Neer Dose Karnataka
Take a fresh look at your lifestyle.

ಶನಿ ದೇವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು, ನಂತರ ಏನಾಗುತ್ತದೆ ಎಂದು ತಿಳಿದರೆ, ಇಂದೇ ಆ ಕೆಲಸ ಮಾಡಿ ಬಿಡ್ತೀರಾ. ಬಡವರು ಕೂಡ ಮಾಡಬಹುದು.

ಹಿಂದೂ ಧರ್ಮದ ಪ್ರಕಾರ ಕೆಲವು ಗಿಡಗಳು ದೇವರು ತುಂಬಾ ಇಷ್ಟಪಡುವ, ದೇವರಿಗೆ ಪ್ರಿಯವಾದ ಗಿಡ ಆಗಿರುತ್ತದೆ. ಅವುಗಳನ್ನು ಮನೆಯಲ್ಲಿ ಬೆಳಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ, ಹಣ ಎಲ್ಲವೂ ಬರುತ್ತದೆ. ಇಂದು ನಾವು ನಿಮಗೆ ಶನಿದೇವರ ಕೃಪೆ ಪಡೆಯಲು ಮನೆಯಲ್ಲಿ ಯಾವ ಸಸ್ಯ ನೆಡಬೇಕು ಎಂದು ತಿಳಿಸುತ್ತೇವೆ. ಈ ಸಸ್ಯ ನೆಟ್ಟರೆ, ನಿಮ್ಮ ಮನೆಯಲ್ಲಿ ಎಲ್ಲವೂ ಒಳ್ಳೆಯದಾಗವುದು ಖಂಡಿತ. ವಾಸ್ತು ಶಾಸ್ತ್ರದ ಪ್ರಕಾರ ಆ ಸಸ್ಯ ಮತ್ಯಾವುದು ಅಲ್ಲ, ಶಮಿ ಸಸ್ಯ ಆಗಿದೆ.. ಈ ಗಿಡ ನೆಡುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ, ಪಾಸಿಟಿವ್ ಶಕ್ತಿ ಬರುತ್ತದೆ. ನಿಮ್ಮ ಮನೆಯ ಮುಖ್ಯ ಬಾಗಿಲಿನ ಬಳಿ ಶಮಿ ಸಸ್ಯವನ್ನು ಇರಿಸಬೇಕು. ನೀವು ಹೊರಗಿಂದ ಮನೆಯೊಳಗೆ ಬರುವಾಗ, ಶಮಿ ಸಸ್ಯ ನಿಮ್ಮ ಬಲ ಭಾಗಕ್ಕೆ ಇದ್ದರೆ, ಮನೆಗೆ ಶುಭವಾಗುತ್ತದೆ ಎಂದು ಹೇಳುತ್ತಾರೆ.
ಈ ಗಿಡವನ್ನು ಮನೆಯ ಹೊರಗೆ ಮುಂಬಾಗಿಲಿನ ಬಳಿ ನೆಡಲು ಆಗದೆ ಹೋದರೆ, ಟೆರೇಸ್ ಅಥವಾ ಬಾಲ್ಕನಿಯಲ್ಲಿ ನೆಡಬೇಕು, ಮನೆಯ ಒಳಗೆ ಶಮಿ ಗಿಡ ನೆಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಮನೆಯಲ್ಲಿ ದಕ್ಷಿಣ, ಪೂರ್ವ, ಈಶಾನ್ಯ ಈ ಮೂರು ದಿಕ್ಕುಗಳಲ್ಲಿ ಒಂದು ಕಡೆ ನೆಡಬೇಕು.

ಶನಿದೇವರಿಗೆ ಪ್ರಿಯವಾಗಿರುವ ಈ ಗಿಡವನ್ನು ಶನಿವಾರದ ದಿನ ನೆಡುವುದರಿಂದ ಶುಭಫಲ ದೊರೆಯುತ್ತದೆ. ಜೊತೆಗೆ, ದಸರಾ ಹಬ್ಬದ ದಿನ ಈ ಗಿಡ ನೆಡುವುದರಿಂದ ಅದೃಷ್ಟ ನಿಮ್ಮದಾಗುತ್ತದೆ. ಈ ಗಿಡವನ್ನು ಶನಿವಾರ ಮಾತ್ರ ನೆಡುವುದು ಒಳ್ಳೆಯದು, ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯೊಳಗೆ ನೆಡಬಾರದು, ಕತ್ತಲು ಬರುವ ಕರೆ ನೆಡಬಾರದು, ಶನಿವಾರದ ದಿನ ಶಮಿ ಗಿಡಕ್ಕೆ ದೀಪ ಹಚ್ಚಬೇಕು. ಶಮಿ ಗಿಡ ನೆಟ್ಟು ಹಾಗೆಯೇ ಬಿಡಬಾರದು, ಆಗಾಗ ಪೂಜೆ ಮಾಡಬೇಕು. ಶಿವನಿಗೂ ಇದು ಪ್ರಿಯವಾದ ಗಿಡ ಹಾಗಾಗಿ, ಶಿವಪೂಜೆ ಮಾಡುವಾಗ ಇದನ್ನು ಬಳಸಬಹುದು. ಸೋಮವಾರ ಶಿವಲಿಂಗದ ಮೇಲೆ ಶಮಿ ಗಿಡದ ಎಲೆ ಇಟ್ಟು ಪೂಜೆ ಮಾಡಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂದು ನಂಬಿಕೆ ಇದೆ.

Comments are closed.