Neer Dose Karnataka
Take a fresh look at your lifestyle.

Cricket News: ಬಿಗ್ ನ್ಯೂಸ್: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ. ತಂಡದಿಂದ ಹೊರ ಹೋಗುತ್ತಿರುವ ಟಾಪ್ ಆಟಗಾರರು ಯಾರು ಗೊತ್ತೇ?

Cricket News: ಟಿ20 ವಿಶ್ವಕಪ್ (T20 World Cup) ನ ಆರಂಭದಲ್ಲಿ ಛಾಪು ಮೂಡಿಸಿ ಭರವಸೆ ಮೂಡಿಸಿದ್ದ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋತಿತು. ಇದರಿಂದ ಭಾರತ ತಂಡದಲ್ಲಿ ಬದಲಾವಣೆಗಳು ನಡೆಯುವುದು ಪಕ್ಕಾ ಆಗಿದೆ. ಈಗಾಗಲೇ ಇವುಗಳ ಬಗ್ಗೆ ಚರ್ಚೆ ಆಗುತ್ತಿದ್ದು, ಕೆಲವು ಹಿರಿಯ ಆಟಗಾರರನ್ನು ಟಿ20 ಇಂದ ಕೈಬಿಡುವ ನಿರ್ಧಾರವನ್ನು ಬಿಸಿಸಿಐ (BCCI) ತೆಗೆದುಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ. 2023ರಲ್ಲಿ ಐಸಿಸಿ ಟೂರ್ನಿಗಳಾದ, ಟೆಸ್ಟ್ ಪಂದ್ಯಗಳ ವರ್ಲ್ಡ್ ಕಪ್ (Test Match World Cup) ಮತ್ತು ಓಡಿಐ ವರ್ಲ್ಡ್ ಕಪ್ (ODI World Cup) ಗಳು ನಡೆಯಲಿದೆ.

ಹಾಗಾಗಿ ಅವುಗಳನ್ನು ಗೆಲ್ಲಲೇಬೇಕು ಎಂದು ಭಾರತ ತಂಡ ನಿರ್ಧಾರ ಮಾಡಿ, ತಂಡ ಕಟ್ಟುವ ಯೋಜನೆಯಲ್ಲಿದೆ, ಜೊತೆಗೆ, 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಾಗಿ ಹೊಸ ತಂಡ ರೂಪಿಸುವ ಯೋಜನೆಯಲ್ಲಿದೆ. ಹಾಗಾಗಿ ಪ್ರಸ್ತುತ ಭಾರತ ತಂಡದಲ್ಲಿರುವ ಹಿರಿಯ ಆಟಗಾರರನ್ನು, ಟೆಸ್ಟ್ ಮತ್ತು ಓಡಿಐ ಪಂದ್ಯಗಳಲ್ಲಿ ಆಡಲು ಹೇಳಿ, ಅವರುಗಳನ್ನು ಓಡಿಐ ಗೆ ಮೀಸಲಾಗಿ ಇಟ್ಟು, ಯುವ ಆಟಗಾರರಿಗೆ ಇದರಲ್ಲಿ ಮುಂದುವರೆಯಲು ಅವಕಾಶ ಕೊಡುವುದಾಗಿ ತಿಳಿಸಿದೆ. ಹಿರಿಯ ಆಟಗಾರರಿಗೆ ನಿವೃತ್ತಿ ತೆಗೆದುಕೊಳ್ಳಿ ಎಂದು ಬಿಸಿಸಿಐ ಹೇಳುವುದಿಲ್ಲ, ಅದು ಹಿರಿಯ ಆಟಗಾರರ ನಿರ್ಧಾರ ಆಗಿದೆ ಎಂದಿದೆ ಬಿಸಿಸಿಐ. ಇದನ್ನು ಓದಿ.. Kannada News: ಮೊದಲ ಧಾರಾವಾಹಿಯಲ್ಲಿಯೇ ಎಲ್ಲರ ಮನ ಕದ್ದಿರುವ ಒಲವಿನ ನಿಲ್ದಾಣದ ಬೆಡಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಟಿ20 ತಂಡದಿಂದ ಹೊರಹೋಗಬಹುದಾದ ಹಿರಿಯ ಆಟಗಾರರು ಯಾರ್ಯಾರು ಎಂದು ನೋಡುವುದಾದರೆ, ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ದಿನೇಶ್ ಕಾರ್ತಿಕ್ (Dinesh Karthik), ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತು ಮೊಹಮ್ಮದ್ ಶಮಿ (Mohammad Shami). ಈ ಐವರು ಆಟಗಾರರನ್ನು ಟಿ20 ತಂಡದಿಂದ ಕೈಬಿಡಬೇಕು ಎಂದು ಬಿಸಿಸಿಐ ನಿರ್ಧಾರ ಮಾಡಿದ್ದು, ಈ ವಿಷಯದ ಕುರಿತಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ಹಿರಿಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರೊಡನೆ ಸಭೆ ನಡೆಸಲಿದ್ದಾರೆ. ಈಗಲೂ ಫಿಟ್ ಆಗಿರುವ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ತಂಡದಿಂದ ಹೊರಗೆ ಉಳಿಯುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಪ್ರೇಮ್ ಮಗಳು ಪಾದಾರ್ಪಣೆ ಮಾಡಿದ್ದು ಇರಲಿ, ಮೊದಲ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

Comments are closed.