Neer Dose Karnataka
Take a fresh look at your lifestyle.

Cricket News: ಸೂರ್ಯ ರವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿ, ಸೆಹ್ವಾಗ್ ಹೇಳಿದ್ದೇನು ಗೊತ್ತೇ??

1,465

ನಿನ್ನೆ ನಡೆದ ಭಾರತ ವರ್ಸಸ್ ಜಿಂಬಾಬ್ವೆ ಪಂದ್ಯದಲ್ಲಿ ಭಾರತ ತಂಡ 71 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ನಿನ್ನೆಯ ಪ್ಯಾಟಿಂಗ್ ನಲ್ಲಿ ಕೆ.ಎಲ್.ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರು ಸ್ಫೋಟಕವಾಗಿ ಆಡಿದರು. ವಿಶೇಷವಾಗಿ ಸೂರ್ಯಕುಮಾರ್ ಯಾದವ್ ಅವರು ಕೇವಲ 25 ಎಸೆತಗಳಲ್ಲಿ ಭರ್ಜರಿ 61 ರನ್ ಭಾರಿಸಿ, ಅಜೇಯರಾಗಿ ಉಳಿದರು. ಸೂರ್ಯ ಇದ್ದರೆ, ಯಾವುದೇ ಟೆನ್ಷನ್ ಇಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿದರು. ಈ ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಸೂರ್ಯಕುಮಾರ್ ಯಾದವ್ ಅವರೇ ಆಗಿದ್ದಾರೆ.

5 ಪಂದ್ಯಗಳಲ್ಲಿ ಮೂರು ಅರ್ಧಶತಕ ಭಾರಿಸಿರುವ ಸೂರ್ಯ ಅವರು, ಒಟ್ಟು 225 ರನ್ ಸಿಡಿಸಿದ್ದಾರೆ, ಇವರ ಸ್ಟ್ರೈಕ್ ರೇಟ್ 193 ಇದೆ. ಸೂರ್ಯಕುಮಾರ್ ಯಾದವ್ ಅವರ ಈ ಅತ್ಯುತ್ತಮ ಫಾರ್ಮ್ ಭಾರತ ತಂಡಕ್ಕೆ ಬಹಳ ಸಹಾಯ ಆಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಸೂರ್ಯಕುಮಾರ್ ಯಾದವ್ ಅವರ ಈ ಅದ್ಭುತ ಆಟದ ಶೈಲಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲರೂ ಇವರನ್ನು ಮಿಸ್ಟರ್ 360 ಎಂದು ಕರೆಯಲು ಶುರು ಮಾಡಿದ್ದಾರೆ. ಎಲ್ಲಾ ಕ್ರಿಕೆಟ್ ಲೆಜೆಂಡ್ ಗಳು ಸೂರ್ಯ ಅವರ ಆಟವನ್ನು ಹೊಗಳುತ್ತಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್ ನೋಡಿ, ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಸಹ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ, “ಸೂರ್ಯಕುಮಾರ್ ಯಾದವ್ (SKY) ವಿಶೇಷವಾಗಿದ್ದಾರೆ. ಸೂರ್ಯಕುಮಾರ್ ಯಾದವ್ (SKY) ಅವರು ಲಿಮಿಟ್ ಲೆಸ್ ಆಗಿದ್ದಾರೆ..ಅವರ ಬ್ರಿಲಿಯಂಟ್ ಪ್ರದರ್ಶನ ನೋಡುವುದು ಕಣ್ಣಿಗೆ ಒಂದು ಬ್ಯಾಟಿಂಗ್ ಟ್ರೀಟ್ ಆಗಿರುತ್ತದೆ..” ಎಂದು ಟ್ವೀಟ್ ಮಾಡಿದ್ದಾರೆ ವೀರೇಂದ್ರ ಸೆಹ್ವಾಗ್.

Leave A Reply

Your email address will not be published.