Neer Dose Karnataka
Take a fresh look at your lifestyle.

Biggboss Kannada: ಪ್ರೇಕ್ಷಕರ ಮನಗೆದ್ದಿದ್ದರೂ ಹೊರಗೆಹೋದ ಅರುಣ್ ಸಾಗರ್: ಕೊನೆಯಲ್ಲಿ ಪಡೆದ ದಾಖಲೆ ಸಂಭಾವನೆ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??

Biggboss Kannada: ಕಲರ್ಸ್ ಕನ್ನಡ (Colors Kannada) ವಾಹಿನಿಯ ಜನಪ್ರಿಯ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಮುಕ್ತಾಯ ಹಂತಕ್ಕೆ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನು ಉಳಿದಿರುವುದು ಕೆಲವು ದಿನಗಳು ಮಾತ್ರ. ಈ ವೀಕೆಂಡ್ ಎಪಿಸೋಡ್ ನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು, 6 ಸ್ಪರ್ಧಿಗಳು ಫಿನಾಲೆ ವೀಕ್ ಗೆ ಕಾಲಿಟ್ಟಿದ್ದಾರೆ. ಫಿನಾಲೆಗೆ ಒಂದು ಹೆಜ್ಜೆ ಇರುವಾಗ ಎಲಿಮಿನೇಟ್ ಆಗಿರುವವರು ಅರುಣ್ ಸಾಗರ್ ಮತ್ತು ಅಮೂಲ್ಯ ಗೌಡ (Amulya Gowda).

ಮನೆಯೊಳಗೆ ಈಗ ದೀಪಿಕಾ ದಾಸ್ (Deepika Das), ದಿವ್ಯ ಉರುಡುಗ (Divya Uruduga), ರೂಪೇಶ್ ಶೆಟ್ಟಿ (Roopesh Shetty), ರಾಕೇಶ್ ಅಡಿಗ (Rakesh Adiga), ರೂಪೇಶ್ ರಾಜಣ್ಣ (Roopesh Rajanna) ಮತ್ತು ಆರ್ಯವರ್ಧನ್ (Aryavardhan) ಗುರೂಜಿ ಇದ್ದಾರೆ. ಅರುಣ್ ಸಾಗರ್ ಅವರು ಭಾನುವಾರ ಎಲಿಮಿನೇಟ್ ಆಗಿದ್ದು ಎಲ್ಲರಿಗೂ ಶಾಕ್ ನೀಡಿತ್ತು, ಏಕೆಂದರೆ ಇವರು ಮನೆಯೊಳಗೆ ಅತ್ಯಂತ ಮನರಂಜನೆ ನೀಡುತ್ತಿದ್ದ ಸ್ಪರ್ಧಿ. ಅರುಣ್ ಸಾಗರ್ (Arun Sagar) ಅವರು ಪ್ರವೀಣರಾಗಿ ಬಿಬಿಕೆ9 ಗೆ ಬಂದಿದ್ದರು. ಮೊದಲ ಸೀಸನ್ ನಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದರು ಅರುಣ್ ಸಾಗರ್. 59 ವರ್ಷ ಆಗಿದ್ದರು ಕೂಡ ಈಗಲೂ ಅವರಲ್ಲಿ ಇರುವ ಹುಮ್ಮಸ್ಸು ಮನೆಯ ಇತರ ಸ್ಪರ್ಧಿಗಳಿಗೆ ಆಶ್ಚರ್ಯ ತಂದಿತ್ತು. ಇದನ್ನು ಓದಿ..Kannada News: ಡೈವೋರ್ಸ್ ಕುರಿತು ನಿಖರ ಭವಿಷ್ಯ ನುಡಿದ್ದ ವೇಣು ಸ್ವಾಮಿ: ಆಸ್ಪತ್ರೆಯಲ್ಲಿ ಇರುವ ಸಮಂತಾ ಆರೋಗ್ಯ ಕುರಿತು ಹೇಳಿದ್ದೇನು ಗೊತ್ತೇ??

ಒಂದಲ್ಲಾ ಒಂದು ರೀತಿ ತರ್ಲೆ ತಮಾಷೆ ಮಾಡುತ್ತಾ, ಜೋಕರ್ ಪಾತ್ರದ ಮೂಲಕ, ಮತ್ತು ಇನ್ನಿತರ ಪಾತ್ರಗಳನ್ನು ತಾವೇ ಕ್ರಿಯೇಟ್ ಮಾಡಿ ಮನೆಯ ಸ್ಪರ್ಧಿಗಳು ಸಂತೋಷವಾಗುವ ಹಾಗೆ ಮಾಡುತ್ತಿದ್ದರು ಅರುಣ್ ಸಾಗರ್. ಜುಗ್ನು ಎನ್ನುವ ಒಂದು ಹೊಸ ಪಾತ್ರವನ್ನು ಕೂಡ ಸೃಷ್ಟಿಸಿದ್ದರು. ಈ ರೀತಿ ಬಹಳ ಎಂಟರ್ಟೈನ್ ಮಾಡುತ್ತಿದ್ದ ಅರುಣ್ ಸಾಗರ್ ಅವರಿಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿತ್ತು, ಇದೀಗ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಷ್ಟು ವಾರಗಳ ಬಿಗ್ ಬಾಸ್ ಮನೆಯೊಳಗೆ ಇದ್ದ ಅರುಣ್ ಸಾಗರ್ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ, ಅರುಣ್ ಸಾಗರ್ ಅವರಿಗೆ ವಾರಕ್ಕೆ 2 ಲಕ್ಷದ ಹಾಗೆ 14 ವಾರಗಳಿಗೆ 28 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.