ಕ್ಯಾಮೆರಾ ಮುಂದೆ ಒಟ್ಟಾಗಿ ಬಂದ ಮೀರಾ-ಅನಿ ಜೋಡಿ: ಇಷ್ಟು ದಿನ ಕಣ್ಮರೆಯಾಗಿ ಈಗ ಬಂದು ಹೇಳಿದ್ದೇನು ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಧಾರವಾಹಿಗಳಲ್ಲಿ ಒಂದು ನಮ್ಮನೆ ಯುವರಾಣಿ. ಈ ಧಾರಾವಾಹಿಯ ಮುದ್ದಾದ ಜೋಡಿ ಅನಿಕೇತ್ ಹಾಗೂ ಮೀರಾ ಅವರು ಎಲ್ಲರ ಫೇವರೇಟ್ ಆಗಿದ್ದರು. ಈ ಜೋಡಿಯ ಕ್ಯೂಟ್ ಆದ ಜಗಳ ನೋಡುವ ಸಲುವಾಗಿಯೇ ಹಲವರು ನಮ್ಮನೆ ಯುವರಾಣಿ ಧಾರವಾಹಿ ನೋಡುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಬ್ಬರಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಧಾರವಾಹಿ ಮಧ್ಯದಲ್ಲೇ ಅನಿಕೇತ್ ಹಾಗೂ ಮೀರಾ ಪಾತ್ರ ಹೊರನಡೆದಿದ್ದು ಅಭಿಮಾನಿಗಳಿಗೆ ಬಹಳ ಬೇಸರ ಉಂಟು ಮಾಡಿತ್ತು.
ಇವರಿಬ್ಬರು ಮತ್ತೆ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದೇ ಈ ಅನಿರಾ ಅಭಿಮಾನಿಗಳ ಆಸೆ, ಅದೇ ರೀತಿ ಅನಿರಾ ಧಾರವಾಹಿಗೆ ವಾಪಸ್ ಬರುತ್ತಾರೆ ಎನ್ನುವ ಸುದ್ದಿ ಸಹ ಹರಿದಾಡಿತ್ತು, ಆದರೆ ಇವರಿಬ್ಬರು ಧಾರವಾಹಿಗೆ ಮರಳಿ ಬರುವ ಸೂಚನೆ ಅಂತೂ ಇರಲಿಲ್ಲ. ಆದರೆ ಇದೀಗ ಈ ಜೋಡಿ ಜೊತೆಯಾಗಿ ಕ್ಯಾಮೆರಾ ಮುಂದು ಕಾಣಿಸಿಕೊಂಡಿದ್ದಾರೆ. ಅದು ಒಂದು ಒಳ್ಳೆಯ ವಿಷಯಕ್ಕಾಗಿ . ನಮ್ಮನೆ ಯುವರಾಣಿ ನಂತರ ಅಂಕಿತಾ ಅವರು ಎದೆ ತುಂಬಿ ಹಾಡುವೆನು ಶೋ ನಿರೂಪಣೆ ಮಾಡಿದರು, ನಂತರ ಸಿನಿಮಾಗು ನಾಯಕಿಯಾಗಿ ಆಯ್ಕೆಯಾದರು. ಆದರೆ ದೀಪಕ್ ಅವರ ಬಗ್ಗೆ ಯಾವುದೇ ಸುದ್ದಿ ಸಿಕ್ಕಿರಲಿಲ್ಲ. ಇದೀಗ ದೀಪಕ್ ಅವರು ಹೊಸ ಧಾರವಾಹಿ ಮೂಲಕ ಕಿರುತೆರೆಗೆ ವಾಪಸ್ ಬರುತ್ತಿದ್ದಾರೆ.

ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಾಯಕ ಸಮರ್ಥ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಕ್ ಗೌಡ. ಈ ಹೊಸ ಸೀರಿಯಲ್ ಗೆ ವಿಶ್ ಮಾಡಲು ದೀಪಕ್ ಹಾಗೂ ಮೀರಾ ವಿಡಿಯೋ ಮಾಡಿದ್ದಾರೆ, ಇದರಲ್ಲಿ, “ಸಮರ್ಥ್ ನಿನಗೆ ಸಿರಿ ಅಂದ್ರೆ ಪಂಚ ಪ್ರಾಣಾನ..” ಎಂದು ಕೇಳುತ್ತಾರೆ.. ಆಗ ದೀಪಕ್ ಗೌಡ, ನಿನ್ನಷ್ಟು ಇಲ್ಲ ಎಂದು ಹೇಳುತ್ತಾರೆ.. ಆಗ ಜೋರಾಗಿ ನಗುವ ಅಂಕಿತಾ, anyhow ಆಲ್ ದಿ ಬೆಸ್ಟ್ ಸಮರ್ಥ್ ಎಂದು ವಿಶ್ ಮಾಡುತ್ತಾರೆ. ಈ ಜೋಡಿಯ ಈ ಕ್ಯೂಟ್ ಆದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.