ರಜನಿಕಾಂತ್ ರವರು ರಿಷಬ್ ಶೆಟ್ಟಿ ರವರನ್ನು ಕರೆಸಿ ಮಾತನಾಡಿದಾದ ಬಳಸಿದ ಭಾಷೆ ಯಾವುದು ಗೊತ್ತೇ?? ರಿಷಬ್ ಬಿಚ್ಚಿಟ್ಟ ಅಸಲಿ ಸತ್ಯ ಏನು ಗೊತ್ತೇ??
ಕಾಂತಾರ, ಈ ಸಿನಿಮಾ ದಿನದಿಂದ ಬೆಳೆಯುತ್ತಲೇ ಹೋಗುತ್ತಿದೆ ಹೊರತು, ಕಾಂತಾರ ಸಿನಿಮಾದ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಬಿಡುಗಡೆ ಆದ ದಿನದಿಂದ ಇಂದಿನವರೆಗೂ ಕಾಂತಾರ ಕ್ರೇಜ್ ಹೆಚ್ಚುತ್ತಲೆ ಇದೆ. ದಿನದಿಂದ ಸಿನಿಮಾ ನೋಡುವ ಸಿನಿಪ್ರಿಯರು ಜಾಸ್ತಿ ಆಗುತ್ತಲೇ ಇದ್ದಾರೆ. ನಮ್ಮ ಕನ್ನಡ ಸಿನಿಮಾಗೆ ವರ್ಲ್ಡ್ ವೈಡ್ ರೆಕಗ್ನಿಶನ್ ಸಿಗುತ್ತಿರುವುದು ಕನ್ನಡಿಗರಾಗಿ ನಮಗೆ ಹೆಮ್ಮೆ ತರುವ ವಿಷಯ ಆಗಿದೆ. ಕನ್ನಡದ ಕಾಂತಾರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಡಬ್ ಆಗಿ, ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಾಣುತ್ತಿದೆ.
ಸ್ಟಾರ್ ಕಲಾವಿದರೆಲ್ಲರು ಕಾಂತಾರ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿರುವವುದು ಸಂತೋಷದ ವಿಷಯ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ ಅವರು ಎರಡು ಸಾರಿ ಕಾಂತಾರ ಸಿನಿಮಾ ನೋಡಿ, ಮತ್ತೊಮ್ಮೆ ನೋಡಲು ಸಿದ್ಧ ಎಂದಿದ್ದರು. ತಮಿಳು ನಟರಾದ ಧನುಷ್, ಕಾರ್ತಿ ಅವರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಹ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ, ಸೂಪರ್ ಸ್ಟಾರ್ ಅವರು ತಮ್ಮ ಬಾಬಾ ಸಿನಿಮಾ ಡೈಲಾಗ್ ಮೂಲಕ ಕಾಂತಾರ ಸಿನಿಮಾಗೆ ಮೆಚ್ಚುಗೆ ನೀಡಿದ್ದರು. ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಕೂಡ ಮಾಡಿದ್ದರು.

ಜೊತೆಗೆ ರಿಷಬ್ ಶೆಟ್ಟಿ ಅವರಿಗೆ ಒಂದು ಚಿನ್ನದ ಚೈನ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇನ್ನು ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡಿದರು ಎನ್ನುವ ಕುತೂಹಲ ಜನರಿಗೆ ಇತ್ತು, ಟ್ವಿಟರ್ ನಲ್ಲಿ ನೆಟ್ಟಿಗರೊಬ್ಬರು ರಜನಿಕಾಂತ್ ಅವರು ರಿಷಬ್ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡಿದರು ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರವಾಗಿ ಕನ್ನಡದಲ್ಲಿ ಎಂದು ಹೇಳಿದ್ದಾರೆ ರಿಷಬ್ ಶೆಟ್ಟಿ. ಇದನ್ನು ಕೇಳಿ, ನೆಟ್ಟಿಗರು ಬಹಳ ಸಂತೋಷ ಪಟ್ಟಿದ್ದಾರೆ. ಇಷ್ಟು ವರ್ಷವಾಗಿದ್ದರು ರಜನಿಕಾಂತ್ ಅವರು ಕನ್ನಡಕ್ಕೆ ಕೊಡುವ ಗೌರವ ನಿಜಕ್ಕೂ ಮೆಚ್ಚುವಂಥದ್ದು.
ಕನ್ನಡದಲ್ಲಿ
— Rishab Shetty (@shetty_rishab) October 29, 2022