Neer Dose Karnataka
Take a fresh look at your lifestyle.

Kannada Astrology: ಬಿಲ್ಪತ್ರೆ ಎಲೆಯನ್ನು ಮನೆಯಲ್ಲಿ ಇಟ್ಟರೆ ಒಂದು ವಾರದಲ್ಲಿ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದುಕೊಂಡು ಬಂದು ಇಡುತ್ತೀರಿ. ಏನಾಗುತ್ತದೆ ಗೊತ್ತೇ??

Kannada Astrology: ಮಹಾಶಿವ ಭಕ್ತರನ್ನು ಮೆಚ್ಚುವ ದೇವರು, ಭಕ್ತರಿಗೂ ಶಿವನನ್ನು ಕಂಡರೆ ಭಕ್ತಿ ಪ್ರೀತಿ ಹೆಚ್ಚು. ಭಕ್ತರು ಕೇಳಿದ್ದನ್ನು ಬಹಳ ಬೇಗ ಕರುಣಿಸುವ ದೇವರು ಎಂದು ಶಿವನನ್ನು ಹೇಳುತ್ತಾರೆ, ಶಿವನಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ, ನೀವು ಕೇಳಿದ ವರವನ್ನು ನೀಡುವುದು ಖಂಡಿತ. ಶಿವನನ್ನು ಒಳಿಸಿಕೊಳ್ಳುವುದು ಬಹಳ ಸುಲಭ, ಸ್ನಾನ ಮಾಡಿದ ನಂತರ, ಶಿವನಿಗೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನಿಗೆ ಸಂತೋಷ ಆಗುತ್ತದೆ. ಬಿಲ್ವಪತ್ರೆ ಮರವನ್ನು ಮನೆಯಲ್ಲಿ ಬೆಳೆಸುವುದು ಬಹಳ ಒಳ್ಳೆಯದು, ಆಗ ನಿಮ್ಮ ಮನೆ ಯಾವುದೇ ಪುಣ್ಯಕ್ಷೇತ್ರಕ್ಕು ಕಡಿಮೆ ಇಲ್ಲ ಎನ್ನುವ ಹಾಗೆ ಆಗುತ್ತದೆ. ಹಾಗಾಗಿ ಮನೆಯಲ್ಲಿ ಇದನ್ನು ಬೆಳೆಸುವುದು ಅತ್ಯಂತ ಶುಭಕರ. ಮನೆಯಲ್ಲಿ ಇದನ್ನು ಬೆಳೆಸಲು ಸಾಧ್ಯವಾಗದೆ ಹೋದರೆ, ಎಲೆಗಳನ್ನು ತಂದು ಶಿವನಿಗೆ ಪೂಜೆ ಮಾಡಬಹುದು. ಮನೆಯಲ್ಲಿ ಬಿಲ್ವಪತ್ರೆ ನೆಡುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ನಿಮಗೆ ಬಹಳ ಸಮಯದಿಂದ ಬಡತನ ಇದ್ದರೆ, ಮನೆಕ್ಲ್ಲಿ ಬಿಲ್ವಪತ್ರೆ ಗಿಡವನ್ನು ನೆಡಿ, ಇದರಿಂದ ಲಕ್ಷ್ಮೀದೇವಿಗೆ ಸಂತೋಷ ಆಗುತ್ತದೆ.ಹಣ ಇಡುವ ಕಡೆ ಬಿಲ್ವಪತ್ರೆ ಎಲೆಗಳನ್ನು ಇಡುವುದರಿಂದ ಒಳ್ಳೆಯದಾಗುತ್ತದೆ, ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಬಿಲ್ವಪತ್ರೆ ಗಿಡವನ್ನು ನೆಡಬೇಕು. ಈ ಮರದ ಬೇರಿನಲ್ಲಿ ಗಿರಿಜಾಮಾತೆ ಇರುತ್ತಾರೆ, ಕಾಂಡದಲ್ಲಿ ಶಿವ ಇದ್ದಾನೆ, ಕೊಂಬೆಗಳಲ್ಲಿ ದಾಕ್ಷಾಯಿಣಿ ದೇವಿ, ಎಲೆಗಳಲ್ಲಿ ಪಾರ್ವತಿದೇವಿ, ಹೂವಿನಲ್ಲಿ ಗೌರಿ, ಹಣ್ಣಿನಲ್ಲಿ ಕಾತ್ಯಾಯಿನಿ ನೆಲೆಸಿದ್ದಾರೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಬಿಲ್ವಪತ್ರೆ ಗಿಡವನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ನೆಡಬೇಕು, ಇದರಿಂದ ನಿಮ್ಮ ಮನೆಯವರು ಆರೋಗ್ಯವಂತರಾಗಿ, ಶಕ್ತಿಶಾಲಿಯಾಗಿರುತ್ತಾರೆ. ಇದನ್ನು ಓದಿ..Kannada Astrology: ಬರುತ್ತಿದೆ ಧನುರ್ಮಾಸ: ಈ ಮಾಸ ಬಂದ ಕೂಡ ಐದು ರಾಶಿಗಳ ಕಷ್ಟವೆಲ್ಲ ಮುಗಿದು, ಅದೃಷ್ಟ ಆರಂಭ. ಯಾವ ರಾಶಿಗಳಿಗೆ ಗೊತ್ತೆ?

ಈ ಗಿಡ ನೆಡುವುದರಿಂದ ನಿಮ್ಮ ಮನೆಗೆ ನೆಗಟಿವ್ ಎನರ್ಜಿ ಬರುವುದಿಲ್ಲ. ಮನೆಯವರ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಮನೆಯ ಒಳಗೆ ಬಿಲ್ವಪತ್ರೆ ಗಿಡ ಬೆಳೆಸುವುದರಿಂದ ಚಂದ್ರದೋಷಗಳ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು, ಬೇರೆ ದೋಷಗಳಿಂದ ಆಗುವ ಪರಿಣಾಮ ಕಡಿಮೆ ಆಗುತ್ತದೆ. ಜ್ಯೋತಿಷ್ಯದಲ್ಲಿ ತಿಳಿಸಿರುವ ಹಾಗೆ ಚತುರ್ಥಿ, ಅಷ್ಟಮಿ, ನವಮಿ ಮತ್ತು ಚತುರ್ದಶಿ ಹಾಗೂ ಅಮಾವಾಸ್ಯೆ ದಿನ ಬಿಲ್ವಪತ್ರೆ ಗಿಡವನ್ನು ಎಲೆಯನ್ನು ಒಡೆಯಬಾರದು.. ಹಾಗೆಯೇ ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಸೋಮವಾರದ ದಿನ ಬಿಲ್ವಪತ್ರೆಯನ್ನು ಕೀಳಬೇಡಿ. ಬಿಲ್ವಪತ್ರೆ ಎಲೆಗಳನ್ನು ಒಂದೊಂದೇ ಪ್ರತ್ಯೇಕವಾಗಿ ಒಡೆದು ಹಾಕಬೇಡಿ, ಮೂರು ಎಲೆಗಳು ಕಾಂಡವನ್ನು ದೇವರಿಗೆ ಅರ್ಪಣೆ ಮಾಡಿ. ಇದನ್ನು ಓದಿ.. Kannada Astrology: ಈ ಕ್ಷಣದಿಂದ ನಿಮ್ಮ ಅದೃಷ್ಟ ಆರಂಭ: ಈ ವರ್ಷ ಮುಗಿಯುವ ಹೊತ್ತಿಗೆ ಲಕ್ಷ ಲಕ್ಷ ಗಳಿಸುವ ರಾಶಿಗಳು ಯಾವುವು ಗೊತ್ತೇ??

Comments are closed.