Kannada News: ಶಿವಣ್ಣ ರವರು ಇಷ್ಟು ದಿನ ಆದ್ರೂ ಕಾಂತಾರ ಸಿನಿಮಾ ನೋಡಿಲ್ಲ ಯಾಕೆ ಗೊತ್ತೇ?? ಕಾರಣ ನೀಡಿ ಹೇಳಿದ್ದೆ ಬೇರೆ.
ಕಾಂತಾರ ಸಿನಿಮಾದ ಯಶಸ್ಸು, ಕ್ರೇಜ್ ಇಂದಿಗೂ ಸ್ವಲ್ಪವು ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗಿ 6 ವಾರ ಕಳೆದಿದ್ದರು ಸಹ, ಸಿನಿಮಾ ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಅಥವಾ ಕರ್ನಾಟಕ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ, ಬೇರೆ ಊರುಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾಂತಾರ ಹವಾ ಕಡಿಮೆಯಾಗಿಲ್ಲ. ಈಗಾಗಲೇ 300 ಕೋಟಿ ಗಳಿಸಿ ಮುನ್ನುತ್ತಿದೆ ಕಾಂತಾರ, ಶೀಘ್ರದಲ್ಲೇ ಕಾಂತಾರ ಸಿನಿಮಾ 250 ಕೋಟಿ ಕ್ಲಬ್ ಸೇರುವುದು ಖಚಿತ.

ಕಾಂತಾರ ಸಿನಿಮಾವನ್ನು ದೇಶಾದ್ಯಂತ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರರಂಗದ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದರು. ತಮಿಳು ನಟ ಕಾರ್ತಿ ಅವರು ಕಾಂತಾರ ನೋಡಿ ರಿಷಬ್ ಅವರನ್ನು ಕರೆಸಿ ಅಭಿನಂದಿಸಿದರು, ಇನ್ನು ತೆಲುಗಿನ ಖ್ಯಾತ ನಟ ಪ್ರಭಾಸ್ ಅವರು ಎರಡು ಸಾರಿ ಸಿನಿಮಾ ನೋಡಿ ಅಭಿನಂದಿಸಿದರು. ಆದರೆ ನಮ್ಮ ಕನ್ನಡದ ಖ್ಯಾತ ಹಿರಿಯನಟ ಶಿವರಾಜ್ ಕುಮಾರ್ ಅವರೇ ಕಾಂತಾರ ಸಿನಿಮಾ ನೋಡಿರಲಿಲ್ಲ. ಶಿವಣ್ಣ ಯಾಕೆ ಸಿನಿಮಾ ನೋಡಿಲ್ಲ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅವುಗಳಿಗೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ.

ಪವನ್ ಒಡೆಯರ್ ನಿರ್ದೇಶನ ಮಾಡಿರುವ ರೇಮೋ ಸಿನಿಮಾ ಟ್ರೈಲರ್ ಲಾಂಚ್ ಗೆ ಬಂದಿದ್ದ ಶಿವಣ್ಣ, ರೆಮೋ ಸಿನಿಮಾ ಟ್ರೈಲರ್ ಹೊಗಳಿ, ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ, ರಿಷಬ್ ಶೆಟ್ಟಿಗೆ ನಾನು ಕರೆ ಮಾಡಿ ವಿಶ್ ಮಾಡಿದ್ದೇನೆ, ಕನ್ನಡ ಸಿನಿಮಾಗಳು ಈಗ ತುಂಬಾ ಚೆನ್ನಾಗಿ ಹೋಗ್ತಾ ಇದೆ. ಸಿಂಗಾರ ಸಿರಿಯೇ ಹಾಡು ನನ್ನನ್ನ ತುಂಬಾ ಕಾಡ್ತಾ ಇದೆ. ಶೂಟಿಂಗ್ ಜಾಸ್ತಿ ಇದ್ದಿದ್ರಿಂದ ಕಾಂತಾರ ಸಿನಿಮಾ ನೋಡೋದಕ್ಕೆ ಆಗಿಲ್ಲ. ಇನ್ನೆರಡು ದಿನಗಳಲ್ಲಿ ನೋಡ್ತೀನಿ ಎಂದಿದ್ದಾರೆ ಶಿವಣ್ಣ. ಈ ಮೂಲಕ ತಾವು ಯಾಕೆ ಇನ್ನು ಕಾಂತಾರ ನೋಡಿಲ್ಲ ಎಂದು ತಿಳಿಸಿದ್ದಾರೆ.