Neer Dose Karnataka
Take a fresh look at your lifestyle.

Kannada Astrology: ನಿಧಾನವಾಗಿ ಚಲಿಸುವ ಶನಿ ದೇವನ ಸ್ಥಾನ ಬದಲಾವಣೆ: ಇನ್ನು ಮುಂದೆ ಇವರ ಜೀವನವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಶನಿದೇವರು ಕರ್ಮಫಲದಾತ, ಒಬ್ಬ ವ್ಯಕ್ತಿ ಮಾಡುವ ಕೆಲಸದ ಮೇಲೆ ಫಲ ನೀಡುತ್ತಾನೆ. ಯಾರದ್ದೇ ಜಾತಕ ಅಥವಾ ರಾಶಿಯ ಮೇಲೆ ಶನಿದೇವರ ಅನುಗ್ರಹ ಇದ್ದರೆ, ಅವರು ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾರೆ. ಆದರೆ ಶನಿದೇವರ ವಕ್ರ ದೃಷ್ಟಿ ಬೀರಿದರೆ, ಆ ವ್ಯಕ್ತಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಇದೀಗ ಹೊಸ ವರ್ಷಕ್ಕೆ ಶನಿದೇವರ ಸ್ಥಾನ ಬದಲಾವಣೆ ಆಗಲಿದ್ದು, ಶನಿಯು ತನ್ನದೇ ಆದ ಕುಂಭ ರಾಶಿಗೆ 12 ವರ್ಷಗಳ ನಂತರ ಪ್ರವೇಶ ಮಾಡುತ್ತಿದ್ದಾನೆ. ಇದರಿಂದಾಗಿ, ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು? ಅವುಗಳ ಮೇಲೆ ಬೀರುವ ಪರಿಣಾಮ ಏನು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಬಹಳಷ್ಟು ಒಳ್ಳೆಯದನ್ನು ಮಾಡಲಿದೆ, ಇವರ ಆದಾಯದಲ್ಲಿ ಹೆಚ್ಚಳವಾಗುತ್ತದೆ, ಹಿರಿಯರ ಆಸ್ತಿ ವಿಷಯದಲ್ಲಿ ಇವರಿಗೆ ಲಾಭ ಸಿಗುತ್ತದೆ. ಬ್ಯುಸಿನೆಸ್ ಗಾಗಿ ಕೆಲಸ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಉದ್ಯೋಗದಲ್ಲಿ ಆಗುವ ಬದಲಾವಣೆ ನಿಮಬೆ ಯಶಸ್ಸು ನೀಡುತ್ತದೆ.

ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ, ಶನಿದೇವರ ಕೃಪೆಯಿಂದ ನಿಮ್ಮ ರಾಶಿಯವರಿಗೆ ಕೆಲಸದಲ್ಲಿ ಆಗುವ ಎಲ್ಲಾ ತೊಂದರೆಗಳಿಗೂ ಪರಿಹಾರ ಸಿಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಒಳ್ಳೆಯ ಸ್ಥಾನಕ್ಕೆ ಹೋಗುವುದರ ಜೊತೆಗೆ, ಆದಾಯದಲ್ಲಿ ಹೆಚ್ಚಳ ಕಾಣುತ್ತೀರಿ. ಹೆಚ್ಚು ಹಣ ಪಡೆಯುತ್ತೀರಿ. ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ..

ಮಿಥುನ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡಲಿದೆ, ಎರಡೂವರೆ ವರ್ಷಗಳ ನಂತರ ಈ ರಾಶಿಯವರಿಗೆ ಒಳ್ಳೆಯ ಪರಿಹಾರ ಸಿಗಲಿದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಕೆಲಸದಲ್ಲಿ ಲಾಭ ಮತ್ತು ಹಿರಿಯರ ಆಸ್ತಿಯಲ್ಲಿ ಲಾಭ ಸಿಗುತ್ತದೆ..

ತುಲಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶನಿದೇವರ ಅನುಗ್ರಹ ಸಿಗುತ್ತದೆ. ಜೀವನದಲ್ಲಿ ಏಳಿಗೆ ಕಾಣುತ್ತೀರಿ, ವೃತ್ತಿಯಲ್ಲಿ ಯಶಸ್ಸು ಕಾಣುತ್ತೀರಿ. ನಿಮಗೆ ಆದಾಯ ಮಾತ್ರವಲ್ಲ ಅದರ ಜೊತೆಗೆ ಪ್ರತಿಷ್ಠೆ ಕೂಡ ಹೆಚ್ಚಾಗುತ್ತದೆ. ಮದುವೆ ಆಗದೆ ಇರುವವರಿಗೆ, ಕಂಕಣಭಾಗ್ಯ ಕೂಡಿಬರುತ್ತದೆ..

ಧನು ರಾಶಿ :- ಶನಿದೇವರು ಕುಂಭ ರಾಶಿಗೆ ಪ್ರವೇಶಿಸಿದ ನಂತರ, ಏಳುವರೆ ವರ್ಷಗಳ ಕಾಲ ಧನು ರಾಶಿಯಿಂದ ದೂರವಾಗುತ್ತದೆ. ಇದರಿಂದ ಇವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ, ಬಹಳ ಸಮಯದ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ. ಇವರ ನೋವುಗಳು ದೂರವಾಗುತ್ತದೆ. ಹಣ ಕಳೆದುಕೊಳ್ಳುತ್ತಿದ್ದ ಸಮಸ್ಯೆ ದೂರವಾಗುತ್ತದೆ. ಹಣ ಬರುವ ಮೂಲಗಳು ಜಾಸ್ತಿಯಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಅದೃಷ್ಟದ ಬೆಂಬಲ ನಿಮಗೆ ಸಿಗುತ್ತದೆ.

Comments are closed.