Neer Dose Karnataka
Take a fresh look at your lifestyle.

Kannada News: ಬಾಕ್ಸ್ ಆಫೀಸ್ ನಲ್ಲಿ ಅಬ್ಬರಸಿ ಬೊಬ್ಬಿರದ ಅವತಾರ್ 2: ಚಿಂದಿ ಚಿತ್ರಾನ್ನ ಆಯಿತು ಗಲ್ಲಾಪೆಟ್ಟಿಗೆ. ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ??

1,434

Kannada News: ಹಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಅವತಾರ2 ಈ ಶುಕ್ರವಾರ ತೆರೆಕಂಡು, ವಿಶ್ವಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅವತಾರ್ ಸಿನಿಮಾದ ಮೊದಲ ಭಾಗ 2009ರಲ್ಲಿ ತೆರೆಕಂಡಿತ್ತು, 13 ವರ್ಷಗಳ ನಂತರ, ಎರಡನೇ ಭಾಗ ತೆರೆಕಂಡಿತ್ತು, ಭಾರತದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಹಾಲಿವುಡ್ ಸಿನಿಮಾಗಳಲ್ಲಿ ಅತಿಹೆಚ್ಚು ಹಣಗಳಿಕೆ ಮಾಡಿದ ಸಿನಿಮಾಗಳಲ್ಲಿ ಅವತಾರ್2 ಸಹ ಸೇರಿಕೊಂಡಿದೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಮೊದಲ ದಿನ ಭಾರತದಲ್ಲಿ ಅವತಾರ್ 2 ಸಿನಿಮಾ ಮಾಡಿರುವ ಕಲೆಕ್ಷನ್ ಬರೋಬ್ಬರಿ 41 ಕೋಟಿ ರೂಪಾಯಿ ಆಗಿದೆ. ಇದೇ ವರ್ಷ ತೆರೆಕಂಡಿದ್ದ ಡಾಕ್ಟರ್ ಸ್ಟ್ರೆಂಜ್2 ಸಿನಿಮಾ ಮೊದಲ ದಿನವೇ ಭಾರತದಲ್ಲಿ 27.50 ಕೋಟಿ ರೂಪಾಯಿ ಹಣಗಳಿಕೆ ಮಾಡಿತ್ತು. ಇದರ ಕಲೆಕ್ಷನ್ ಅನ್ನು ಅವತಾರ್2 ಸಿನಿಮಾ ಮುರಿದಿದೆ. ಅವತಾರ್2 ಸಿನಿಮಾ ನೋಡಲು ಜನರು ಮುಗಿಬಿದ್ದು ಥಿಯೇಟರ್ ಗೆ ಬರುತ್ತಿದ್ದಾರೆ. ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿದ್ದು, ಎರಡನೇ ಮತ್ತು ಮೂರನೆಯ ದಿನವೂ ಭರ್ಜರಿಯ ಬುಕಿಂಗ್ ನಡೆದಿದೆ. ಇದನ್ನು ಓದಿ..Kannada News: ಯಾರು ಏನೇ ಅರುಚಿದರೂ ಆಕೆಯೇ ನಂಬರ್ 1: ಕನ್ನಡದ ಟಾಪ್ 5 ಜನಪ್ರಿಯ ನಟಿಯರು ಯಾರ್ಯಾರು ಗೊತ್ತೇ?

ಅವತಾರ್2 ಸಿನಿಮಾ ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಿಗೆ ಡಬ್ ಆಗಿ, 2ಡಿ ಮತ್ತು 3ಡಿ ಯಲ್ಲಿ ಬಿಡುಗಡೆ ಆಗಿದೆ. 1000ಕ್ಕಿಂತ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ಮೂರು ದಿನದಲ್ಲೇ 100ಕೋಟಿ ಕ್ಲಬ್ ಸೇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇಷ್ಟು ದೊಡ್ಡ ದಾಖಲೆ ಮಾಡಿದ ಅವತಾರ್2 ಸಿನಿಮಾ, ಅದೊಂದು ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಅದೇನು ಎಂದರೆ, ಆವೆಂಜರ್ಸ್ ಎಂಡ್ ಗೇಮ್ ಸಿನಿಮಾ ಭಾರತದಲ್ಲಿ ಮೊದಲ ದಿನ 53.10ಕೋಟಿ ಹಣಗಳಿಕೆ ಮಾಡಿತ್ತು, ಆ ಗಳಿಕೆಯನ್ನು ಅವತಾರ್2 ಸಿನಿಮಾ ಮುರಿಯಲು ಸಾಧ್ಯವಾಗಿಲ್ಲ. ಇದನ್ನು ಓದಿ..Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Leave A Reply

Your email address will not be published.