ವಂಶಿಕ ರವರನ್ನು ಮೀರಿಸಬೇಕೆಂದು ಸರಿಗಮಪ ಗೆ ದಾಖಲೆ ಸಂಭಾವನೆ ಪಡೆಯುತ್ತಿರುವ ಅನುಶ್ರೀ. ಎಷ್ಟು ಗೊತ್ತೇ??
ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿ ಎಲ್ಲರ ಮನಗೆದ್ದಿರುವ ಮುದ್ದು ಮಗು ವಂಶಿಕಾ ಅಂಜನಿ ಕಶ್ಯಪ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಈ ಮುದ್ದು ಮಗು ಕಿರುತೆರೆಗೆ ಎಂಟ್ರಿ ಕೊಟ್ಟಿತು, ಯಶಸ್ವಿನಿ ಆನಂದ್ ಹಾಗೂ ವಂಶಿ ಈ ಶೋ ಇಂದ ಮನೆಮಾತಾದರು. ಅದರಲ್ಲೂ ವಂಶಿಯ ಪಟಪಟ ಮಾತುಗಳನ್ನ ಕೇಳಿ ಎಂಜಾಯ್ ಮಾಡದೆ ಇರುವವರು ಸಾಧ್ಯವಿಲ್ಲ. ನನ್ನಮ್ಮ ಸೂಪರ್ ಸ್ಟಾರ್ ಶೋನ ವಿಜೇತಳಾಗಿ ಹೊರಹೊಮ್ಮಿದಳು ವಂಶಿಕಾ.
ಬಳಿಕ ವಂಶಿ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಣಿಸಿಕೊಂಡಳು. ಗಿಚ್ಚಿ ಗಿಲಿಗಿಲಿ ಶೋ ಮುಗಿದು, ವಂಶಿಕಾ ಹಾಗೂ ಶಿವು ವಿನ್ನರ್ ಆಗಿ ಹೊರಹೊಮ್ಮಿದ್ದರು. ಕಲರ್ಸ್ ಕನ್ನಡ ವಾಹಿನಿಯ ಟಿ.ಆರ್.ಪಿ ಮರಳಿ ಬಂದಿದ್ದು ವಂಶಿಕಾ ಇಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ ನಿರೂಪಣೆ ಮಾಡುತ್ತಿದ್ದು, ಈ ಶೋ ನಿರೂಪಣೆಗೆ ಅನುಶ್ರೀ ಅವರನ್ನು ಮೀರಿಸುವಷ್ಟು ಸಂಭಾವನೆ ಪಡೆಯುತ್ತಿದ್ದಾಳೆ ವಂಶಿಕಾ, ಒಂದು ಎಪಿಸೋಡ್ ಗೆ 1.8ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾಳೆ ಎಂದು ಮಾಹಿತಿ ಸಿಕ್ಕಿತ್ತು.

ಆದರೆ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿರುವ ಅನುಶ್ರೀ ಅವರು ಈಗ ವಂಶಿಕಾ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅನುಶ್ರೀ ಅವರು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಜೀಕನ್ನಡ ವಾಹಿನಿಯ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಇದೀಗ ಸರಿಗಮಪ ಕಾರ್ಯಕ್ರಮಕ್ಕೆ ಅನುಶ್ರೀ ಅವರು ವಂಶಿಕಾ ಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದು, ಒಂದು ಎಪಿಸೋಡ್ ಗೆ 2 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ.