Neer Dose Karnataka
Take a fresh look at your lifestyle.

ಕೊಹ್ಲಿ ರವರಿಗೆ ಗುರುವಾರ ಸೈಲೆಂಟ್ ಆಗಿರು ಎಂದ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್. ಯಾಕಂತೆ ಗೊತ್ತೇ??

11,949

ವಿರಾಟ್ ಕೋಹ್ಲಿ ಅವರು ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದರು. ಆದರೆ ಇತ್ತೀಚೆಗೆ ನಡೆದ ಏಷ್ಯಾಕಪ್ ನಲ್ಲಿ ಸೆಂಚುರಿ ಭಾರಿಸುವ ಮೂಲಕ ಮೂಲಕ ವಿರಾಟ್ ಅವರು ಫಾರ್ಮ್ ಗೆ ಮರಳಿದರು. ಟಿ20 ವಿಶ್ವಕಪ್ ನಲ್ಲಿ ಕೋಹ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಾ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಒಳ್ಳೆಯ ಸಮಯದಲ್ಲಿ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿರುವುದು ಬಹಳ ಒಳ್ಳೆಯ ವಿಷಯ ಆಗಿದೆ. ಈ ವರ್ಷ ಟಿ20 ವಿಶ್ವಕಪ್ ಗೆಲ್ಲಲು ಇನ್ನು ಉಳಿದಿರುವುದು ಎರಡು ಹೆಜ್ಜೆಗಳು. ಭಾರತ ತಂಡ ಅತಿಹೆಚ್ಚು ಪಾಯಿಂಟ್ಸ್, 8 ಪಾಯಿಂಟ್ಸ್ ಪಡೆದು, ಅಗ್ರಸ್ಥಾನದಲ್ಲಿ ಸೆಮಿಫೈನಲ್ಸ್ ತಲುಪಿದೆ.

ನಾಳೆ ಭಾರತ ತಂಡ ಸೆಮಿಫೈನಲ್ಸ್ ಪಂದ್ಯವಾಡಲಿದೆ. ಸೆಮಿಫೈನಲ್ಸ್ ತಲುಪಿರುವ ಭಾರತ ತಂಡ ನಾಳೆಯ ಪಂದ್ಯಕ್ಕಾಗಿ ಈಗಾಗಲೇ ಅಡಿಲೇಡ್ ತಲುಪಿ ಅಭ್ಯಾಸ ಶುರು ಮಾಡಿದೆ. ಅದರಲ್ಲೂ ವಿರಾಟ್ ಕೋಹ್ಲಿ ಅವರು ಭರದಿಂದ ಅಭ್ಯಾಸ ನಡೆಸುತ್ತಿದ್ದು, ಈ ಹಿಂದಿನ ಪಂದ್ಯಗಳಲ್ಲೂ ಕೂಡ ಸೆಮಿಫೈನಲ್ಸ್ ಹಾಗೆ ಅತ್ಯುತ್ಯಮ ಪ್ರದರ್ಶನ ನೀಡಲು, ಕ್ರಿಕೆಟ್ ಬ್ಯಾಟಿಂಗ್ ನಲ್ಲಿರುವ ಎಲ್ಲಾ ಬಗೆಯ ಶಾಟ್ ಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿರಾಟ್ ಅವರು ಸತತವಾಗಿ ಬಿರುಸಿನ ಅಭ್ಯಾಸ ಮಾಡುತ್ತಿರುವುದು, ಎದುರಾಳಿ ತಂಡಕ್ಕೆ ಭಯ ತಂದಿರುವುದಂತು ನಿಜ. ಇದರಿಂದ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅವರು ಎಲ್ಲರೂ ಶಾಕ್ ಆಗುವಂತ ಒಂದು ಹೇಳಿಕೆಯನ್ನು ನೀಡಿದ್ದಾರೆ.

ವಿರಾಟ್ ಕೋಹ್ಲಿ ನನ್ನ ಆತ್ಮೀಯ ಸ್ನೇಹಿತರು, ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ಕೋಹ್ಲಿ ಅವರು ಈಗ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಾನು ನಿನ್ನನ್ನು ಎಷ್ಟು ಇಷ್ಟಪಡುತ್ತೇನೆ ಎಂದು ನಿನಗೆ ಗೊತ್ತಿದೆ. ಆದರೆ ಗುರುವಾರ ಮಾತ್ರ ನೀನು ಸೈಲೆಂಟ್ ಆಗಿರು.., ಚಿಲ್ ಆಗಿರು..ಎಂದಿದ್ದಾರೆ ಕೆವಿನ್ ಪೀಟರ್ಸನ್. ಈ ಮೂಲಕ ವಿರಾಟ್ ಕೋಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್ಸ್ ಗಳಿಸಬಾರದು ಎಂದು ಹೇಳಿದ್ದಾರೆ. ಈಗಾಗಲೇ ವಿಶ್ವಕಪ್ ನಲ್ಲಿ 246 ರನ್ಸ್ ಗಳಿಸಿ, ಮುನ್ನುಗ್ಗುತ್ತಿದ್ದಾರೆ ಕೋಹ್ಲಿ, ಪ್ರಸ್ತುತ ಕೋಹ್ಲಿ ಅವರ ಬಗ್ಗೆ ಕೆವಿನ್ ಪೀಟರ್ಸನ್ ಅವರು ಮಾಡಿರುವ ಈ ಕಮೆಂಟ್ಸ್ ಈಗ ಭಾರಿ ವೈರಲ್ ಆಗಿದೆ.

Leave A Reply

Your email address will not be published.