ಎಬಿಡಿ ರವರನ್ನು ಬಿಡದ ರಿಷಬ್ ಶೆಟ್ಟಿ: ದಿಡೀರ್ ಎಂದು ಎಬಿಡಿ ರವರ ಜೊತೆ ಕಾಣಿಸಿಕೊಂಡ ರಿಷಬ್. ಯಾಕೆ ಗೊತ್ತೇ?? ಎಬಿಡಿ ಎಲ್ಲಿದ್ದಾರೆ ಗೊತ್ತೇ??
ಕ್ರಿಕೆಟ್ ಲೋಕದಲ್ಲಿ ಮಿಸ್ಟರ್ 360 ಎಂದು ಕರೆಸಿಕೊಂಡವರು ಎಬಿ ಡಿ ವಿಲಿಯರ್ಸ್, ನಮ್ಮ ಆರ್ಸಿಬಿ ತಂಡದ ಆಪತ್ಬಾಂಧವ ಇವರು. ಎಬಿಡಿ ಅವರನಮು ವಿಶ್ವ ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದರು. ಹೆಚ್ಚಾಗಿ ನಮ್ಮ ಆರ್ಸಿಬಿ ತಂಡ ಮಿಸ್ ಮಾಡಿಕೊಳ್ಳುತ್ತಿದ್ದರು, ವಿಶೇಷವಾಗಿ ಆರ್ಸಿಬಿ ಅಭಿಮಾನಿಗಳು ಎಬಿಡಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಎಬಿಡಿ ಅವರು ಇದ್ದಕ್ಕಿದ್ದ ಹಾಗೆ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅದು ರಿಷಬ್ ಶೆಟ್ಟಿ ಅವರೊಡನೆ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಬೆಂಗಳೂರಿನವರಿಗೆ ಡಬಲ್ ಸಂತೋಷ ಆಗಿದೆ ಎಂದೇ ಹೇಳಬಹುದು.
ರಿಷಬ್ ಶೆಟ್ಟಿ ಅವರು ಮತ್ತು ಎಬಿಡಿ ಅವರು ಇಬ್ಬರು ಸಹ ವಿಡಿಯೋ ದಲ್ಲಿ ಕಾಣಿಸಿಕೊಂಡಿದ್ದು, ಕಾಂತಾರ ಸಿನಿಮಾ ಪ್ರೋಮೋಟ್ ಮಾಡಲಾಗುತ್ತಿದೆ. ಎಬಿಡಿ ಅವರು ದಿಢೀರ್ ಎಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದ ಹಾಗೆ ಆಗಿದೆ. ಎಬಿಡಿ ಅವರು ಮತ್ತು ರಿಷಬ್ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ಅನ್ನು ಸ್ವತಃ ರಿಷಬ್ ಶೆಟ್ಟಿ ಅವರು ಮತ್ತು ಹೊಂಬಾಳೆ ಸಂಸ್ಥೆಯವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಿ.360 ಮತ್ತು ಕಾಂತಾರದ ಶಿವ ಇಬ್ಬರನ್ನು ಜೊತೆಯಾಗಿ ನೋಡಿ, ಕ್ರಿಕೆಟ್ ಪ್ರೇಮಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರಿಗೂ ಸಂತೋಷವಾಗಿದೆ.

ಎಬಿಡಿ ಅವರು ಬೆಂಗಳೂರಿಗೆ ಬಂದಿರುವುದು ಯಾಕೆ ಎನ್ನುವ ಪ್ರಶ್ನೆ ಸಹ ಶುರುವಾಗಿದ್ದು, ಬಹುಶಃ ಎಬಿಡಿ ಅವರು ಈ ಹಿಂದೆ ಹೇಳಿದ್ದ ಹಾಗೆ, ಆರ್ಸಿಬಿ ತಂಡಕ್ಕೆ ಕಂಬ್ಯಾಕ್ ಮಾಡುತ್ತಿರಬಹುದಾ ಎನ್ನುವ ಪ್ರಶ್ನೆ ಶುರುವಾಗಿದೆ. ಎಬಿಡಿ ಅವರು ಕ್ರಿಕೆಟ್ ಇಂದ ನಿವೃತ್ತಿ ಪಡೆದಿರುವುದರಿಂದ ಕೋಚ್ ಆಗಿ ಆರ್ಸಿಬಿ ತಂಡಕ್ಕೆ ಕಂಬ್ಯಾಕ್ ಮಾಡಬಹುದು ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ವಿಚಾರ ತಿಳಿಯಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಎಬಿಡಿ ಅವರು ಹೇಳಿದ ಹಾಗೆ ಕೋಚ್ ಆಗಿ ಆರ್ಸಿಬಿ ತಂಡಕ್ಕೆ ವಾಪಸ್ ಬಂದರೆ, ಈ ಸಲಕಪ್ ನಮ್ಮದೇ ಎನ್ನುತ್ತಿದ್ದಾರೆ ಅಭಿಮಾನಿಗಳು.
It’s a Match!
Met the real 360 today.
The #Superhero is back to the roots again to #NammaBengaluru.. 🤩#Kantara @RCBTweets @ABdeVilliers17 @VKiragandur @shetty_rishab @hombalefilms @gowda_sapthami@HombaleGroup @AJANEESHB @actorkishore @KantaraFilm pic.twitter.com/LUfovEcn0h— Rishab Shetty (@shetty_rishab) November 3, 2022