Neer Dose Karnataka
Take a fresh look at your lifestyle.

Kannada News: ಕನ್ನಡ ಚಿತ್ರರಂಗದಲ್ಲಿ ನಟರ ನಡುವೆ ನಡೆಯುತ್ತಿರುವ ವಾರ್ ಗೆ ನೇರವಾಗಿ ಕಾರಣ ಹೇಳಿದ ದರ್ಶನ್, ಈ ಬಾರಿ ಕೆಣಕಿದ್ದು ಯಾರನ್ನು ಗೊತ್ತೇ?

526

Kannada News: : ನಟ ದರ್ಶನ್ (Darshan) ಅವರೆಂದರೆ ಅಭಿಮಾನಿಗಳಿಗೆ ಬಹಳ ಕ್ರೇಜ್. ಅವರ ಬಗ್ಗೆ ಪ್ರತಿಯೊಂದು ವಿಚಾರವನ್ನು ಕೂಡ ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಪ್ರಸ್ತುತ ದರ್ಶನ್ ಅವರು ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ವಿಚಾರಗಳನ್ನು ಕ್ರಾಂತಿ ಪ್ರಮೋಷನ್ ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ನಮಗೆಲ್ಲಾ ಗೊತ್ತಿರುವ ಹಾಗೆ ಕ್ರಾಂತಿ ಸಿನಿಮಾ ಕಥೆ ಇರುವುದು ಅಕ್ಷರ ಕ್ರಾಂತಿಯ ಬಗ್ಗೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಬಗ್ಗೆ ಕ್ರಾಂತಿ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಈ ಸಿನಿಮಾಗೆ ಮಾಧ್ಯಮಗಳಲ್ಲಿ ಪ್ರೊಮೋಷನ್ ಮಾಡದೆ ಇರುತ್ತಿರುವ ಕಾರಣ, ಡಿಬಾಸ್ ದರ್ಶನ್ ಅವರು ಯೂಟ್ಯೂಬ್ ಚಾನೆಲ್ ಗಳಿಗೆ ಕ್ರಾಂತಿ ಸಿನಿಮಾ ಬಗ್ಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಅವುಗಳಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಿಬಾಸ್. ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ, ಚಿತ್ರರಂಗದಲ್ಲಿ ಸ್ಟಾರ್ ವಾರ್ ಗಳು ಆಗುವುದು ಯಾಕೆ, ಅದಕ್ಕೆ ಕಾರಣ ಏನು ಎಂದು ತಿಳಿಸಿದ್ದಾರೆ ಡಿಬಾಸ್, ಮೊದಲಿಗೆ ತಾವು ಕಥೆ ಆಯ್ಕೆ ಮಾಡುವುದು ಹೇಗೆ ಎಂದು ಮಾತನಾಡಿರುವ ದರ್ಶನ್ ಅವರು, ಕಥೆ ಕಮರ್ಷಿಯಲ್ ಆಗಿದ್ದರು ಕೂಡ ಸಾಮಾಜಿಕ ಕಳಕಳಿ ಇರಬೇಕು, ಮತ್ತೊಬ್ಬ ನಟನಿಗೆ ಕೌಂಟರ್ ಕೊಡುವಂಥ ಡೈಲಾಗ್ ಅದೆಲ್ಲವೂ ಇರಬಾರದು ಎಂದು ಮೊದಲೇ ಹೇಳಿರುತ್ತೇನೆ ಎಂದು ಹೇಳಿದ್ದಾರೆ ಡಿಬಾಸ್. ಇದನ್ನು ಓದಿ..Biggboss Kannada: ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್. ಯಾರ್ಯಾರು ಹೊರಬಂದರು ಗೊತ್ತೇ??

ಹಾಗೆಯೇ ಸ್ಟಾರ್ ವಾರ್ ಗಳಿಗೆ ಕಾರಣ ಏನು ಎಂದು ಕೂಡ ತಿಳಿಸಿದ್ದಾರೆ, “ರೈಟರ್ ಗಳು ಯಾವುದೋ ದ್ವೇಷಕ್ಕೆ ಈ ಥರ ಮಾಡ್ತಾರೆ..ಸ್ಟಾರ್ ವಾರ್ ಎಲ್ಲಾ ಫ್ಯಾನ್ಸ್ ಗಳು ಹೀರೋಗಳು ಮಾಡೋದಲ್ಲ ನಿರ್ದೇಶಕರು ಮತ್ತು ಬರಹಗಾರರು ಮಾಡೋ ಕೋತಿ ಕೆಲಸ ಅದು. ನಾನು ಒಬ್ರಿಗೇ ಡೇಟ್ಸ್ ಕೊಟ್ಟಿರೋದಿಲ್ಲ. ಅವರು ಇನ್ನೊಬರ ಹತ್ತಿರ ಹೋಗಿ ಈ ಥರ ಎಲ್ಲ ಬರೆಸಿಬಿಡ್ತಾರೆ. ಅದನ್ನ ನೋಡಿದ್ರೆ ನಮ್ ಹುಡುಗರಿಗೆ ಕೋಪ ಬರುತ್ತೆ. ಇಲ್ಲಿ ಮಾಡಿದ ಇನ್ನೊಬ್ಬ ಹೀರೊಗೂ ಗೊತ್ತಿರಲ್ಲ, ನಾನು ಹೇಳಿರಲ್ಲ. ಇದೆಲ್ಲಾ ಇವರುಗಳು ಮಾಡೋ ಕಿತಾಪತಿ. ಅದ್ರಿಂದನೆ ಇದೆಲ್ಲ ಬೇಡ ಅಂತ ಹೇಳ್ತಿನಿ..” ಎಂದು ಹೇಳಿದ್ದಾರೆ ಡಿಬಾಸ್. ಇದನ್ನು ಓದಿ.. Kannada News: ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತ ರವಿ ಚಂದ್ರನ್, ಕುಲಾಯಿಸಿದ ಅದೃಷ್ಟ ಏನು ಗೊತ್ತೇ?

Leave A Reply

Your email address will not be published.