Neer Dose Karnataka
Take a fresh look at your lifestyle.

ಪ್ರಶಾಂತ್ vs ರೂಪೇಶ್: ಬಿಗ್ ಬಾಸ್ ಅನ್ನು ಅಲ್ಲೋಲ ಕಲ್ಲೋಲ ಮಾಡಿದ್ದ ಬಜರ್ ಪ್ರಸಂಗದಲ್ಲಿ ನಿಜಕ್ಕೂ ಮೊದಲು ಒತ್ತಿದ್ದು ಯಾರು ಗೊತ್ತೇ??

13,520

ಬಿಗ್ ಬಾಸ್ ಮನೆಯಲ್ಲಿ ಈ ವಾರ ಅನುಪಮ ಗೌಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು ಪ್ರತ್ಯೇಕವಾಗಿ ಆಟ ಆಡುವಂಥ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಟಾಸ್ಕ್ ನ ಅನುಸಾರ ಬಜರ್ ಆದ ತಕ್ಷಣ ಮನೆಯ ಸ್ಪರ್ಧಿಗಳು ಓಡಿ ಬಂದು ಬಜರ್ ಒತ್ತಬೇಕು, ಮೊದಲು ಬಜರ್ ಒತ್ತಿದವರಿಗೆ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ, ನಂತರ ಬಿಗ್ ಬಾಸ್ ಕೊಡುವ ಟಾಸ್ಕ್ ನಲ್ಲಿ ಗೆದ್ದವರು ಪವರ್ ರೂಮ್ ಗೆ ಹೋಗಿ ವಿಶೇಷ ಅಧಿಕಾರ ಪಡೆಯುತ್ತಾರೆ. ಈ ಟಾಸ್ಕ್ ನ ಮೇಲುಸ್ತುವಾರಿ ಕ್ಯಾಪ್ಟನ್ ಅನುಪಮಾ ನೋಡಿಕೊಳ್ಳಬೇಕಿತ್ತು. ಇಲ್ಲಿ ಎಲ್ಲರು ಬಜರ್ ಗಾಗಿ ಕಾಯುತ್ತಾ ಗಾರ್ಡನ್ ಏರಿಯಾದಲ್ಲಿ ಇರಬೇಕಿಲ್ಲ, ತಮ್ಮ ದಿನ ನಿತ್ಯದ ಕೆಲಸಗಳನ್ನು ಮಾಡುತ್ತಿರಬೇಕು.

ಬಜರ್ ಆದಾಗ ಬಂದು ಬಜರ್ ಒತ್ತಬೇಕು. ಆದರೆ ಮನೆಯ ಸ್ಪರ್ಧಿಗಳು ರೂಲ್ಸ್ ಫಾಲೋ ಮಾಡಲಿಲ್ಲ, ಎರಡನೆಯ ಬಜರ್ ಆದಾಗ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಇಬ್ಬರು ಕೂಡ ಒಂದೇ ಸಾರಿ ಓಡಿ ಬಂದರು, ಇಲ್ಲಿ ಮೊದಲು ಬಜರ್ ಒತ್ತಿದ್ದು ಪ್ರಶಾಂತ್ ಸಂಬರ್ಗಿ ಅವರು ಮೊದಲು ಬಜರ್ ಒತ್ತಿದರು ಎಂದು ಅನುಪಮಾ ತೀರ್ಪು ನೀಡಿದರು, ಇದನ್ನು ರೂಪೇಶ್ ರಾಜಣ್ಣ ಒಪ್ಪಲಿಲ್ಲ. ಮೊದಲು ಬಜರ್ ಒತ್ತಿದ್ದು ತಾವೇ ಎಂದು ಹೇಳಲು ಶುರು ಮಾಡಿದರು, ಬಿಗ್ ಬಾಸ್ ಗೆ ಅಪೀಲ್ ಮಾಡಿ ಎಂದು ಸಹ ಕೇಳಿಕೊಂಡರು. ಆದರೆ ಅನುಪಮಾ ಅವರು ಅಪೀಲ್ ಮಾಡಲಿಲ್ಲ. ಕೊನೆಗೆ ರೂಪೇಶ್ ಮತ್ತು ಅನುಪಮಾ ನಡುವೆ ಜೋರು ಜಗಳವಾಗಿ, ರೂಪೇಶ್ ರಾಜಣ್ಣ ಅವರು ನನ್ನ ತಪ್ಪಿದ್ದಾರೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ ಎಂದೆಲ್ಲ ಹೇಳಿದರು.

ಈ ಜಗಳ ದೊಡ್ಡದಾಗಿ, ರೂಪೇಶ್ ರಾಜಣ್ಣ ಅವರು ತಮ್ಮ ಬ್ಯಾಗ ಗಳನ್ನು ಎತ್ತಿಕೊಂಡು ನಾನು ಮನೆಯಿಂದ ಹೊರಗಡೆ ಹೋಗುತ್ತೇನೆ ಎಂದು ಹೊರಹೋಗಲು ಪ್ರಯತ್ನ ಪಟ್ಟರು. ಆದರೆ ಮನೆಯ ಎಲ್ಲಾ ಸ್ಪರ್ಧಿಗಳು ಅವರನ್ನು ತಡೆದು ನಿಲ್ಲಿಸಿದರು. ಇತ್ತ ಹೊರಗಡೆ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿದ್ದು, ಪ್ರಶಾಂತ್ ಸಂಬರ್ಗಿ ಅವರೇ ಮೊದಲು ಬಜರ್ ಒತ್ತಿದ್ದು ಎನ್ನುವುದಕ್ಕೆ ಕೆಲವು ಸ್ಕ್ರೀನ್ ಶಾಟ್ ಗಳು ಸಾಕ್ಷಿಯಾಗಿದೆ. ಆದರೆ ಬಿಗ್ ಬಾಗ್ ಮನೆಯಲ್ಲಿ ಇವರಿಬ್ಬರಲ್ಲಿ ಮೊದಲು ಬಜರ್ ಒತ್ತಿದ್ದು ಯಾರು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಇದೊಂದು ಸಣ್ಣ ವಿಷಯಕ್ಕೆ ಸಣ್ಣ ಜಗಳವೆ ನಡೆದು ಹೋಯಿತು.

Leave A Reply

Your email address will not be published.