ಬಿಗ್ ಬಾಸ್ ಶೇಕ್ ಮಾಡಲು ಸೋನು ಬದಲಿಗೆ ಮತ್ತೊಬ್ಬರನ್ನು ಕಳುಹಿಸಿದ ಬಿಗ್ ಬಾಸ್. ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿರುವ ಕಿಲಾಡಿ ಯಾರು ಗೊತ್ತೇ??
ಬಿಗ್ ಬಾಸ್ ಕನ್ನಡ ಸೀಸನ್ 9 ದಿನೇ ದಿನೇ ರಂಗೇರುತ್ತಿದೆ. ಈ ಸೀಸನ್ ನಲ್ಲಿ ಸ್ಪರ್ಧಿಗಳು 6 ವಾರ ಕಳೆದಿದ್ದು, 7ನೇ ವಾರಕ್ಕೆ ಕಾಲಿಟ್ಟಿದ್ದಾರೆ. 6ನೇ ವಾರ ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆಗಿದ್ದು, ಬಿಗ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ ಆಗುವ ಸಮಯ ಇದಾಗಿದೆ. ಇಷ್ಟು ದಿವಸಗಳ ಕಾಲ ಬಿಗ್ ಬಾಸ್ ಓಟಿಟಿಯಲ್ಲಿ ಮಿಂಚಿದ್ದ ಸೋನು ಗೌಡ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ವಿಚಾರವೇ ಬೇರೆ ಆಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಡುವುದು ಬೇರೆ ಸ್ಪರ್ಧಿ ಎಂದು ಹೇಳಲಾಗುತ್ತಿದೆ.
ಸೋನು ಶ್ರೀನಿವಾಸ್ ಗೌಡ ಓಟಿಟಿ ಸೀಸನ್ ನಲ್ಲಿ ಭಾರಿ ಸುದ್ದಿಯಾಗಿದ್ದರು, ಇವರು ಕೊಡುತ್ತಿದ್ದ ಹಾವಳಿ, ಮಾಡುತ್ತಿದ್ದ ಕಮೆಂಟ್ಸ್ ಗಳು, ಆಡುತ್ತಿದ್ದ ಮಾತುಗಳು, ಇದೆಲ್ಲವೂ ಕೂಡ ಸೋನು ಗೌಡ ಖಂಡಿತವಾಗಿ ಬಿಗ್ ಬಾಸ್ ಟಿವಿ ಸೀಸನ್ ಗೆ ಎಂಟ್ರಿ ಕೊಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸೋನು ಫಿನಾಲೆ ಸಮಯದಲ್ಲಿ ಎಲಿಮಿನೇಟ್ ಆಗಿದ್ದರು. ನಂತರ ಬಿಗ್ ಬಾಸ್ ಮನೆ ಬಿಕೊ ಎನ್ನುತ್ತಿರುವುದರಿಂದ ಸೋನು ಗೌಡ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಳಿಸಲಾಗುತ್ತದೆ ಎಂದು ಹೇಳಲಾಗಿತ್ತು, ಇದಕ್ಕಾಗಿ ಬಿಗ್ ಬಾಸ್ ತಂಡ ಸಿದ್ಧತೆಗಳನ್ನು ಸಹ ಮಾಡಿಕೊಂಡಿತ್ತು ಎನ್ನಲಾಗಿದೆ.

ಆದರೆ ಸೋನು ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಬಿಗ್ ನಾಸ್ ಮನೆಯೊಳಗೆ ಹೋಗಲು ಆಗುವುದಿಲ್ಲ ಎಂದಿದ್ದಾರಂತೆ. ಹಾಗಾಗಿ ಬಿಗ್ ಬಾಸ್ ಮನೆಯೊಳಗೆ ಮತ್ತೊಬ್ಬ ಸ್ಪರ್ಧಿಯನ್ನು ಕಳಿಸಲು ತಂಡ ಸಿದ್ಧವಾಗಿದ್ದು, ಹಿಂದಿನ ಸೀಸನ್ ನಲ್ಲಿ ಬಂದು, ವಿವಾದ ಜಗಳಗಳಿಂದಲೇ ಗುರುತಿಸಿಕೊಂಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಕಳಿಸಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಇದು ನಿಜವೋ ಸುಳ್ಳೋ ಎಂದು ಇನ್ನು ತಿಳಿದುಬಂದಿಲ್ಲ. ಇನ್ನೇನು ಈ ವಿಚಾರದ ಬಗ್ಗೆ ನಿಜವಾದ ವಿಷಯ ಗೊತ್ತಾಗಲಿದೆ.