Neer Dose Karnataka
Take a fresh look at your lifestyle.

Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

858

Aadhar Card: ಆಧಾರ್ ಕಾರ್ಡ್ ಭಾರತದ ಪ್ರಜೆಗಳಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ಪ್ರೂಫ್ ಆಗಿದೆ. ಆದರೆ ಬಹುತೇಕ ಎಲ್ಲರ ಆಧಾರ್ ಕಾರ್ಡ್ ಗಳಲ್ಲಿ ಫೋಟೋದೆ ಸಮಸ್ಯೆ ಇರುತ್ತದೆ. ಸರ್ಕಾರದ ಕುರಿತ ಯಾವುದೇ ವಿಷಯ ಇದ್ದರು ಕೂಡ, ಆಧಾರ್ ಕಾರ್ಡ್ ಬೇಕೇ ಬೇಕು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೆನ್ನಾಗಿಲ್ಲದೆ ಇದ್ದರೆ ಅದನ್ನು ತೆಗೆದುಕೊಂಡು ಹೋಗೋದಕ್ಕೆ ನೀವು ಮುಜುಗರ ಪಡುತ್ತೀರಿ. ಈ ಥರದ ಸಮಸ್ಯೆ ನಿಮಗೆ ಇದ್ದರೆ, ಇಂದು ನಿಮಗೆ ಒಂದು ಸೊಲ್ಯೂಷನ್ ಕೊಡುತ್ತೇವೆ. ಈ ರೀತಿ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ನೀವೇ ಬದಲಾಯಿಸಿಕೊಳ್ಳಬಹುದು.

ಈಗ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದು ಮತ್ತಷ್ಟು ಸುಲಭ ಆಗಿದೆ. ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ, ಮೊಬೈಲ್ ನಂಬರ್, ಡೆತ್ ಆಫ್ ಬರ್ತ್ ಇವುಗಳನ್ನು ಬದಲಾಯಿಸಬಹುದು. ಇದನ್ನು ನೀವು UIDAI ವೆಬ್ದೈಟ್ ಗೆ ಹೋಗಿ ಸರಿಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ತಿದ್ದುಪಡಿ ಮಾಡಿಕೊಳ್ಳುವುದು ಗೊತ್ತಿಲ್ಲವಾದರೆ, ಇಂದು ನಾವು ನಿಮಗೆ ಅದರ ಬಗ್ಗೆ ತಿಳಿಸಿಕೊಡುತ್ತೇವೆ. ಆ ರೀತಿ ನೀವು ಮಾಡಿದರೆ ಸಾಕು, ಫೋಟೋವನ್ನು ನೀವೇ ಬದಲಾವಣೆ ಮಾಡಿಕೊಳ್ಳಬಹುದು. ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. Technology: ನಿಮ್ಮ ವಾಟ್ಸಪ್ಪ್ ಫೋಟೋ ಅನ್ನು ಯಾರ್ಯಾರು ನೋಡಿದ್ದರೆ ಏನು ತಿಳಿಯಬೇಕೇ? ಇಲ್ಲಿದೆ ನೋಡಿ ಸುಲಭ ಮಾರ್ಗ.

*ಮೊದಲಿಗೆ ನೀವು UIDAI ವೆಬ್ಸೈಟ್ ಗೆ ಹೋಗಿ, ಅದರಲ್ಲಿ ಆಧಾರ್ ಕಾರ್ಡ್ ವಿಭಾಗವನ್ನು ಆಯ್ಕೆ ಮಾಡಿ.
*ಇದರಲ್ಲಿ ಆಧಾರ್ ಅಪ್ಡೇಟ್ ಫಾರ್ಮ್ ಅನ್ನು ಆಯ್ಕೆ ಮಾಡಿ, ಅದನ್ನು ಡೌನ್ಲೋಡ್ ಮಾಡಿ.
*ಈ ಫಾರ್ಮ್ ಫಿಲ್ ಮಾಡಿ, ನಂತರ ದಾಖಲಾತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಸಲ್ಲಿಸಿ.
*ಅಲ್ಲಿ ಮತ್ತೊಮ್ಮೆ ನಿಮ್ಮ ಬಯೋಮೆಟ್ರಿಕ್ ನ ವಿವರಗಳನ್ನು ತೆಗೆದುಕೊಳ್ಳುತ್ತಾರೆ.
*ಈ ಕೆಲಸವನ್ನು ಪೂರ್ತಿ ಮಾಡಲು ನೀವು ₹100 ರೂಪಾಯಿ ಪಾವತಿ ಮಾಡಬೇಕು.
*ಈ ಪ್ರಕ್ರಿಯೆ ಪೂರ್ತಿಯಾದ ನಂತರ, ನಿಮಗೆ acknowledgement ನೀಡಲಾಗುತ್ತದೆ.
*ಅದರಲ್ಲಿ ಒಂದು URL ಇರುತ್ತದೆ, ಅದರ ಮೂಲಕ ನೀವು ಬದಲಾವಣೆ ಆಗಿದೆಯೇ ಎಂದು ಚೆಕ್ ಮಾಡಬಹುದು.
*ಬಳಿಕ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಅಪ್ಡೇಟ್ ಆಗಿರುತ್ತದೆ. ಇದನ್ನು ಓದಿ.. Railway Recruitment: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ರೈಲ್ವೆ ನಲ್ಲಿ ಇದೆ ಉದ್ಯೋಗ; ಹೇಗೆ ಸೇರಿಕೊಳ್ಳಬೇಕು ಗೊತ್ತೇ??

Leave A Reply

Your email address will not be published.