Biggboss Kannada: ದಿವ್ಯ ಬಿಗ್ ಬಾಸ್ ನಲ್ಲಿ ಇದ್ದಾಗ ಹೊರಗಡೆಯಿಂದ ಶುಭ ಹಾರೈಸಿದ್ದ ಮಾಜಿ ಬಾಯ್ ಫ್ರೆಂಡ್ ರಾಕೇಶ್ ಗೆ ಶಾಕ್ ಕೊಟ್ಟ ದಿವ್ಯ ಸುರೇಶ್. ಏನು ಮಾಡಿದ್ದಾರೆ ಗೊತ್ತೇ??
Biggboss Kannada: ಬಿಗ್ ಬಾಸ್ (Biggboss Kannada) ಮನೆಯಲ್ಲಿ ರಾಕೇಶ್ ಅಡಿಗ (Rakesh Adiga) ಅವರು ಬಹಳ ಕಾಮ್ ಮತ್ತು ಕೂಲ್ ಸ್ವಭಾವದಿಂದ ಹೆಚ್ಚು ಗುರುತಿಸಿಕೊಂಡವರು. ಓಟಿಟಿ ಸೀಸನ್ (Biggboss OTT) ಇಂದಲೂ ಯಾರೊಂದಿಗೂ ಜಾಸ್ತಿ ಕೂಗಾಡದೆ, ಕಿರುಚಾಡದೆ, ಜಗಳ ಮಾಡಿಕೊಳ್ಳದೆ ಇಲ್ಲಿಯವರೆಗೂ ಬಂದಿರುವ ರಾಕೇಶ್ ಅಡಿಗ, ಕಳೆದ ವಾರ ರಿಯಲ್ ಫೇಕ್ ಟಾಸ್ಕ್ ನಲ್ಲಿ ಕೋಪ ಮಾಡಿಕೊಂಡು ಕಿರುಚಾಡಿದ್ದರು. ರಾಕೇಶ್ ಅವರು ತಾಳ್ಮೆ ಕಳೆದುಕೊಂಡಿದ್ದು ಮನೆಯವರಿಗೂ ಶಾಕ್ ನೀಡಿತ್ತು, ಈ ವಾರದ ಗೊಂಬೆ ಫ್ಯಾಕ್ಟರಿ ಟಾಸ್ಕ್ ನಲ್ಲಿ ಕೂಡ ರಾಕೇಶ್ ಮತ್ತು ರಾಜಣ್ಣ (Roopesh Rajanna) ನಡುವೆ ಜಗಳ ನಡೆಯಿತು.
ಎರಡನೇ ಬಾರಿ ಈ ರೀತಿ ಆಯಿತು. ರಾಕೇಶ್ ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಎಲ್ಲರಿಗು ಅನ್ನಿಸುತ್ತಿದೆ. ಮನೆಯೊಳಗೆ ನಡೆಯುತ್ತಿರುವ ವಿಷಯ ಒಂದು ಕಡೆಯಾದರೆ, ಹೊರಗಡೆ ರಾಕೇಶ್ ಅವರ ಮಾಜಿ ಗೆಳತಿ, ರೂಪೇಶ್ ರಾಜಣ್ಣ ಅವರ ಪರವಾಗಿ, ಎಲ್ಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ವರ್ಷ ದಿವ್ಯ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ರಾಕೇಶ್ ಸಾಥ್ ನೀಡಿದ್ದರು. ಆದರೆ ಈಗ ದಿವ್ಯ ಸುರೇಶ್ (Divya Suresh) ಅವರು ರಾಕೇಶ್ ಅವರಿಗೆ ಸಪೋರ್ಟ್ ಮಾಡುವ ಹಾಗೆ ಕಾಣುತ್ತಿಲ್ಲ. ರೂಪೇಶ್ ರಾಜಣ್ಣ ಅವರ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸಿಲ್ಲಿ ಶೇರ್ ಮಾಡಿರುವ ದಿವ್ಯ ಅವರು.. “ಈಗಿನ ದಿನಗಳಲ್ಲಿ ರೂಪೇಶ್ ರಾಜಣ್ಣ ಅವರಿಗೆ ಬೇರೆ ಸ್ಪರ್ಧಿಗಳು ಅವಮಾನ ಮಾಡುತ್ತಿರುವುದನ್ನು ನೋಡಿದರೆ ಬೇಜರಾಗುತ್ತದೆ. ಪ್ರತಿ ಸಾರಿ ಕೂಡ ರೂಪೇಶ್ ರಾಜಣ್ಣ ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಇದನ್ನು ಓದಿ.. Kannada News: ಕನ್ನಡಿಗರ ಚಿತ್ರ ಬಿಟ್ಟು, ತೆಲುಗಿನ ಚಿತ್ರಗಳನ್ನು ಮಾಡುತ್ತಿರುವ ಪ್ರಶಾಂತ್ ನೀಲ್, ಕೊಟ್ಟ ಷಾಕಿಂಗ್ ಹೇಳಿಕೆ ಗೊತ್ತೇ?? ತೆಲುಗಿನ ನಟರನ್ನೇ ಕೆಣಕಿದ ಮಹಾನುಭಾವ.
ಅದರ ಬಗ್ಗೆ ಪ್ರಶ್ನೆ ಕೇಳಿದಾಗ ಜೋಕ್ ಎಂದುಕೊಳ್ಳಿ ಎಂದು ಹೇಳಲಾಗುತ್ತಿದೆ. ಅವರುಗಳು ಆಟದಲ್ಲಿ ಟ್ರಿಗರ್ ಆದಾಗ ವಯಸ್ಸಲ್ಲಿ ದೊಡ್ಡವರನ್ನು ಹೋಗೋ, ಬಾರೋ ಅಂತ ಕರೆಯೋದು ಎಷ್ಟು ಸರಿ? ನೀವು ಆಟ ಗೆಲ್ಲಬೇಕು ಅಂತ ಆಡಿದರೆ ಅದು ಸರಿ, ಆದರೆ ಬೇರೆಯವರು ಅದೇ ಥರ ಆಡಿದರೆ ಅದು ಅಗ್ರೆಷನ್ ಆಗುತ್ತಾ? ರಾಜಣ್ಣ ಅವರು ಕೆಲವು ಸಾರಿ ಹಿಂಸೆ ಆಗುವ ಹಾಗೆ ಮಾಡುತ್ತಾರೆ, ಅದು ಸುಳ್ಳು ಅಂತ ಹೇಳ್ತಿಲ್ಲ. ಎಲ್ಲರೂ ತಪ್ಪು ಮಾಡ್ತಾರೆ. ಹಾಗಂತ ರಾಜಣ್ಣ ಅವರನ್ನ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಇಷ್ಟೆಲ್ಲಾ ಆದರೂ ಎಲ್ಲರ ಜೊತೆಗೆ ರಾಜಣ್ಣ ಚೆನ್ನಾಗಿಯೇ ಮಾತನಾಡುತ್ತಾ ಇದ್ದಾರೆ. ಅಂದ ಹಾಗೆ, ದೀಪಿಕಾ ದಾಸ್ (Deepika Das) ಆಟ ಆಡುತ್ತಿರುವ ರೀತಿಗೆ ಚಪ್ಪಾಳೆ ತಟ್ಟಬೇಕು..” ಎಂದು ದಿವ್ಯ ಅವರು ಬರೆದುಕೊಂಡಿದ್ದು. ಇದನ್ನು ನೋಡಿ ಅಭಿಮಾನಿಗಳು ದಿವ್ಯ ರಾಕೇಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಓದಿ.. Kannada News: ದೇಶವನ್ನೇ ಶೇಕ್ ಮಾಡಿದ ಖ್ಯಾತ ನಟಿ ಕೃಷ್ಣ ಆಸ್ತಿಯ ವಿಲ್: ಸಾವಿರಾರು ಕೋಟಿ ಆಸ್ತಿ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ??
Comments are closed.