Neer Dose Karnataka
Take a fresh look at your lifestyle.

Cricket News: ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಮೇಜರ್ ಸರ್ಜರಿ? ಸೂರ್ಯ, ಕೊಹ್ಲಿ ರವರನ್ನು ಕೂಡ ಬಿಡುವುದಿಲ್ಲವೇ ಬಿಸಿಸಿಐ? ಏನಾಗಿದೆ ಗೊತ್ತೇ??

Cricket News: ಟಿ20 ವಿಶ್ವಕಪ್ (T20 World Cup) ನ ಸೆಮಿಫೈನಲ್ಸ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತು. ಈ ಸೋಲಿನ ನಂತರ ಬಿಸಿಸಿಐ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕು ಎಂದು ನಿರ್ಧಾರ ಮಾಡಿದೆ. 30 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರನ್ನು ಟಿ20 ಫಾರ್ಮೇಟ್ ಪಂದ್ಯಗಳಿಂದ ಹೊರಗಿಡಬೇಕು ಎಂದು ಬಿಸಿಸಿಐ (BCCI)ನಿರ್ಧಾರ ಕೈಗೊಂಡಿರುವ ಹಾಗೆ ತೋರುತ್ತಿದೆ. ಈ ರೀತಿ ಆದರೆ, ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮ (Rohit Sharma) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಮೂವರನ್ನು ಕೂಡ ಟಿ20 ಇಂದ ಹೊರಗಿಡಬೇಕಾಗುತ್ತದೆ.

ಇನ್ನು ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ (Bhuvneshwar Kumar) ಮತ್ತು ಮೊಹಮ್ಮದ್ ಶಮಿ (Mohammad Shami) ಅವರು ಹೊರಬರಬೇಕಾಗುತ್ತದೆ. ಮುಂದಿನ ಟಿ20 ವಿಶ್ವಕಪ್ ಗೆ ಇನ್ನು ಎರಡು ವರ್ಷಗಳ ಸಮಯ ಇದೆ, ಅಷ್ಟರ ಒಳಗೆ ಯುವಕರ ಉತ್ತಮವಾದ ತಂಡ ಕಟ್ಟಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿದೆ. ಆದರೆ ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಹಾಗಾಗಿ ಇವರಿಬ್ಬರನ್ನು ತಂಡದಿಂದ ಹೊರಗಿಟ್ಟರೆ, ಟೀಮ್ ಇಂಡಿಯಾಗೆ ಕಷ್ಟವಾಗುತ್ತದೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ಇದನ್ನು ಓದಿ.. Cricket: ದಿನೇಶ್ ಕಾರ್ತಿಕ್ ರವರ ಫಿನಿಶರ್ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

ಸೂರ್ಯಕುಮಾರ್ ಯಾದವ್ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ, ವಿರಾಟ್ ಅವರ ಇನ್ನಿಂಗ್ಸ್ ಬಗ್ಗೆ ಎರಡನೇ ಮಾತೇ ಇಲ್ಲ. ಈ ರೀತಿ ವಯಸ್ಸಿನ ನಿರ್ಬಂಧನೆ ಹೇರಿದರೆ, ಹಾರ್ದಿಕ್ ಪಾಂಡ್ಯ (Hardik Pandya) ಅವರು ಕೂಡ ಟೀಮ್ ಇಂಡಿಯಾ ಇಂದ ಹೊರಹೋಗಬೇಕಾಗುತ್ತದೆ. ಹಿರಿಯರನ್ನು ತಂಡದಿಂದ ಕೈಬಿಟ್ಟ ಬಳಿಕ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಗೆಲುವು ಸಾಧಿಸಿಲ್ಲ. ಹಾಗಾಗಿ ವಯಸ್ಸಿನ ನಿರ್ಬಂಧನೆ ಹಾಕುವುದಕ್ಕಿಂತ ಆಟಗಾರರು ಫಿಟ್ ಆಗಿದ್ದಾರಾ ಎನ್ನುವುದರ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಿಸಿಸಿಐ ನ ಮುಂದಿನ ನಿರ್ಧಾರ ಏನು ಎಂದು ಈಗ ಕುತೂಹಲ ಶುರುವಾಗಿದೆ. ಇದನ್ನು ಓದಿ..Ramachari: ಧಾರಾವಾಹಿಯಲ್ಲಿ ಬಹು ನಿರೀಕ್ಷಿತ ಅತ್ತಿಗೆ ಅಪರ್ಣ ಪಾತ್ರ ಮುಗಿಯಿತೇ? ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ?

Comments are closed.