ಕನ್ನಡ ಚಿತ್ರರಂಗದಲ್ಲಿ ಇಂಗೆ ಬೆಳೆದು ಬಿಡೋಣ ಎಂದುಕೊಂಡಿದ್ದ ಜೈದ್ ಖಾನ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಯಶ್. ಯಾಕೆ ಗೊತ್ತೇ??
ನಾಳೆ ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗುತ್ತಿದೆ, ಅದು ಜೈದ್ ಖಾನ್ ಮತ್ತು ಸೋನಲ್ ಮೊಂಟೆರೋ ಅವರು ನಟಿಸಿರುವ ಬನಾರಸ್ ಸಿನಿಮಾ. ಜೈದ್ ಖಾನ್ ಅವರು ಖ್ಯಾತ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ. ಈ ಯುವನಟನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಪೋರ್ಟ್ ಇದೆ. ದರ್ಶನ್ ಅವರು ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಪಾಲ್ಗೊಂಡು ಬನಾರಸ್ ಸಿನಿಮಾಗೆ ಸಪೋರ್ಟ್ ಮಾಡಿದರು. ದರ್ಶನ್ ಅವರು ಮತ್ತು ಜಮೀರ್ ಅಹ್ಮದ್ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಜೈದ್ ಖಾನ್ ಅವರು ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ, ಟೈಮ್ ಟ್ರಾವೆಲ್ ಕಥೆ ಇರುವ ಬನಾರಸ್ ಸಿನಿಮಾ ಮೂಲಕ, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಲಾಂಚ್ ಆಗುತ್ತಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದರೆ, ಕಥೆ ಚೆನ್ನಾಗಿದೆ ಎಂದು ಅನ್ನಿಸುತ್ತಿದೆ. ಜೊತೆಗೆ ಟ್ರೈಲರ್ ನಲ್ಲಿ ಜೈದ್ ಖಾನ್ ಅವರ ಕನ್ನಡ ಕೇಳಿ ನೆಟ್ಟಿಗರು ಸಹ ಶಾಕ್ ಆಗಿದ್ದಾರೆ. ಯಾಕೆಂದರೆ ಜೈದ್ ಖಾನ್ ಅವರು ಮೊದಲೆಲ್ಲಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾ ಇರಲಿಲ್ಲ. ಆದರೆ ಈಗ ಅವರ ಕನ್ನಡ ಸರಿ ಆಗಿದೆ. ಜೈದ್ ಖಾನ್ ಹಾರ್ಡ್ ವರ್ಕ್ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ತಮ್ಮ ಕನ್ನಡ ಸುಧಾರಿಸಲು ಕಾರಣ ಏನು ಎಂದು ತಿಳಿಸಿದ್ದಾರೆ ಜೈದ್.

ಜೈದ್ ಅವರಿಗೆ ಈ ವಿಷಯದಲ್ಲಿ ಸಲಹೆ ಕೊಟ್ಟಿರುವುದು ಮತ್ಯಾರು ಅಲ್ಲ, ರಾಕಿ ಭಾಯ್ ಯಶ್ ಅವರು.. ಇದು ಆಟ ಅಲ್ಲ ತುಂಬಾ ಸೀರಿಯಸ್ ಆಗಿರಬೇಕು, ನಾನೊಬ್ಬ ರಾಜಕಾರಣಿ ಮಗ, ಐಷಾರಾಮಿ ಜೀವನ ನಡೆಸುತ್ತಾ ಇದ್ದೀನಿ ಅನ್ನೋದು ಇರಬಾರದು, ಅದನ್ನೆಲ್ಲ ಬಿಟ್ಟು ಹೊರಗೆ ಬಂದರೆ ಮಾತ್ರ, ಸಾಧನೆ ಮಾಡೋದಕ್ಕೆ ಸಾಧ್ಯ ಎಂದು ಯಶ್ ಅವರು ಹೇಳಿದರಂತೆ. ಅಷ್ಟೇ ಅಲ್ಲದೆ, ಜೈದ್ ಖಾನ್ ಕನ್ನಡ ಸರಿಹೋಗಳು, ಪ್ರತಿದಿನ ನ್ಯೂಸ್ ಪೇಪರ್ ಓದು, ಜಾಸ್ತಿ ಕನ್ನಡದಲ್ಲಿ ಮಾತನಾಡು, ಕನ್ನಡ ಕಲಿತುಕೊ, ಇಲ್ಲ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಇರೋದಿಲ್ಲ ಎಂದು ಹೇಳಿದರಂತೆ ನಟ ಯಶ್. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಜೈದ್ ಖಾನ್ ಅವರು ತಿಳಿಸಿದ್ದಾರೆ.