Neer Dose Karnataka
Take a fresh look at your lifestyle.

Kannada News: ಕೊನೆಗೂ ಬಿಡುಗಡೆಯಾದ ಧಾರಾವಾಹಿಗಳ ಟಿಆರ್ಪಿ. ಈ ಬಾರಿಯ ಟಾಪ್ ಧಾರವಾಹಿ ಹಾಗೂ ಕಾರ್ಯಕ್ರಮಗಳು ಯಾವ್ಯಾವು ಗೊತ್ತೇ?

Kannada News: ಕಿರುತೆರೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ಸು ನಿಂತಿರುವುದು ಪ್ರತಿ ಗುರುವಾರ ಬರುವ ಟಿ.ಆರ್.ಪಿ ರೇಟಿಂಗ್ ಮೇಲೆ. ಕನ್ನಡ ಕಿರುತೆರೆಯಲ್ಲಿ ಕೆಲವು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿ ಇರುವುದು ಜೀಕನ್ನಡ ವಾಹಿನಿ. ಈ ಚಾನೆಲ್ ನಲ್ಲಿ ಪ್ರಸಾರ ಆಗುವ ಧಾರವಾಹಿ ಮತ್ತು ರಿಯಾಲಿಟಿ ಶೋಗಳು ಭಾರಿ ಮೆಚ್ಚುಗೆ ಪಡೆಯುತ್ತಿದೆ. ನಂಬರ್ 1 ಆಗಿರುವ ಜೀಕನ್ನಡ (Zee Kannada) ವಾಹಿನಿಯ ಈ ವಾರದ ಟಿಆರ್ಪಿ ರೇಟಿಂಗ್ ಹೇಗಿದೆ? ಯಾವ ಧಾರವಾಹಿ ಯಾವ ಸ್ಥಾನದಲ್ಲಿದೆ? ರೇಟಿಂಗ್ ಎಷ್ಟಿದೆ? ತಿಳಿಸುತ್ತೇವೆ ನೋಡಿ..

ಪ್ರತಿ ವಾರದ ಹಾಗೆ ಈ ವಾರ ಕೂಡ ಮೊದಲ ಸ್ಥಾನದಲ್ಲಿ ನಿಂತಿರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರವಾಹಿ. ಪುಟ್ಟಕ್ಕನ ಕೊನೆಯ ಮಗಳು ಸುಮಾಳ ಖೋ ಖೋ ಮತ್ತು ಕಂಠಿ ಸ್ನೇಹ ಪ್ರೀತಿ ಜನರಿಗೆ ಇಷ್ಟವಾಗಿದ್ದು, 10.2 ರೇಟಿಂಗ್ ಪಡೆದಿರುವ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಇರುವುದು ಗಟ್ಟಿಮೇಳ (Gattimela) ಧಾರವಾಹಿ, ಈ ಧಾರವಾಹಿಯಲ್ಲಿ ವೇದಾಂತ್ ಕಿಡ್ನ್ಯಾಪ್ ಆಗಿರುವುದರಿಂದ ವೇದಾಂತ್ ನ ಹುಡುಕಾಟದ ಎಪಿಸೋಡ್ ಗಳು ಜನರಿಗೆ ಇಷ್ಟವಾಗಿದೆ. 9.4 ಟಿಆರ್ಪಿ ರೇಟಿಂಗ್ ಪಡೆದು, 2ನೇ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿ ಹೊಸದಾಗಿ ಶುರುವಾಗಿರುವ ಧಾರವಾಹಿ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಇದೆ. ಇದನ್ನು ಓದಿ.. Samantha: ದುಃಖದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ಬಿಟ್ಟ ಸಮಂತಾ. ಕಣ್ಣೀರು ಹಾಕಿದ ಫ್ಯಾನ್ಸ್. ಏನಾಗಿದೆ ಗೊತ್ತೇ??

ಹಿರಿಯನಟಿ ಸುಧಾರಾಣಿ (Sudharani) ಅವರು ತುಳಸಿ ಪಾತ್ರದಲ್ಲಿ ಜನರಿಗೆ ಇಷ್ಟವಾಗಿದ್ದಾರೆ. ತುಳಸಿ ಮಗನ ಮದುವೆ ನಡೆದಿದೆ. ನಾಲ್ಕನೇ ಸ್ಥಾನದಲ್ಲಿ 7.4 ರೇಟಿಂಗ್ ಪಡೆದು, ಸತ್ಯ (Sathya) ಧಾರವಾಹಿ ನಿಂತಿದೆ, ಸತ್ಯ ಕಾರ್ತಿಕ್ ನಡುವೆ ಪ್ರೀತಿ ಬೆಳೆಯುತ್ತಾ, ಅತ್ತೆ ಸತ್ಯಾಳನ್ನು ಒಪ್ಪಿಕೊಳ್ಳುತ್ತಾಳಾ ಎನ್ನುವ ಕುತೂಹಲ ಇದೆ. 7.4 ರೇಟಿಂಗ್ ಪಡೆದು, ಹಿಟ್ಲರ್ ಕಲ್ಯಾಣ (Hitler Kalyana) ಧಾರವಾಹಿ ಕೂಡ ನಾಲ್ಕನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೆ, ವೀಕೆಂಡ್ ನಲ್ಲಿ ಪ್ರಸಾರವಾಗುವ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮ ಶುರುವಾಗಿದ್ದು, 9.6 ರೇಟಿಂಗ್ ಪಡೆದಿದೆ. ಮಕ್ಕಳ ಹಾಡನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ. ಇದನ್ನು ಓದಿ..Cricket News: ಈ ಬಾರಿಯೂ ಕೂಡ ಸಂಜು ಸ್ಯಾಮ್ಸನ್ ರವರನ್ನು ಕೈ ಬಿಡಲು ಶಿಖರ್ ಧವನ್ ಕೊಟ್ಟ ಕಾರಣ ಏನು ಗೊತ್ತೇ??

Comments are closed.