ನಟಿಯಾಗಿ ಪಾದಾರ್ಪಣೆ ಮಾಡಲು ಸಿದ್ದವಾದ ಅಲ್ಲೂ ಅರ್ಜುನ್ ಪತ್ನಿ ಸ್ನೇಹ; ಕೇಳಿದ ಸಂಭಾವನೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.
ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಬಗ್ಗೆ ವಿಶೇಷ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅಲ್ಲು ಕುಟುಂಬದ ಸೊಸೆಯಾಗಿ, ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಸದ್ಯದಲ್ಲೇ ಸ್ನೇಹ ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಲ್ಲು ಸ್ನೇಹಾ ರೆಡ್ಡಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಕ್ರೇಜ್ ಇದೆ, ಆಗಾಗ ತಮ್ಮ ಮಕ್ಕಳ ವಿಡಿಯೋಗಳನ್ನು ಶೇರ್ ಮಾಡುವುದು ಮಾತ್ರವಲ್ಲದೆ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸಹ ಶೇರ್ ಮಾಡುತ್ತಾರೆ. ಇತ್ತೀಚೆಗೆ ಸ್ನೇಹಾ ರೆಡ್ಡಿ ತಮ್ಮ ಟ್ರೆಂಡಿ ಫೋಟೋಶೂಟ್ ಗಳಿಂದ ಸುದ್ದಿಯಲ್ಲಿದ್ದಾರೆ. ಸ್ಟೈಲಿಂಗ್ ಮತ್ತು ಡ್ರೆಸ್ಸಿಂಗ್ ಎರಡರಲ್ಲೂ ತಮ್ಮ ಪತಿಗೆ ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದ್ದಾರೆ ಸ್ನೇಹ.
ಇದರಿಂದ ಸ್ನೇಹ ಅವರು ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗಷ್ಟೇ ಸ್ನೇಹಾ ಅವರಿಗೆ ಮಲಯಾಳಂ ಇಂಡಸ್ಟ್ರಿಯಿಂದ ಸಿನಿಮಾ ಆಫರ್ ಬಂದಿದ್ದು, ದೊಡ್ಡ ನಟನ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅವರ ಪತ್ನಿಗೆ ನಿಜವಾಗಿಯೂ ನಟನೆಯಲ್ಲಿ ಆಸಕ್ತಿ ಇದೆಯಾ ಎನ್ನುವುದು ಗೊತ್ತಿಲ್ಲ, ಆದರೆ ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲು ಸ್ನೇಹಾ ರೆಡ್ಡಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇದ್ದಾರೆ. ಮದುವೆಗಿಂತ ಮೊದಲು ಸಿನಿಮಾ ಹಿನ್ನೆಲೆ ಇಲ್ಲದೆ ಹೋದರು, ಇನ್‌ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ ಸ್ನೇಹ. ಈಗ ಸಾಕಷ್ಟು ಫೋಟೋಶೂಟ್ ಮಾಡುತ್ತಿರುವುದರಿಂದ ನಟನೆಯಲ್ಲಿ ಆಸಕ್ತಿ ಇದೆ ಎನ್ನುತ್ತಿದ್ದಾರೆ ಕೆಲವರು.