ್ ಸಿನಿಮಾಗೆ ಸುದೀಪ್ ಸಪೋರ್ಟ್ ಮಾಡುತ್ತಿದರು, ಸುದೀಪ್ ಸಿನಿಮಾಗೆ ದರ್ಶನ್ ಸುದೀಪ್ ಸಪೋರ್ಟ್ ಮಾಡುತ್ತಿದ್ದರು. ಇನ್ನು, ಹಲವಾರು ಸಮಾರಂಭಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲವು ಅವಾರ್ಡ್ ಫಂಕ್ಷನ್ ಗಳಲ್ಲಿ ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಿದ್ದರು, ದರ್ಶನ್ ಅವರಿಗೆ ಮುಂಗೋಪ, ಸುದೀಪ್ ಅವರು ಅದನ್ನು ಕಂಟ್ರೋಲ್ ಮಾಡುತ್ತಿದ್ದರು. ಈ ಇಬ್ಬರು ನಟರ ಪತ್ನಿಯರು ಕೂಡ ಬಹಳ ಒಳ್ಳೆಯ ಸ್ನೇಹಿತರು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ ಇವರ ಸ್ನೇಹದ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿತೋ, ಕಾರಣಾಂತರಗಳಿಂದ ದರ್ಶನ್ ಸುದೀಪ್ ಸ್ನೇಹ ಮುರಿದು ಬಿತ್ತು. ಇವರಿಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಆಸೆ ಇಟ್ಟುಕೊಂಡಿದ್ದಾರೆ. ಆದರೆ ಇಬ್ಬರು ಒಂದಾಗುವ ಸೂಚನೆ ಮಾತ್ರ ಇಲ್ಲ.

ಒಬ್ಬರು ಬರುವ ಕಡೆಗೆ ಮತ್ತೊಬ್ಬರು ಬರುವುದಿಲ್ಲ. ಎನ್ನುವ ಮಟ್ಟಕ್ಕೆ ಬಂದು ನಿಂತಿದೆ ಇವರಿಬ್ಬರ ಸ್ನೇಹ. ದರ್ಶನ್ ಅವರ ಬಗ್ಗೆ ಸುದೀಪ್ ಅವರಿಗೆ ಮಾಧ್ಯಮಗಳಲ್ಲಿ ಹಲವು ಬಾರಿ ಪ್ರಶ್ನೆ ಕೇಳಲಾಗಿದೆ. ಆಗೆಲ್ಲಾ ಸುದೀಪ್ ಅವರು ದರ್ಶನ್ ಅವರ ಬಗ್ಗೆ ಒಳ್ಳೆಯದನ್ನೇ ಹೇಳಿದ್ದಾರೆ, ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿದ ಸುದೀಪ್ ಅವರು, ದರ್ಶನ್ ಯಾವಾಗಲೂ ನನ್ನ ಗೆಳೆಯ, ಆ ಸ್ಥಾನ ಅವರಿಗೆ ಯಾವಾಗಲೂ ಇರುತ್ತದೆ ಎಂದು ಹೇಳಿದ್ದರು. ಜೀಕನ್ನಡ ವಾಹಿನಿಯ ಅವಾರ್ಡ್ ಕಾರ್ಯಕ್ರಮದಲ್ಲಿ ಸಹ, ದರ್ಶನ್ ಅವರ ಬಗ್ಗೆ ಮಾತನಾಡಿ, ಮಾತಾಡ್ತಾ ಇಲ್ಲ ಜೊತೆಯಾಗಿಲ್ಲ ಅಂತ ಆತ ನನ್ನ ಸ್ನೇಹಿತ ಅಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ, ದರ್ಶನ್ ಯಾವಾಗಲೂ ನನ್ನ ಗೆಳೆಯ ಎಂದು ಹೇಳಿದ್ದರು. ಒಳ್ಳೆಯ ಮನಸ್ಸಿರುವ ಇವರಿಬ್ಬರು ಬೇಗ ಒಂದಾಗಲಿ ಎನ್ನುತ್ತಾರೆ ಅಭಿಮಾನಿಗಳು.

Leave A Reply

Your email address will not be published.