Kannada News: ಎಲ್ಲರೂ ಕಾಂತಾರ ನೋಡಿ ನಟನೆ ಚೆನ್ನಾಗಿದೆ ಎನ್ನುತ್ತಿರುವಾಗ ಮಲಯಾಳಂ ನಟ ಹೇಳಿದ್ದೆ ಬೇರೆ?? ಏನು ಹೇಳಿದ್ದಾರೆ ಗೊತ್ತೇ?
Kannada News: ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸುವರ್ಣ ಸಮಯ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಅಂತಹ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ..ಪ್ರಸ್ತುತ ಎಲ್ಲರೂ ಮಾತನಾಡುತ್ತಾ ಇರುವುದು ಕಾಂತಾರ (Kantara) ಸಿನಿಮಾ ಬಗ್ಗೆ. ಈ ಸಿನಿಮಾವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಜನರಿಂದ ಹಿಡಿದು ಭಾರತ ಚಿತ್ರರಂಗದ ಸ್ಟಾರ್ ನಟರು ಕೂಡ ಕಾಂತಾರ ಸಿನಿಮಾ ನೋಡಿ ಇಷ್ಟಪಟ್ಟು ಮೆಚ್ಚುಗೆ ಸೂಚಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ರಿಷಬ್ ಶೆಟ್ಟಿ (Rishab Shetty) ಅವರನ್ನು ಕರೆಸಿ ಸನ್ಮಾನ ಮಾಡಿದ್ದರು..

ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಲಯಾಳಂ ನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಕಾಂತಾರ ಸಿನಿಮಾ ಬಗ್ಗೆ ಬೇರೆಯದೇ ಹೇಳಿಕೆ ನೀಡಿದ್ದಾರೆ. ಮಲಯಾಳಂ ನಲ್ಲಿ ಕಾಂತಾರ ಸಿನಿಮಾವನ್ನು ಪ್ರಸ್ತುತ ಪಡಿಸಿದ್ದು ಪೃಥ್ವಿರಾಜ್ ಸುಕುಮಾರನ್ ಅವರೇ ಆಗಿದ್ದು, ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮತ್ತೊಮ್ಮೆ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ, ತಮ್ಮದೊಂದು ಆಸೆಯನ್ನು ತಿಳಿಸಿದ್ದಾರೆ. ಇದನ್ನು ಓದಿ..Kannada News: ಒಂದು ಕಾಲದ ಬಿಗ್ ಬಾಸ್ ನಲ್ಲಿ ಪ್ರತಿ ಹುಡುಗರ ವೋಟ್ ಪಡೆದಿದ್ದ ಚಂದನಾಗೆ ಮದುವೆ ಭಾಗ್ಯ: ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತೇ?
“2022ರಲ್ಲಿ ಎಲ್ಲಾ ಚಿತ್ರರಂಗದಿಂದಲು ಒಳ್ಳೆಯ ಸಿನಿಮಾಗಳು ಬಂದಿವೆ, ಆದರೆ ನನ್ನನ್ನು ಹೆಚ್ಚು ಕಾಡಿದ್ದು ಕಾಂತಾರ ಸಿನಿಮಾ, ಆ ಸಿನಿಮಾ ಮಲಯಾಳಂ ನಲ್ಲಿ ಬರಬೇಕಿತ್ತು, ನಾನು ಆ ಸಿನಿಮಾದಲ್ಲಿ ನಟಿಸಬೇಕಿತ್ತು..” ಎಂದು ಪೃಥ್ವಿ ರಾಜ್ ಸುಕುಮಾರನ್ ಅವರು ಹೇಳಿದ್ದಾರೆ. ಕಾಂತಾರ ಸಿನಿಮಾ 50 ದಿನ ಪೂರೈಸಿ, ಓಟಿಟಿಗೆ ಎಂಟ್ರಿ ಕೊಟ್ಟಿದ್ದರು ಕೂಡ ಜನರು ಥಿಯೇಟರ್ ಗೆ ಬಂದು ಕಾಂತಾರ ಸಿನಿಮಾ ನೋಡುತ್ತಿದ್ದಾರೆ.400 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ, ಹಿಂದಿಯಲ್ಲೇ 75 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಇದನ್ನು ಓದಿ.. Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??
Comments are closed.