Neer Dose Karnataka
Take a fresh look at your lifestyle.

Kannada News: ತನ್ನ ಸ್ವಂತ ತಂಗಿ ಮದುವೆಗೆ ಹೋಗದೆ ಇರುವುದಕ್ಕೆ ಕಾರಣ ಸಮೇತ ಹೇಳಿಕೆ ಕೊಟ್ಟ ಸಂಜನಾ: ಯಾಕೆ ಅಂತೇ ಗೊತ್ತೇ??

Kannada News: ನಟಿ ಸಂಜನಾ ಗಲ್ರಾನಿ (Sanjana Galrani) ಅವರು ಸಿನಿಮಾಗಿಂತ ಹೆಚ್ಚಾಗಿ ಬೇರೆ ವಿಚಾರಗಳಿಂದಲೇ ಸುದ್ದಿಯಲ್ಲಿರುತ್ತಾರೆ. ತೆಲುಗು ಸಿನಿಮಾ ಮೂಲಕ ನಟನೆ ಶುರು ಮಾಡಿದ ಸಂಜನಾ ಅವರು 2006ರಲ್ಲಿ ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದರು. ರವಿಚಂದ್ರನ್ ಅವರಂತಹ ದೊಡ್ಡ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕತು, ಹಲವು ಸಿನಿಮಾಗಳಲ್ಲಿ ನಟಿಸಿದರು ಕೂಡ, ಸಂಜನಾ ಅವರಿಗೆ ಸ್ಟಾರ್ ನಟಿ ಎನ್ನಿಸಿಕೊಳ್ಳುವ ಸ್ಟೇಟಸ್ ಸಿಗಲಿಲ್ಲ ಎಂದು ಹೇಳಬಹುದು.

ಸಂಜನಾ ಅವರ ತಂಗಿ ನಿಕ್ಕಿ ಗಲ್ರಾನಿ (Nikki Galrani) ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಿಕ್ಕಿ ಗಲ್ರಾನಿ ಅವರು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಹ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಿಕ್ಕಿ ಗಲ್ರಾನಿ ಅವರ ಮದುವೆ ಆಯಿತು, ತೆಲುಗು ಚಿತ್ರರಂಗದ ಖ್ಯಾತ ನಟ ಆದಿ ಪಿನಿಸೆಟ್ಟಿ (Adi Pinisetty) ಅವರೊಡನೆ ನಿಕ್ಕಿ ಗಲ್ರಾನಿ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಆದರೆ ತಂಗಿ ನಿಕ್ಕಿ ಮದುವೆಗೆ ಅಕ್ಕ ಸಂಜನಾ ಅವರೇ ಬಂದಿರಲಿಲ್ಲ. ಅದಕ್ಕೆ ಕಾರಣ ಏನು ಎಂದು ಇತ್ತೀಚಿನ ಸಂದರ್ಶನದಲ್ಲಿ ಸಂಜನಾ ಅವರು ತಿಳಿಸಿದ್ದಾರೆ.

ಸಂಜನಾ ಅವರು ಹೇಳಿರುವ ಹಾಗೆ, “ನಿಕ್ಕಿ ಮದುವೆ ಮುಹೂರ್ತ ರಾತ್ರಿ 2:30ಕ್ಕೆ ಇತ್ತು, ನನಗೆ ಬೆಳಗ್ಗೆ 6:30ಕ್ಕೆ ಡೆಲಿವರಿಗೆ ಟೈಮ್ ಕೊಟ್ಟಿದ್ರು, 9 ತಿಂಗಳು ತುಂಬಿದ್ದ ಗರ್ಭಿಣಿ, 10 ಗಂಟೆಗಳ ಪ್ರಯಾಣ ಹೇಗೆ ಮಾಡೋದು. ನಾನು ಬೆಂಗಳೂರಿನಲ್ಲಿ ಇದ್ದೆ, ಅವಳು ಚೆನ್ನೈನಲ್ಲಿ ಇದ್ದಳು, ಇದರಿಂದ ನನಗೆ ಹೋಗೋದಕ್ಕೆ ಆಗ್ಲಿಲ್ಲ. ತಂಗಿ ಲೈಫ್ ಚೆನ್ನಾಗಿ ಸೆಟ್ಲ್ ಆಗಿರೋದು ತುಂಬಾ ಸಂತೋಷ ಆಗುತ್ತೆ..” ಎಂದು ಹೇಳಿದ್ದಾರೆ ಸಂಜನಾ ಗಲ್ರಾನಿ. ತಮ್ಮ ತಂಗಿ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

Comments are closed.