Neer Dose Karnataka
Take a fresh look at your lifestyle.

Cricket News: ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗುತ್ತಿದ್ದಂತೆ ಭಾರತ ತಂಡದ ಮುಂದೆ ಹೊಸ ಬೇಡಿಕೆ ಇಟ್ಟ ಹಾರ್ಧಿಕ್ ಪಾಂಡ್ಯ. ಒಂದೇ ಗೆಲುವಿಗೆ ಬೇಡಿಕೆನಾ??

Cricket News: ಭಾರತ ಕ್ರಿಕೆಟ್ ತಂಡವು (Team India) ಈಗ ಬದಲಾವಣೆಗಳ ಆಕೆ ಶುರುವಾಗಿದೆ. ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ ವರೆಗು ಬಂದು ಭಾರತ ತಂಡ ಸೋತ ಬಳಿಕ ತಂಡದಲ್ಲಿ ನಾಯಕತ್ವದ ಬದಲಾವಣೆ ಆಗಬೇಕು, ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಬೇಕು ಎಂದು ಸಾಕಷ್ಟು ಚರ್ಚೆಗಳು ನಡೆದವು. ಆ ಎಲ್ಲಾ ಬದಲಾವಣೆಗಳನ್ನು ಹಂತ ಹಂತವಾಗಿ ತರಲಾಗುತ್ತಿದೆ. ಈ ಹೊಸತನದಿಂದ ಭಾರತ ತಂಡವು ಈಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಿನ್ನೆ ನವೆಂಬರ್ 20ರಂದು ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಪಂದ್ಯ ನಡೆಯಿತು.

ಇದರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ತಂಡಕ್ಕೆ ಬಹಳ ಸಹಾಯವಾಯಿತು. ಇನ್ನು ಸ್ಪಿನ್ ಮಾಂತ್ರಿಕ ಚಹಾಲ್ (Yuzvendra Chahal) ಅವರು ಕೂಡ ನ್ಯೂಜಿಲೆಂಡ್ ತಂಡವನ್ನು ಆಲ್ ಔಟ್ ಮಾಡುವಲ್ಲಿ ಮೇಲುಗೈ ಸಾಧಿಸಿದರು. 191 ರನ್ ಗಳ ಗುರಿಯನ್ನು ಭಾರತ ತಂಡ ನೀಡಿತ್ತು, ಆದರೆ ನ್ಯೂಜಿಲೆಂಡ್ ತಂಡವು 20 ಓವರ್ ಗಳಲ್ಲಿ 126 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಭಾರತ ತಂಡ 18.5 ಓವರ್ ಗಳಿಗೆ ನ್ಯೂಜಿಲೆಂಡ್ ತಂಡವನ್ನು ಆಲ್ ಔಟ್ ಮಾಡಿತು. ಈ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಅವರು ಮಾತನಾಡಿದ್ದು, ತಮ್ಮದೇ ಶೈಲಿಯಲ್ಲಿ ತಂಡವನ್ನು ಮುನ್ನಡೆಸುವ ಸೂಚನೆ ನೀಡಿರುವ ಹಾರ್ದಿಕ್ ಪಾಂಡ್ಯ ಅವರು ಟೀಮ್ ಇಂಡಿಯಾ ಎದುರು ಹೊಸದೊಂದು ಬೇಡಿಕೆ ಇಟ್ಟಿದ್ದಾರೆ.. “ಪಂದ್ಯದ ಸಮಯದಲ್ಲಿ ಮಳೆ ಬಂದಿದ್ದ ಕಾರಣ, ಪಿಚ್ ತೇವವಾಗಿತ್ತು. ಈ ಪಿಚ್ ನಲ್ಲಿ ಗೆದ್ದಿರುವ ಕ್ರೆಡಿಟ್ ಬೌಲರ್ ಗಳಿಗೆ ಹೋಗಬೇಕು. ಮುಂದಿನ ಪಂದ್ಯಗಳಲ್ಲಿ ನಾನು ಬೌಲಿಂಗ್ ಕಡೆಗೆ ಹೆಚ್ಚು ಆಯ್ಕೆಗಳನ್ನು ನೋಡಲು ಇಷ್ಟಪಡುತ್ತೇನೆ.. ಇದನ್ನು ಓದಿ.. Kannada News: ಡಿಗ್ರಿ ಮುಗಿಸಿ, ಸಾಕಷ್ಟು ಕಷ್ಟ ಪಟ್ಟು ಅವಕಾಶ ಪಡೆದು ಕಿರುತೆರೆಯಲ್ಲಿ ಮಿಂಚುತ್ತಿರುವ ಮಲೈಕಾ ವಸುಪಾಲ್ ರವರ ನಿಜವಾದ ವಯಸ್ಸು ತಿಳಿದರೆ ನೀವೇ ನಂಬೋದಿಲ್ಲ.

ತಂಡದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಬೌಲಿಂಗ್ ಕೂಡ ಮಾಡಿದರೆ ಅನುಕೂಲ ಹೆಚ್ಚು. ಈ ಪ್ಲಾನ್ ಯಾವಾಗಲೂ ಕೆಲಸ ಮಾಡುತ್ತದೆ ಅಂತ ಹೇಳೋದಕ್ಕೆ ಆಗಲ್ಲ. ಆದರೆ ಹೆಚ್ಚಿನ ಬ್ಯಾಟ್ಸ್ಮನ್ ಗಳು ಬೌಲಿಂಗ್ ನಲ್ಲಿ ಕೂಡ ಕೊಡುಗೆ ನೀಡಬೇಕು ಎಂದು ನನ್ನ ಬಯಕೆ..” ಎಂದಿದ್ದಾರೆ ಹಾರ್ದಿಕ್ ಪಾಂಡ್ಯ. ಈ ಮೂಲಕ ತಮ್ಮ ಹೊಸ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. “ಪ್ರಸ್ತುತ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಗಳಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಕೆ.ಎಲ್.ರಾಹುಲ್ (K L Rahul), ಸೂರ್ಯಕುಮಾರ್ ಯಾದವ್ (Suryakumar Yadav), ಶ್ರೇಯಸ್ ಅಯ್ಯರ್ (Shreyas Iyer) ಬ್ಯಾಟಿಂಗ್ ಮಾಡಿದ್ದಾರೆ ಇವರು ಬಾಲ್ ಇಂದ ಸಹಾಯ ಮಾಡಿಲ್ಲ, ಕ್ರಿಕೆಟ್ ತಜ್ಞರು ಇದನ್ನು ದೂಷಣೆ ಮಾಡಿದ್ದಾರೆ. ಈ ತೊಂದರೆಯನ್ನು ಸರಿಪಡಿಸಿದರೆ ಹೆಚ್ಚು ಪಂದ್ಯಗಳನ್ನು ಗೆಲ್ಲಬಹುದು..” ಎಂದಿದ್ದಾರೆ ಹಾರ್ದಿಕ್ ಪಾಂಡ್ಯ. ಇದನ್ನು ಓದಿ..Kannada Astrology: ಅದೃಷ್ಟವನ್ನು ಹೊತ್ತು ತರುತ್ತಿದ್ದಾನೆ ಶುಕ್ರ: ಈ ಬಾರಿ ಮೂರು ರಾಶಿಗಳಿಗೆ ಕಷ್ಟಗಳೆಲ್ಲ ಮುಗಿದು ಭಾಗ್ಯ ಉದಯವಾಗುತ್ತದೆ. ಯಾರಿಗೆ ಗೊತ್ತೇ?

Comments are closed.