ಸುಖ ಸುಮ್ಮನೆ ವಿವಾದ ಮಾಡಲು ತರಲೆ ಪ್ರಶ್ನೆ ಕೇಳಿದ ನಿರೂಪಕನಿಗೆ ಖಡಕ್ ಉತ್ತರ ಕೊಟ್ಟ ಯಶ್. ಹೇಳಿದ್ದೇನು ಗೊತ್ತೇ??
ನಟ ಯಶ್ ಅವರು ಇಂದು ಇಂಟರ್ನ್ಯಾಷನಲ್ ಲೆವೆಲ್ ಸೆಲೆಬ್ರಿಟಿ, ಅವರನ್ನು ದೇಶಾದ್ಯಂತ ಹಲವು ಕಾರ್ಯಕ್ರಮಗಳಿಗೆ ಕರೆಯಲಾಗುತ್ತದೆ. ಇದೀಗ ಇಂಡಿಯಾ ಟುಡೇ ವಾಹಿನಿಯ್ ಖ್ಯಾತ ನಿರೂಪಕ ರಾಜ್ ದೀಪ್ ಸರ್ ದೇಸಾಯಿ ಅವರ ಟುಡೇ ಕಾನ್ ಕ್ಲೇವ್ ಕಾರ್ಯಕ್ರಮಕ್ಕೆ ನಟ ಯಶ್ ಅವರನ್ನು ವಿಶೇಷ ಅತಿಥಿಯಾಗಿ ಕರೆಸಲಾಗಿದ್ದು, ಯಶ್ ಅವರ ಜೊತೆಗೆ ಅನೇಕ ವಿಚಾರಗಳನ್ನು ಚರ್ಚೆ ಮಾಡಿರುವ ರಾಜ್ ದೀಪ್ ಒಂದು ವಿವಾದಾತ್ಮಕ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಯಶ್ ಅವರು ಕೊಟ್ಟಿರುವ ಉತ್ತರಕ್ಕೆ ಚಪ್ಪಾಳೆ ಸಿಕ್ಕಿದೆ.
ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಯಶ್ ಅವರು, ಈಗ ಸ್ಯಾಂಡಲ್ ವುಡ್, ಬಾಲಿವುಡ್ ಅನ್ನೋದನ್ನ ಬಿಟ್ಟು ಇಂಡಿಯನ್ ಸಿನಿಮಾ ಎಂದು ಕರೆಯುವ ಹಂತಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನೀವು ಒಬ್ಬ ಕನ್ನಡಿಗ ಎಂದು ಹೇಳಲು ಹೆಮ್ಮೆ ಪಡ್ತೀರಾ ಅಥವಾ ಭಾರತೀಯ ಎಂದು ಹೇಳಲು ಹೆಮ್ಮೆ ಪಡುತ್ತೀರಾ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸಿರುವ ಯಶ್, ನಾನು ಕನ್ನಡಿಗ ಅದನ್ನ ಯಾರು ನದಲಾಯಿಸೋದಕ್ಕೆ ಆಗಲ್ಲ. ನಾನೊಬ್ಬ ಕನ್ನಡಿಗ, ನಾನು ಭಾರತೀಯ ಎಂದು ನನಗೆ ಹೆಮ್ಮೆ ಇದೆ..” ಎಂದು ಹೇಳಿದ್ದಾರೆ ನಟ ಯಶ್. ಇಷ್ಟೇ ಅಲ್ಲದೆ, ರಾಜ್ ದೀಪ್ ಅವರು ಕೆಜಿಎಫ್2 ಸಿನಿಮಾ ಮ್ಯಾನರಿಸಮ್ ತೋರಿಸಲು ಯಶ್ ಅವರನ್ನು ಒತ್ತಾಯಿಸಿದರು. ಆಗ ಯಶ್ ಅವರು ಇದನ್ನು ನೀವು ಮಾಡಿ ಎಂದರು.

ಅದೇ ರೀತಿ ರಾಜ್ ದೀಪ್ ಮತ್ತು ಅವರ ಸಹೋದ್ಯೋಗಿ, ರಾಕಿ ಭಾಯ್ ಸ್ಟೈಲ್ ನಲ್ಲಿ ಆಕ್ಟ್ ಮಾಡಿದ್ದಾರೆ. ಇದೆಲ್ಲವನ್ನು ಹೊರತುಪಡಿಸಿ, ಬೆಳಗಾವಿ ಬಗ್ಗೆ ವಿವಾದಾತ್ಮಕ ಪ್ರಶ್ನೆ ಕೇಳಿದರು ರಾಜ್ ದೀಪ್, “ನಾನೊಬ್ಬ ಮರಾಠಿಗ, ನಾನು ಮಗಾರಾಷ್ಟ್ರದವನು, ನಮಗೆ ಬೆಳಗಾವಿ ಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ, ಇದರ ಬಗ್ಗೆ ನಂತರ ಪ್ರತ್ಯೇಕವಾಗಿ ಮಾತನಾಡೋಣ ಎಂದರು, ಆಗ ಯಶ್ ಅವರು, “ಈ ವೇದಿಕೆಯಲ್ಲಿ ರಾಜಕೀಯವನ್ನು ತರೋದು ಬೇಡ. ನಮಗೆ ಇನ್ನೊಂದು ದೇಶ ಬೇಕು ಎಂದು ನಾವು ಒತ್ತಾಯ ಮಾಡುತ್ತಾ ಇರೋದು ನಿಮಗೆ ನೆನಪಿರಲಿ..”ಎಂದಿದ್ದಾರೆ. ಮಹಾರಾಷ್ಟ್ರ, ಬೆಳಗಾವಿ ವಿವಾದ ನಡೆಯುತ್ತಿರುವಾಗ. ಯಶ್ ಅವರ ಈ ಮಾತುಗಳು ಕನ್ನಡಿಗರಿಗೆ ಬಹಳ ಇಷ್ಟವಾಗಿದೆ.