Neer Dose Karnataka
Take a fresh look at your lifestyle.

Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Airtel Plans Kannada: ನಮ್ಮ ದೇಶದ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿರುವ ಎರಡನೇ ಸಂಸ್ಥೆ ಏರ್ಟೆಲ್. ಈ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಪ್ಲಾನ್ ಗಳನ್ನು ನೀಡುತ್ತಿದೆ, ಕಡಿಮೆ ಬೆಲೆಯ ಪ್ಲಾನ್ ಗಳಲ್ಲಿ ಉತ್ತಮ ಪ್ರಯೋಜನಗಳನ್ನು ಏರ್ಟೆಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುತ್ತಿದೆ. ವ್ಯಾಲಿಡಿಟಿ ಹೆಚ್ಚಿಸಿಕೊಳ್ಳುವುದರ ಜೊತೆಗೆ, ಉತ್ತಮ ಯೋಜನೆಗಳು ಈ ಮೂಲಕ ಸಿಗುತ್ತಿದೆ. ಕರೆ ಮತ್ತು ಇಂಟರ್ನೆಟ್ ಮಾತ್ರವಲ್ಲದೆ ಓಟಿಟಿ ಪ್ಲಾಟ್ ಫಾರ್ಮ್ subscription ಕೂಡ ಸಿಗುತ್ತದೆ..

ಈಗ ಟೆಲಿಕಾಂ ಕಂಪನಿಗಳು ಓಟಿಟಿ ಪ್ಲಾಟ್ ಫಾರ್ಮ್ ಗಳ ಜೊತೆಗೆ ಮಾತನಾಡಿಕೊಂಡು, ಗ್ರಾಹಕರಿಗೆ ರೀಚಾರ್ಜ್ ಜೊತೆಗೆ ಓಟಿಟಿ ಚಂದಾದಾರಿಕೆ ನೀಡುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಅಂಥದ್ದೇ ಒಂದು ಪ್ಲಾನ್ ಅನ್ನು ಈಗ ಏರ್ಟೆಲ್ ಸಂಸ್ಥೆ ಸಹ ತಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ಮೂರು ತಿಂಗಳ ವರೆಗು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಸಿಗುತ್ತದೆ, ಜೊತೆಗೆ ಸಾಕಷ್ಟು ಪ್ರಯೋಜನಗಳು ಕೂಡ ಸಿಗುತ್ತದೆ. ಈ ಪ್ಲಾನ್ ಯಾವುದು, ಇದರಿಂದ ಸಿಗುವ ಪ್ರಯೋಜನಗಳೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ಒಂದು ಕಾಲದ ಬಿಗ್ ಬಾಸ್ ನಲ್ಲಿ ಪ್ರತಿ ಹುಡುಗರ ವೋಟ್ ಪಡೆದಿದ್ದ ಚಂದನಾಗೆ ಮದುವೆ ಭಾಗ್ಯ: ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತೇ?

ಒಂದೇ ಪ್ಲಾನ್ ನಲ್ಲಿ ಎಲ್ಲಾ ಪ್ರಯೋಜನ ಸಿಗುತ್ತಿರು ಏರ್ಟೆಲ್ ನ ಈ ಪ್ಲಾನ್, 499 ರೂಪಾಯಿಯ ಪ್ಲಾನ್ ಆಗಿದೆ. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಕರೆಗಳು. ಅಷ್ಟೇ ಅಲ್ಲದೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ, ಅದರ ಜೊತೆಗೆ ಏರ್ಟೆಲ್ ಥ್ಯಾಂಕ್ಸ್, ಏರ್ಟೆಲ್ ಹಲೋ ಟ್ಯೂನ್ಸ್ ಚಂದಾದಾರಿಕೆ ಸಿಗುತ್ತದೆ. ಜೊತೆಗೆ ಫಾಸ್ಟ್ ಟ್ಯಾಗ್ ನಲ್ಲಿ, 100 ರೂಪಾಯಿವರೆಗು ಕ್ಯಾಶ್ ಬ್ಯಾಕ್ ಸಹ ಸಿಗುತ್ತದೆ. ಈ ಪ್ಲಾನ್ ನ ಅವಧಿ ಬರೋಬ್ಬರಿ 3 ತಿಂಗಳು. 499 ರೂಪಾಯಿಯ ರೀಚಾರ್ಜ್ ಗೆ ಮೂರು ತಿಂಗಳ ಕಾಲ ನೀವು ಈ ಪ್ಲಾನ್ ನ ಸೌಲಭ್ಯಗಳನ್ನು ಆನಂದಿಸಬಹುದು. ಇದನ್ನು ಓದಿ..Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??

Comments are closed.