ಕಣ್ಮರೆಯಾಗಿದ್ದ ಶಮಂತ್ ಗೌಡ ರವರಿಗೆ ಭಾಗ್ಯ ಲಕ್ಷ್ಮಿಯಲ್ಲಿ ನಟನೆ ಮಾಡಲು ಒಂದು ಎಪಿಸೋಡಿಗೆ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ?
ಬಿಗ್ ಬಾಸ್ ಕನ್ನಡ ಈ ಹಿಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದ ಸ್ಪರ್ಧಿಗಳಲ್ಲಿ ಒಬ್ಬರು ಶಮಂತ್. ನಿರ್ದೇಶಕನಾಗಿ ಸಿಂಗರ್ ಆಗಿ ಗುರುತಿಸಿಕೊಂಡಿದ್ದ ಶಮಂತ್ ಅವರು ಬಿಗ್ ಬಾಸ್ ಮನೆಗೆ ಬಂದು ಇನ್ನು ಹೆಚ್ಚು ಫೇಮಸ್ ಆದರು. ಇದೀಗ ಶಮಂತ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಶಮಂತ್. ಇವರಿಗೆ ಇದು ಮೊದಲ ಧಾರವಾಹಿ ಆಗಿದೆ. ಈ ಮೂಲಕ ನಟನೆಯಲ್ಲಿ ಹೊಸ ಜರ್ನಿ ಶುರು ಮಾಡುತ್ತಿದ್ದಾರೆ ಶಮಂತ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ, ನಿರೂಪಕಿ ಸುಷ್ಮಾ 10 ವರ್ಷಗಳ ಬಳಿಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ, ಪದ್ಮಜಾ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಬ್ರೋ ಗೌಡ ಶಮಂತ್ ಈ ಧಾರವಾಹಿಯಲ್ಲಿ ಸಿಂಗರ್ ಸೆಲೆಬ್ರಿಟಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಶಮಂತ್ ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿರುವ ಕಾರಣ ಬೇಗ ಒಪ್ಪಿಕೊಂಡರಂತೆ ಶಮಂತ್. ಧಾರವಾಹಿಯಲ್ಲಿ ಶಮಂತ್ ಅವರ ಪಾತ್ರ ಅಮ್ಮನ ಮುದ್ದಿನ ಮಗ, ಸಿಂಗರ್, ಕುಟುಂಬದಲ್ಲಿ ಎಲ್ಲರ ಜೊತೆಗೂ ನಗುನಗುತ್ತಾ ಚೆನ್ನಾಗಿರುವ ಹುಡುಗ..

ಎಲ್ಲರಿಗು ಬೇಕಾದ ಹುಡುಗ, ರಿಲೇಶನ್ಷಿಪ್ ನಲ್ಲಿರುವ ಒಂದು ಅಂಶ ಬಿಟ್ಟು ಇನ್ನೆಲ್ಲವು ನಾನು ನಿಜ ಜೀವನದಲ್ಲಿ ಇರುವ ಹಾಗೆಯೇ ಇದೆ ಎಂದು ಶಮಂತ್ ಅವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಧಾರವಾಹಿ ಶುರುವಾದ ನಂತರ ಶಮಂತ್ ಅವರ ಪಾತ್ರಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜನರು ಶಮಂತ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಸಾರಿ ನಟಿಸುತ್ತಿದ್ದರು ಕೂಡ ಶಮಂತ್ ಅವರ ಅಭಿನಯ ಬಹಳ ಚೆನ್ನಾಗಿದೆ ಎನ್ನುತ್ತಿದ್ದಾರೆ ಕಿರುತೆರೆ ವೀಕ್ಷಕರು. ಶಮಂತ್ ಅವರಿಗೆ ಈ ಧಾರವಾಹಿಯಲ್ಲಿ ನಟಿಸಲು ನೀಡುತ್ತಿರುವ ಸಂಭಾವನೆ ಎಷ್ಟು ಎನ್ನುವ ಕುತೂಹಲ ಜನರಲ್ಲಿ ಮೂಡಿದ್ದು, ಶಮಂತ್ ಅವರಿಗೆ ಒಂದು ಎಪಿಸೋಡ್ ಗೆ 12 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.