Kannada News: ನೀವು ನಿಮ್ಮ ಬೈಕ್ ನಲ್ಲಿ ಅತಿ ಹೆಚ್ಚು ಮೈಲೇಜ್ ಪಡೆಯಬೇಕು ಎಂದರೆ, ಅದೊಂದು ಚಿಕ್ಕ ಕೆಲಸ ಮಾಡಿ ಸಾಕು. ಪೆಟ್ರೋಲ್ ಹಣ ಉಳಿಸಬಹುದು.
Kannada News: ಈಗಿನ ಕಾಲದಲ್ಲಿ ಬೈಕ್ (Bike) ಅಥವಾ ಕಾರ್ (Car) ಖರೀದಿ ಮಾಡುವವರು ಮೊದಲು ಕೇಳುವುದು ಮೈಲೇಜ್ ಬಗ್ಗೆ. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಹೀಗಿರುವಾಗ, ಎಲ್ಲರೂ ಯೋಚನೆ ಮಾಡುವುದು ತಮ್ಮ ಗಾಡಿಗಳಿಗೆ ಪೆಟ್ರೋಲ್ ಹಾಕಿಸಿ ಓಡಿಸಲು, ಮೈಲೇಜ್ ಚೆನ್ನಾಗಿ ಸಿಗಬೇಕು ಎಂದು. ಬೆಂಗಳೂರು (Bangalore) ಮಹಾನಗರದಲ್ಲಿ ಒಂದು ಮನೆಯಲ್ಲಿ ಕನಿಷ್ಠ ಎರಡು ಗಾಡಿಗಳು ಇರುವಾಗ, ಎರಡಕ್ಕೂ ಪೆಟ್ರೋಲ್ ಹಾಕಿಸಿ ಓಡಿಸುವುದು ಕಷ್ಟವಾಗುತ್ತದೆ, ಹಾಗಾಗಿ ಬೈಕ್ ಗಳ ಮೈಲೇಜ್ ಬಹಳ ಮುಖ್ಯವಾಗುತ್ತದೆ.

ತಮ್ಮ ಬೈಕ್ ನ ಮೈಲೇಜ್ ಹೆಚ್ಚಿಸಿಕೊಳ್ಳಲು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಹಲವರಿಗೆ ಬೈಕ್ ನ ಮೈಲೇಜ್ ಹೆಚ್ಚಿಸಲು ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಬೈಕ್ ನಲ್ಲಿ ಉತ್ತಮ ಮೈಲೇಜ್ ಸಿಗಬೇಕು ಎಂದರೆ, ಸರಿಯಾದ ಸ್ಪೀಡ್ ಮತ್ತು ಅರ್ಪಿಎಮ್ (RPM) ನಲ್ಲಿ ಓಡಿಸಬೇಕು. 1 ನಿಮಿಷದಲ್ಲಿ ಯಾಂತ್ರಿಕ ಘಟಕವು ಅದರ ಅಕ್ಷದ ಮೇಲೆ ಎಷ್ಟು ಬಾರಿ ತಿರುಗುತ್ತದೆ ಎನ್ನುವುದು ಆರ್ಪಿಎಮ್ ಆಗಿದೆ. ನಿಮ್ಮ ಬೈಕ್ ನಲ್ಲಿ, 1000 ಇಂದ 10,000 ಆರ್ಪಿಎಮ್ ವರೆಗು ಇರುತ್ತದೆ. ನಿಮ್ಮ ಬೈಕ್ ನ ವೇಗ ಜಾಸ್ತಿಯಾದಷ್ಟು ಆರ್ಪಿಎಮ್ ಜಾಸ್ತಿಯಾಗುತ್ತದೆ. ನಿಮ್ಮ ಬೈಕ್ ನ ಸ್ಪೀಡ್ ಹೆಚ್ಚಾದ ಹಾಗೆ, ಆರ್ಪಿಎಂ ಹೆಚ್ಚಾಗುತ್ತದೆ, ಈ ಮೂಲಕ ಹೆಚ್ಚು ಪವರ್ ಬಳಕೆ ಆಗುತ್ತದೆ. ಇದನ್ನು ಓದಿ.. Cricket News: ಟಿ 20 ನಲ್ಲಿ ಸೋತರು ಭಾರತಕ್ಕೆ ಸಿಗುತ್ತಿದೆ ನೆಮ್ಮದಿಯ ಸುದ್ದಿ: ಅಭಿಮಾನಿಗಳ ನಿರಾಸೆಗೆ ಕೊಂಚ ನಿರಾಳ. ಕೇಳಿ ಬರುತ್ತಿರುವ ಸುದ್ದಿ ಏನು ಗೊತ್ತೇ??

ನಿಮ್ಮ ಬೈಕ್ ಒಳ್ಳೆಯ ಮೈಲೇಜ್ ಕೊಡಬೇಕು ಎಂದರೆ, ನೀವು 1500 ರಿಂದ 3500 ಆರ್ಪಿಎಮ್ ಒಳಗೆ ಬೈಕ್ ಓಡಿಸಬೇಕು. ಹಾಗೆಯೇ ಬೈಕ್ ನ ಸ್ಪೀಡ್ ಸಹ ಸಮವಾಗಿರಬೇಕು. ಇಂದು ಬಹಳ ಸ್ಲೋ ಆಗಿ ಬೈಕ್ ಓಡಿಸಿ, ನಾಳೆ ಸಿಕ್ಕಾಪಟ್ಟೆ ಸ್ಪೀಡ್ ಆಗಿ ಓಡಿಸಿದರೆ, ನಿಮ್ಮ ಬೈಕ್ ಬೇಗ ಹಾಳಾಗುತ್ತದೆ. ಇಂಜಿನ್ (Engine) ಗೆ ಸಮಸ್ಯೆ ಆಗುತ್ತದೆ. ಹಾಗಾಗಿ ದಿನಾ ನೀವು 60 ರಿಂದ 70ರ ಸ್ಪೀಡ್ ನಲ್ಲಿ ಬೈಕ್ ಓಡಿಸುವುದು ಒಳ್ಳೆಯದು ಎಂದು ಹೇಳಲಾಗಿದೆ, ಇದರಿಂದ ಬಹಳ ಸಮಯದವರೆಗೂ ಮೈಲೇಜ್ ಚೆನ್ನಾಗಿರುತ್ತದೆ. ಸ್ಪೀಡ್ ಜೊತೆಗೆ ಗೇರ್ ಚೇಂಜ್ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಒಂದೇ ಗೇರ್ ನಲ್ಲಿ ಹೆಚ್ಚು ಗಾಡಿ ಓಡಿಸಿ, ಬಳಿಕ ಗೇರ್ ಚೇಂಜ್ ಮಾಡಿದರೆ, ಮತ್ತೆ ಹೆಚ್ಚು ಸಮಯ ಅದೇ ಗೇರ್ ನಲ್ಲಿ ಓಡಿಸಿದರೆ ಮೈಲೇಜ್ ಕಡಿಮೆಯಾಗುತ್ತದೆ. ಇದನ್ನು ಓದಿ.. ಬಿಗ್ ನ್ಯೂಸ್: ಪಂದ್ಯ ಸೋತ ಬಳಿಕ ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ ಇಬ್ಬರು ಸ್ಟಾರ್ ಪ್ಲೇಯರ್ಸ್. ನೇರವಾಗಿ ಕೇಳಿಬಂದ ಉತ್ತರ ಏನು ಗೊತ್ತೇ??