Neer Dose Karnataka
Take a fresh look at your lifestyle.

Cricket News: ಕ್ಯಾಚ್ ಗಳನ್ನು ಬಿಟ್ಟು ಪಂದ್ಯ ಸೋತ ಭಾರತ ತಂಡದ ಬಗ್ಗೆ ಹೊರಬಿದ್ದಿರುವ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತೇ??

Cricket News: ನಿನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಓಡಿಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯವಾದ ಸೋಲು ಕಂಡಿತು. ಭಾರತ ತಂಡದ ಬ್ಯಾಟಿಂಗ್ ಪರಿಣಾಮಕಾರಿಯಾಗಿ ಇರಲಿಲ್ಲ. ಬಹಳ ಬೇಗ ವಿಕೆಟ್ಸ್ ಕಳೆದುಕೊಂಡ ಭಾರತ, 41.2 ಓವರ್ ಗೆ 186 ರನ್ಸ್ ಗಳಿಸಿ ಎಲ್ಲಾ ವಿಕೆಟ್ಸ್ ಕಳೆದುಕೊಂಡು ಆಲೌಟ್ ಆಯಿತು. ಇನ್ನು ಬೌಲಿಂಗ್ ಮತ್ತು ಫೀಲ್ಡಿಂಗ್ ವಿಚಾರಕ್ಕೆ ಬರುವುದಾದರೆ, ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ, ಬಾಂಗ್ಲಾದೇಶ್ 136 ರನ್ಸ್ ಗಳಿಸಿದ್ದಾಗಲೇ 9 ವಿಕೆಟ್ಸ್ ತೆಗೆದುಕೊಂಡಿತ್ತು.

ಬಾಂಗ್ಲಾದೇಶ್ ತಂಡ ಸೋಲಿನ ಅಂಚಿನಲ್ಲಿತ್ತು ಎಂದು ಹೇಳಬಹುದು. ಆದರೆ, ನಂತರ ಮೆಹೆದಿ ಹಸನ್ ಮೀರಜ್ (Mehedi Hasan Meeraj) ಮತ್ತು ಮುಸ್ತಾಫಿಜುರ್ ರಹಮಾನ್ (Mustafizur Rahman) ಅವರ ಜೊತೆಯಾಟದಲ್ಲಿ 52 ರನ್ಸ್ ಗಳಿಸಿ ಬಾಂಗ್ಲಾದೇಶ್ ತಂಡ ಗೆದ್ದಿತು. ಮೆಹೆದಿ ಅವರನ್ನು ಔಟ್ ಮಾಡಿ, ಬಾಂಗ್ಲಾದೇಶ್ ತಂಡವನ್ನು ಸೋಲಿಸುವ ಅವಕಾಶ ಎರಡು ಸಾರಿ ಬಂದರು, ಕೆ.ಎಲ್.ರಾಹುಲ್ (K L Rahul) ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಆ ಅವಕಾಶವನ್ನು ಕೈಚೆಲ್ಲಿದರು. ಕೆ.ಎಲ್.ರಾಹುಲ್ ಅವರು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಬಿಟ್ಟರು, ಇತ್ತ ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯುವ ಪ್ರಯತ್ನವನ್ನೇ ಮಾಡಲಿಲ್ಲ. ಇದರಿಂದಾಗಿ ರೋಹಿತ್ ಶರ್ಮಾ ಅವರು ಕೂಡ ಬಹಳ ಕೋಪಗೊಂಡು, ಮೈದಾನದಲ್ಲೇ ರಿಯಾಕ್ಟ್ ಮಾಡಿದ್ದರು. ಇದನ್ನು ಓದಿ..Cricket News: ಈ ಬಾರಿಯೂ ಕೂಡ ಸಂಜು ಸ್ಯಾಮ್ಸನ್ ರವರನ್ನು ಕೈ ಬಿಡಲು ಶಿಖರ್ ಧವನ್ ಕೊಟ್ಟ ಕಾರಣ ಏನು ಗೊತ್ತೇ??

ಈ ವಿಚಾರದ ಬಗ್ಗೆ ಈಗ ದಿನೇಶ್ ಕಾರ್ತಿಕ್ (Dinesh Karthik) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಸಾರಿ ಕ್ಯಾಚ್ ಬಿಟ್ಟಿರುವ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್ ಅವರು, ಕೆ.ಎಲ್.ರಾಹುಲ್ ಪ್ರಯತ್ನವನ್ನಾದರು ಮಾಡಿದರು, ವಾಷಿಂಗ್ಟನ್ ಸುಂದರ್ ಪ್ರಯತ್ನವನ್ನು ಮಾಡಲಿಲ್ಲ ಅದು ಯಾಕೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಜೊತೆಗೆ ಆ ರೀತಿ ಆಗುವುದಕ್ಕೆ ಕಾರಣ ಏನಿರಬಹುದು ಎಂದು ಕೂಡ ಊಹೆ ಮಾಡಿದ್ದಾರೆ, ಲೈಟ್ ಬೆಳಕು ಹೆಚ್ಚಾಗಿದ್ದ ಕಾರಣ ಆ ರೀತಿ ಆಗಿರಬಹುದು, ಅಥವಾ ಒತ್ತಡದಿಂದಲೂ ಆ ರೀತಿ ಆಗಿರಬಹುದು.. ಎಂದು ಹೇಳಿದ್ದಾರೆ ದಿನೇಶ್ ಕಾರ್ತಿಕ್. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ. ತಂಡದಿಂದ ಹೊರ ಹೋಗುತ್ತಿರುವ ಟಾಪ್ ಆಟಗಾರರು ಯಾರು ಗೊತ್ತೇ?

Comments are closed.