Neer Dose Karnataka
Take a fresh look at your lifestyle.

Cricket News: ರೋಹಿತ್, ಪಾಂಡ್ಯ, ಪಂತ್ ಇವರ್ಯಾರು ಬೇಡ. ಈತನನ್ನು ನಾಯಕ ಮಾಡಿದರೆ, ನಿಜಕ್ಕೂ ಒಳ್ಳೆಯದು ಎಂದ ಮುಂಬೈ ಆಟಗಾರ. ಯಾರು ಆ ಆಟಗಾರ ಗೊತ್ತೇ??

Cricket News: ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಸೋತ ನಂತರ ಭಾರತ ತಂಡವು ಈಗ ಬಹಳ ಗಂಭೀರವಾದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಮುಂದಿನ ವಿಶ್ವಕಪ್ ಗೆ ಎರಡು ವರ್ಷ ಸಮಯ ಇರುವಾಗ, ಈಗಿನಿಂದಲೇ ಬ್ಲೂಸ್ಜಿತವಾದ ತಂಡ ಕಟ್ಟಬೇಕು ಎಂದು ಬಿಸಿಸಿಐ ನಿರ್ಧಾರ ಮಾಡಿದ್ದು, ಯುವ ಆಟಗಾರರ ತಂಡ ಕಟ್ಟಲು ಮುಂದಾಗಿದೆ. ಈ ನಿಟ್ಟಿನಲ್ಲಿ, ಮೊದಲಿಗೆ ಕ್ಯಾಪ್ಟನ್ ಸ್ಥಾನ ಬದಲಾಗಲಿದೆ. ಪ್ರಸ್ತುತ ನ್ಯೂಜಿಲೆಂಡ್ ಸೀರೀಸ್ ಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಇವರನ್ನು ಹೊರತುಪಡಿಸಿ, ರಿಷಬ್ ಪಂತ್, ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್ ಇವರು ಕೂಡ ಐಪಿಎಲ್ ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

ಹಾಗಾಗಿ ಈ ಮೂವರು ಕೂಡ ಕ್ಯಾಪ್ಟನ್ ಆಗಬಹುದು ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ಇವರೆಲ್ಲರಿಗಿಂತ ಮತ್ತೊಬ್ಬ ಸ್ಫೋಟಕ ಆಟಗಾರ ಕ್ಯಾಪ್ಟನ್ ಆದರೆ ಒಳ್ಳೆಯದು ಎಂದು ಮುಂಬೈನ ಮಾಜಿ ಆಟಗಾರ ವಿನಾಯಕ್ ಮಾನೆ ಅಭಿಪ್ರಾಯ ಪಟ್ಟಿದ್ದಾರೆ. ಇವರು ಹೇಳಿರುವುದು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ. ಪ್ರಸ್ತುತ ಸೂರ್ಯಕುಮಾರ್ ಯಾದವ್ ಅವರು ಅದ್ಭುತ ಸ್ತಾನದಲ್ಲಿದ್ದಾರೆ. ಟಿ20 ಕ್ರಿಕೆಟ್ ಗೆ ಅಪ್ಪಟ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿದ ಲಿಸ್ಟ್ ನಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದರು ಸೂರ್ಯ ಅವರ ಬ್ಯಾಟಿಂಗ್ ಬಗ್ಗೆ ಹೇಳಲು ಎರಡು ಮಾತುಗಳೇ ಇಲ್ಲ. ಇದನ್ನು ಓದಿ.. Kannada News: ರಾಮಾಚಾರಿ ಪ್ರೇಕ್ಷಕರಿಗೆ ಮನರಂಜನೆಯೂ ಮನರಂಜನೆ: ಅತ್ತಿಗೆ ಪಾತ್ರ ಮುಗಿದ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್? ಏನಾಗುತ್ತಿದೆ ಗೊತ್ತೇ??

ಇಡೀ ವಿಶ್ವವೇ ಅವರನ್ನು ಮೆಚ್ಚಿಕೊಂಡಿದೆ. ಹಾಗಾಗಿ ಸೂರ್ಯಕುಮಾರ್ ಯಾದವ್ ಅವರು ತಂಡದ ನಾಯಕನಾದರೆ ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿನಾಯಕ ಮಾನೆ ಅವರು ಇದರ ಬಗ್ಗೆ ಮಾತನಾಡಿ, “ಹಲವು ವರ್ಷಗಳಿಂದ ನಾನು ಸೂರ್ಯಕುಮಾರ್ ಯಾದವ್ ಅವರನ್ನು ನೋಡಿದ್ದೇನೆ, ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ. ಕಠಿಣ ಸಂದರ್ಭಗಳಲ್ಲಿ ನಾಯಕತ್ವವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುವುದು ನನ್ನ ಭಾವನೆ. ಆದರೆ ಎಲ್ಲವೂ ಆಯ್ಕೆ ಮಾಡುವವರಿಗೆ ಬಿಟ್ಟಿದ್ದು..” ಎಂದು ಹೇಳಿದ್ದಾರೆ. ಇದನ್ನು ಓದಿ.. Cricket News: ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಮೇಜರ್ ಸರ್ಜರಿ? ಸೂರ್ಯ, ಕೊಹ್ಲಿ ರವರನ್ನು ಕೂಡ ಬಿಡುವುದಿಲ್ಲವೇ ಬಿಸಿಸಿಐ? ಏನಾಗಿದೆ ಗೊತ್ತೇ??

Comments are closed.