Neer Dose Karnataka
Take a fresh look at your lifestyle.

ಪುನೀತ್ ರವರಿಗೆ ನಾನು ಋಣವಾಗಿ ಇದ್ದೇನೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಜೂನಿಯರ್ ಎನ್ಟಿಆರ್. ಯಾಕೆ ಅಂತೇ ಗೊತ್ತೆ?

49

ನಿನ್ನೆ ಕನ್ನಡ ರಾಜ್ಯೋತ್ಸವದ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿರು. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಅಯೋಜಿಸಲಾಗಿತ್ತು, ಇದಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಮತ್ತು ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಹಾಜರಿದ್ದರು. ವಿಶೇಷವಾಗಿ ಜ್ಯೂನಿಯರ್ ಎನ್.ಟಿ.ಆರ್ ಅವರು ಕನ್ನಡದಲ್ಲೇ ಮಾತನಾಡಿದರು, ಅವರ ಕನ್ನಡ ಕೇಳಲು ಅದ್ಭುತವಾಗಿತ್ತು ಎಂದರೆ ತಪ್ಪಲ್ಲ..

ಮಾತು ಶುರು ಮಾಡಿದ ಜ್ಯೂನಿಯರ್ ಎನ್.ಟಿ.ಆರ್ ಅವರು, “ಎಲ್ಲರಿಗೂ ನಮಸ್ಕಾರ, ನಾನು ಪ್ರಾರಂಭಿಸುವ ಮೊದಲು ಇಡೀ ಕರ್ನಾಟಕ ರಾಜ್ಯಕ್ಕೆ ಮತ್ತು ಪ್ರಪಂಚಾದ್ಯಂತ ಇರುವ ಕನ್ನಡ ಜನಕ್ಕೆ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು.. ಒಬ್ಬ ಮನುಷ್ಯನಿಗೆ ಪರಂಪರೆ ಮತ್ತು ಉಪನಾಮ ಹಿರಿಯರಿಂದ ಬರುತ್ತೆ, ಆದರೆ ವ್ಯಕ್ತಿತ್ವ ಅನ್ನೋದು ಒಬ್ಬ ವ್ಯಕ್ತಿಯ ಸ್ವಂತ ಸಂಪಾದನೆ. ಬರೀ ವ್ಯಕ್ತಿತ್ವದಿಂದ ನಗುವಿನಿಂದ, ಅಹಂ ಇಲ್ಲದೆ ಅಹಂಕಾರ ಇಲ್ಲದೆ, ಯುದ್ಧ ಮಾಡದೆ ಒಂದು ರಾಜ್ಯವನ್ನೇ ಗೆದ್ದಿರೋ ರಾಜ ಯಾರಾದ್ರೂ ಇದ್ರೆ ಅದು ಶ್ರೀ ಪುನೀತ್ ರಾಜ್ ಕುಮಾರ್ ಅವರು. ಅವರು ಸೂಪರ್ ಸ್ಟಾರ್ ಆಫ್ ಕರ್ನಾಟಕ, ಶ್ರೇಷ್ಠ ಮಗ, ಶ್ರೇಷ್ಠ ಪತಿ, ಶ್ರೇಷ್ಠ ಸ್ನೇಹಿತ, ಶ್ರೇಷ್ಠ ತಂದೆ, ಶ್ರೇಷ್ಠ ನಟ, ಡ್ಯಾನ್ಸರ್ ಮತ್ತು ಸಿಂಗರ್. ಇದೆಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಶ್ರೇಷ್ಠ ಮನುಷ್ಯ.

ಇವರ ನಗುವಿನಲ್ಲಿ ಇದ್ದ ಶ್ರೀಮಂತಿಕೆಯನ್ನ ನಾನು ಎಲ್ಲಿಯೂ ನೋಡಿಲ್ಲ. ಅದಕ್ಕೆ ಅವರನ್ನ ನಗುವಿನ ಒಡೆಯ ಅನ್ನೋದು. ಇವತ್ತು ಅವರಿಗೆ ಸಿಗ್ತಾ ಇರುವ ಪ್ರಶಸ್ತಿ ಕರ್ನಾಟಕ ರತ್ನ, ಆದರೆ ನನ್ನ ಪ್ರಕಾರ, ದಯವಿಟ್ಟು ಯಾರು ತಪ್ಪು ತಿಳ್ಕೋಬೇಡಿ, ಕರ್ನಾಟಕ ರತ್ನದ ಅರ್ಥಾನೆ ಶ್ರೀ ಪುನೀತ್ ರಾಜ್ ಕುಮಾರ್ ಅವರು. ನಾನು ಈ ವೇದಿಕೆಗೆ ಬಂದಿದ್ದು ನನ್ನ ಸಾಧನೆ ಇಂದ ಅಲ್ಲ, ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೀನಿ. ನಾನು ಕರ್ನಾಟಕದ ಜನತೆ, ಮಿನಿಸ್ಟರ್ ಸುಧಾಕರ್ ಅವರು, ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಇಂತಹ ಶ್ರೇಷ್ಠವಾದ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದಕ್ಕೆ ಇವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ನನ್ನನ್ನು ಪಕ್ಕದ ರಾಜ್ಯದ ಒಬ್ಬ ನಟನಾಗಿ ಅಲ್ಲದೆ ನನ್ನನ್ನು ಅವರ ಕುಟುಂಬದಲ್ಲಿ ಒಬ್ಬನಾಗಿ ಭಾವಿಸುವುದಕ್ಕೆ ಡಾ.ರಾಜ್ ಕುಮಾರ್ ಸರ್ ಅವರ ಇಡೀ ಕುಟುಂಬಕ್ಕೆ ಧನ್ಯವಾದ..” ಎಂದು ಹೇಳಿದರು. ಜ್ಯೂನಿಯರ್ ಎನ್.ಟಿ.ಆರ್ ಅವರ ಈ ಮಾತು ಕೇಳಿ ಪುನೀತ್ ಅವರ ಅಭಿಮಾನಿಗಳು ಮತ್ತು ಸ್ವತಃ ಎನ್.ಟಿ.ಆರ್ ಅವರ ಅಭಿಮಾನಿಗಳು ಸಂತೋಷವಾಗಿದ್ದಾರೆ.

Leave A Reply

Your email address will not be published.