ಕಾಂತಾರ ಫುಲ್ ಯಶಸ್ಸು ಗಳಿಸಿದ್ದಾಗಿ ಸಂಭಾವನೆ ಕೊಟ್ಟಿದ್ದರೂ, ಇದೀಗ ರಿಷಬ್ ಗೆ ಹೊಂಬಾಳೆ ಫಿಲಂಸ್ ಕೊಟ್ಟ ಹಣ ಎಷ್ಟು ಗೊತ್ತೇ??
ಕಾಂತಾರ ಸಿನಿಮಾದ ಯಶಸ್ಸು, ಕ್ರೇಜ್ ಇಂದಿಗೂ ಸ್ವಲ್ಪವು ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗಿ 6 ವಾರ ಕಳೆದಿದ್ದರು ಸಹ, ಸಿನಿಮಾ ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಅಥವಾ ಕರ್ನಾಟಕ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ, ಬೇರೆ ಊರುಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾಂತಾರ ಹವಾ ಕಡಿಮೆಯಾಗಿಲ್ಲ. ಈಗಾಗಲೇ 300 ಕೋಟಿ ಗಳಿಸಿ ಮುನ್ನುತ್ತಿದೆ ಕಾಂತಾರ, ಶೀಘ್ರದಲ್ಲೇ ಕಾಂತಾರ ಸಿನಿಮಾ ಪುಷ್ಪ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಬ್ರೇಕ್ ಮಾಡುವುದು ಖಂಡಿತ.

ಕಾಂತಾರ ಸಿನಿಮಾವನ್ನು ದೇಶಾದ್ಯಂತ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರರಂಗದ ಸ್ಟಾರ್ ಕಲಾವಿದರು ಕಾಂತಾರ ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದರು. ತಮಿಳು ನಟ ಕಾರ್ತಿ ಅವರು ಕಾಂತಾರ ನೋಡಿ ರಿಷಬ್ ಅವರನ್ನು ಕರೆಸಿ ಅಭಿನಂದಿಸಿದರು, ಇನ್ನು ತೆಲುಗಿನ ಖ್ಯಾತ ನಟ ಪ್ರಭಾಸ್ ಅವರು ಎರಡು ಸಾರಿ ಸಿನಿಮಾ ನೋಡಿ ಅಭಿನಂದಿಸಿದರು, ಇದೀಗ ತೆಲುಗಿನ ಮತ್ತೊಬ್ಬ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಕಾಂತಾರ ನೋಡಿ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು.
ಹೀಗೆ ಎಲ್ಲರ ಮೆಚ್ಚುಗೆ ಗಳಿಸುತ್ತಾ, ಹೊಸ ದಾಖಲೆಗಳನ್ನು ಮಾಡುತ್ತಾ ಮುನ್ನುಗ್ಗುತ್ತಿದೆ ಕಾಂತಾರ ಸಿನಿಮಾ. ಸಿನಿಮಾ ಯಶಸ್ಸಿನಲ್ಲಿ ಬಹುಪಾಲು ರಿಷಬ್ ಶೆಟ್ಟಿ ಅವರದ್ದು ಎನ್ನುವುದು ಸತ್ಯವಾದ ಮಾತು. ಸಿನಿಮಾದ ಕಥೆ, ಸ್ಕ್ರಿಪ್ಟ್, ಡೈಲಾಗ್, ಡೈರೆಕ್ಷನ್ ಎಲ್ಲದರಲ್ಲೂ ಇದ್ದರು ರಿಷಬ್. ಇದೀಗ ಸಿನಿಮಾ ಸೂಪರ್ ಹಿಟ್ ಅಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಕೂಡ ಗಳಿಸುತ್ತಿರುವಾಗ, ಹೊಂಬಾಳೆ ಸಂಸ್ಥೆ ರಿಷಬ್ ಶೆಟ್ಟಿ ಅವರಿಗೆ ಸಕ್ಸಸ್ ನ ಹಣವನ್ನು ನೀಡಿದ್ದು, ಬರೋಬ್ಬರಿ 20 ಕೋಟಿ ರೂಪಾಯಿಯನ್ನು ರಿಷಬ್ ಶೆಟ್ಟಿ ಅವರಿಗೆ ನೀಡಿದೆ ಎಂದು ಮಾಹಿತಿ ಸಿಕ್ಕಿದೆ.
Comments are closed.