Neer Dose Karnataka
Take a fresh look at your lifestyle.

Cricket News: ಕೊನೆಯಲ್ಲಿ ಬಂದರು ಮಾಸ್ ಎಂಟ್ರಿ ಕೊಟ್ಟ ಶ್ರೇಯಸ್: ವರ್ಷವೆಲ್ಲ ಮಿಂಚಿದ್ದ ಸೂರ್ಯ ರನ್ನು ಹಿಂದಿಕ್ಕಿದ್ದು ಹೇಗೆ ಗೊತ್ತೆ?

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಪಂದ್ಯಗಳ ಸರಣಿ ಶುರುವಾಗಿ, ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡದೆ ಇದ್ದರು ಕೂಡ, ನಂತರ ಬಂದ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶ್ ತಂಡಕ್ಕೆ 404 ರನ್ ಗಳ ಗುರಿ ನೀಡಿದರು. ಶ್ರೇಯಸ್ ಅಯ್ಯರ್ (Shreyas Iyer), ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತು ಚೇತೇಶ್ವರ್ ಪೂಜಾರ (Cheteshwar Poojara) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡ ಒಳ್ಳೆಯ ಸ್ಕೋರ್ ಮಾಡಿತು.

ಈ ಇನ್ನಿಂಗ್ಸ್ ನಲ್ಲಿ ಶ್ರೇಯಸ್ ಅಯ್ಯರ್ ಅವರು ಭರ್ಜರಿ 86 ರನ್ಸ್ ಗಳಿಸಿದರು. ಈ ವರ್ಷ ಮುಗಿಯುವ ಸಮಯಕ್ಕೆ ಫಾರ್ಮ್ ಗೆ ಬಂದಿರುವ ಶ್ರೇಯಸ್ ಅಯ್ಯರ್ ಅವರು, ಈ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಒಂದು ದೊಡ್ಡ ಸಾಧನೆ ಮಾಡಿದ್ದಾರೆ. ಈ ವರ್ಷ ಭಾರತ ತಂಡದ ಪರವಾಗಿ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ಆಟಗಾರ ಆಗಿದ್ದಾರೆ ಶ್ರೇಯಸ್ ಅಯ್ಯರ್. ಒಟ್ಟು 38 ಇನ್ನಿಂಗ್ಸ್ ಗಳಲ್ಲಿ 1489 ರನ್ಸ್ ಭಾರಿಸಿದ್ದಾರೆ. ಓಡಿಐ ನಲ್ಲಿ ಉತ್ತಮ ಪ್ರದರ್ಶನ ನೀಡಿ, 15 ಇನ್ನಿಂಗ್ಸ್ ಗಳಲ್ಲಿ 724 ರನ್ಸ್ ಗಳಿಸಿದ್ದಾರೆ, ಇವರ ಸ್ಟ್ರೈಮ್ ರೇಟ್ 91.52 ಇತ್ತು. ಇದರಲ್ಲಿ 6 ಅರ್ಧಶತಕ ಕೂಡ ಸೇರಿದೆ. ಇದನ್ನು ಓದಿ..Cricket News: ಸತತ ಸೆಂಚುರಿ ಬಾರಿಸಿ ದೇಶದ ಮನೆಗೆದ್ದಿದ್ದರೂ ಋತುರಾಜ್ ಗೆ ಚಾನ್ಸ್ ಸಿಗಲ್ಲ ಎಂದು ನೇರವಾಗಿ ಹೇಳಿಬಿಟ್ಟ ಅಶ್ವಿನ್. ಯಾಕೆ ಅಂತೇ ಗೊತ್ತೇ? ಕಾರಣ ಏನು ಅಂತೇ ಗೊತ್ತೆ?

ಟೆಸ್ಟ್ ಪಂದ್ಯಗಳಲ್ಲೂ ಉತ್ತಮವಾಗಿ ಆಡಿರುವ ಶ್ರೇಯಸ್ ಅಯ್ಯರ್ ಅವರು, 6 ಇನ್ನಿಂಗ್ಸ್ ಗಳಲ್ಲಿ 60.40ಆವರೇಜ್ ನಲ್ಲಿ 302 ರನ್ಸ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಇದೆ. ಆದರೆ ಟಿ20 ಪಂದ್ಯಗಳಲ್ಲಿ ಅಂದುಕೊಂಡ ಹಾಗೆ ಪ್ರದರ್ಶನ ನೀಡಿಲ್ಲ. 17 ಇನ್ನಿಂಗ್ಸ್ ನಲ್ಲಿ 35.61ಆವರೇಜ್, 141.15 ಸ್ಟ್ರೈಕ್ ರೇಟ್ ನಲ್ಲಿ 463 ರನ್ಸ್ ಗಳಿಸಿದ್ದಾರೆ. ಆದರೆ ಟಿ20 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದವರು ಸೂರ್ಯಕುಮಾರ್ ಯಾದವ್ (Suryakumar Yadav), ಇವರು 31 ಇನ್ನಿಂಗ್ಸ್ ಗಳಲ್ಲಿ 1164 ರನ್ಸ್ ಗಳಿಸಿದ್ದಾರೆ. ಏಕದಿನ ಸರಣಿಗಳಲ್ಲಿ 12 ಪಂದ್ಯಗಳಲ್ಲಿ 260 ರನ್ಸ್ ಗಳಿಸಿದ್ದಾರೆ. ಹೀಗೆ ಶ್ರೇಯಸ್ ಅಯ್ಯರ್ ಅವರು ಮೂರು ಮಾದರಿಯ ಪಂದ್ಯಗಳಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ್ದಾರೆ. ಇದನ್ನು ಓದಿ.. Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.