Neer Dose Karnataka
Take a fresh look at your lifestyle.

IPL 2023 RCB: ಆರ್ಸಿಬಿ ಕೊನೆಗೂ ಸಿಕ್ತು ನೆಮ್ಮದಿಯ ಸಿಹಿ ಸುದ್ದಿ: ಮಿನಿ ಹರಾಜಿಗೂ ಮುನ್ನವೇ ಸಿಹಿ ಸುದ್ದಿ ಘೋಷಣೆ ಮಾಡಿದ ಆರ್ಸಿಬಿ ಕೋಚ್. ಏನು ಗೊತ್ತೆ??

IPL 2023 RCB: ಐಪಿಎಲ್ (IPL) ನಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ತಂಡ ನಮ್ಮ ಆರ್ಸಿಬಿ (RCB) ಈ ತಂಡಕ್ಕೆ ಇರುವಂಥಾ ಕ್ರೇಜ್ ಬೇರೆ ಯಾವ ತಂಡಕ್ಕೂ ಇರೋದಕ್ಕೆ ಸಾಧ್ಯವಿಲ್ಲ. 15 ವರ್ಷಗಳಲ್ಲಿ ಆರ್ಸಿಬಿ ಒಂದು ಸಾರಿ ಕೂಡ ಕಪ್ ಗೆಲ್ಲದೆ ಹೋದರು ಕೂಡ, ಆರ್ಸಿಬಿ ಮೇಲೆ ಅಭಿಮಾನಿಗಳಿಗೆ ನಂಬಿಕೆ ಅಂತೂ ಕಡಿಮೆ ಆಗಿಲ್ಲ. ಮುಂದಿನ ವರ್ಷ 2023ರ ಸೀಸನ್ ನಲ್ಲಿ ಆದರು ಆರ್ಸಿಬಿ ಕಪ್ ಗೆಲ್ಲಬೇಕು ಎನ್ನುವುದೇ ಎಲ್ಲರ ಆಸೆ. ಇದೀಗ ಮುಂದಿನ ಸೀಸನ್ ಶುರುವಾಗುವುದಕ್ಕಿಂತ ಮೊದಲೇ, ಒಂದು ಗುಡ್ ನ್ಯೂಸ್ ಆರ್ಸಿಬಿ ಅಭಿಮಾನಿಗಳಿಗೆ ಸಿಕ್ಜಿದೆ.

ಅದೇನೆಂದರೆ, ಆಸ್ಟ್ರೇಲಿಯಾ ತಂಡದ ಅದ್ಭುತ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಮುಂದಿನ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗಿತ್ತು, ಏಕೆಂದರೆ, ಮ್ಯಾಕ್ಸ್ವೆಲ್ ಅವರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಎಡಗಾಲಿನ ಬೆರಳು ಮೂಳೆ ಮುರಿದುಕೊಂಡಿದ್ದರು. ಅದರಿಂದಾಗಿ ಅವರು ವಿಶ್ವಕಪ್ ಇಂದ ಮತ್ತು ಮುಂಬರುವ ಇಂಗ್ಲೆಂಡ್ ಸೀರೀಸ್ ವಿರುದ್ಧದ ಟೂರ್ನಿಯಿಂದ ಹೊರಗಿದ್ದಾರೆ. ಹಾಗಾಗಿ ಆರ್ಸಿಬಿ ಪರವಾಗಿ ಐಪಿಎಲ್ ನಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆ ಸಹ ಮೂಡಿತ್ತು, ಅದಕ್ಕೆ ಆರ್ಸಿಬಿ ತಂಡದ ಮುಖ್ಯ ಕೋಚ್ ಮೈಕ್ ಹಸನ್ (Mike Hesson) ಅವರು ಉತ್ತರ ಕೊಟ್ಟಿದ್ದಾರೆ.. ಇದನ್ನು ಓದಿ.. Airtel Plan: ಕಡಿಮೆ ಡೇಟಾ ಬಳಸುವವರಿಗಾಗಿ ಕೇವಲ 99 ರುಪಾಯಿಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್. ಪ್ಲಾನ್ ತಿಳಿದರೆ ಈಗಲೇ ರಿಚಾರ್ಜ್ ಮಾಡಿಸುತ್ತಿರಿ.

“ಗ್ಲೆನ್ ಮ್ಯಾಕ್ಸ್ವೆಲ್ ಅವರ ಫಿಟ್ನೆಸ್ ಬಗ್ಗೆ ಸ್ವಲ್ಪ ಆತಂಕ ಆಗಿದ್ದು ನಿಜ. ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಾಗ, ಮ್ಯಾಕ್ಸ್ವೆಲ್ ಅವರು ಕಾಲು ಮುರಿದುಕೊಂಡಿದ್ದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದಕ್ಕೂ ನೆರವಾಗುವ ಆಟಗಾರ ಇದ್ದಾಗ ತಂಡಕ್ಕೆ ಬ್ಯಾಲೆನ್ಸ್ ಸರಿಹೋಗುತ್ತದೆ. ಹಾಗಾಗಿ ನಮ್ಮ ತಂಡಕ್ಕೆ ಮ್ಯಾಕ್ಸ್ವೆಲ್ ಅವರಂತಹ ಆಟಗಾರರ ಅಗತ್ಯವಿದೆ..” ಎಂದಿದ್ದಾರೆ ಮೈಕ್ ಹಸನ್. ಜೊತೆಗೆ ಐಪಿಎಲ್ ಶುರುವಾಗಲು ಇನ್ನು 3 ತಿಂಗಳು ಇರುವುದರಿಂದ ಅಷ್ಟರ ಒಳಗೆ ಮ್ಯಾಕ್ಸ್ವೆಲ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಆರ್ಸಿಬಿಗೆ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಿದ್ದಾರೆ. 2021ಕ್ಕಿಂತ ಮೊದಲು ಆರ್ಸಿಬಿ ತಂಡಕ್ಕೆ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಅವರು ಸ್ಥಿರವಾದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಇದನ್ನು ಓದಿ.. Kannada Astrology: ನಿಮ್ಮ ಆಸೆ ಯಾವುದೇ ಇರಲಿ, ದೇವರು ನೆರವೇರಿಸಬೇಕು ಎಂದರೆ, ಈ ಹೂವು ಅರ್ಪಿಸಿ ಸಾಕು: ದೇವರೇ ಮೆಚ್ಚಿ ಆಸೆ ಈಡೇರಿಸುತ್ತಾನೆ. ಏನು ಗೊತ್ತೆ?

Comments are closed.