Neer Dose Karnataka
Take a fresh look at your lifestyle.

Kannada News: ತಂದೆ ನಟ ಅಂತ ಗೊತ್ತು: ಆದರೆ ಅದನ್ನು ಮೀರಿಸಿದ ಪವಿತ್ರ ರವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ? IAS ಆಗಬೇಕಾಗಿದ್ದವರು ನಟಿಯಾಗಿದ್ದು ಯಾಕೆ ಗೊತ್ತೇ??

Kannada News: ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಅವರ ಹೆಸರು ಹೇಳಿದರೆ, ಥಟ್ ಎಂದು ನೆನಪಾಗುವ ಮತ್ತೊಂದು ಹೆಸರು ಪವಿತ್ರಾ ಲೋಕೇಶ್ ಅವರದ್ದು. ಇವರಿಬ್ಬರು ಕೂಡ ಕ್ಯಾರೆಕ್ಟರ್ ಆರ್ಟಿಸ್ಟ್ ಗಳು, ನರೇಶ್ ಅವರು ತೆಲುಗು ಚಿತ್ರರಂಗದ ನಟನಾದರೆ, ಪವಿತ್ರಾ ಲೋಕೇಶ್ ಅವರು ಕನ್ನಡದ ಖ್ಯಾತ ನಟನ ಮಗಳು. ಪವಿತ್ರಾ ಲೋಕೇಶ್ ಅವರು ನರೇಶ್ ಅವರ ವಿಚಾರವಾಗಿ ಬಹಳ ಸುದ್ದಿಯಾಗಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರು ಜೊತೆಯಾಗಿ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಮದುವೆ ಆಗಲಿದ್ದಾರೆ. ಪವಿತ್ರಾ ಲೋಕೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು ಹೆಚ್ಚು ಖ್ಯಾತಿ ಪಡೆದಿರಲಿಲ್ಲ, ಆದರೆ ನರೇಶ್ ಅವರ ವಿಚಾರದಿಂದ ಹೆಚ್ಚು ಸುದ್ದಿಯಾಗಿದ್ದಾರೆ.

ನರೇಶ್ ಅವರ ಜೊತೆಗೆ ಪವಿತ್ರಾ ಅವರು ಕೂಡ ಟ್ರೆಂಡ್ ಆಗುತ್ತಿದ್ದಾರೆ. ಇವರಿಬ್ಬರ ಸುದ್ದಿ ಬಗ್ಗೆ ಕನ್ನಡ ಮತ್ತು ತೆಲುಗು ಮಾಧ್ಯಮಗಳು ಕೂಡ ಹೆಚ್ಚು ಗಮನ ಕೊಟ್ಟು, ಇವರ ವಿಷಯವನ್ನು ಹೈಲೈಟ್ ಮಾಡಿದವು. ಇನ್ನು ಪವಿತ್ರಾ ಅವರ ಜೀವನದ ಬಗ್ಗೆ ಹೇಳುವುದಾದರೆ, ಇವರು ಕರ್ನಾಟಕದವರು. ಪವಿತ್ರಾ ಅವರ ತಂದೆ ಕೂಡ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡವರು. ಪವಿತ್ರಾ ಲೋಕೇಶ್ ಅವರಿಗೆ ಚಿಕ್ಕ ವಯಸ್ಸಿನಿಂದಲು ಸಿನಿಮಾದಲ್ಲಿ ನಟಿಸಲು ಆಸಕ್ತಿ ಇತ್ತು, ತಂದೆ ತೀರಿಹೋದ ನಂತರ ಪವಿತ್ರಾ ಲೋಕೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ, ಎರಡನೇ ನಾಯಕಿಯಾಗಿ ನಟಿಸುತ್ತಿದ್ದರು. ಆದರೆ ಪವಿತ್ರಾ ಲೋಕೇಶ್ ಅವರ ಗುರಿ ಐಎಎಸ್ ಅಧಿಕಾರಿ ಆಗಬೇಕು ಎನ್ನುವುದಾಗಿತ್ತು, ಅದಕ್ಕಾಗಿ ತಯಾರಿ ಕೂಡ ನಡೆಸಿದರು. ತಾವು ಸ್ವಾತಂತ್ರ್ಯವಾಗಿ, ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ನಟಿಸಲು ಶುರು ಮಾಡಿದರು. ಇದನ್ನು ಓದಿ..Kannada News: ದೇಶದ ಮೈ ರೋಮವೇ ಎದ್ದು ನಿಲ್ಲುವಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಸಿನ್ ಬ್ಯಾನ್ ಆಗಿದ್ದು ಯಾಕೆ ಗೊತ್ತೇ?? ಯಪ್ಪಾ ಚಿತ್ರರಂಗದಲ್ಲಿ ಹಿಂಗೆಲ್ಲ ನಡೆಯುತ್ತಾ.

1994ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೀರೋ ಆಗಿದ್ದ ಮಿಸ್ಟರ್ ಅಭಿಷೇಕ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು ಪವಿತ್ರಾ ಲೋಕೇಶ್. ಕೆಲವು ವರ್ಷಗಳ ಕಾಲ ಹೀರೋಯಿನ್, ಎರಡನೇ ನಾಯಕಿಯಾಗಿ ನಟಿಸಿದ ಪವಿತ್ರಾ ಲೋಕೇಶ್ ಅವರು ಬಳಿಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಲು ಶುರು ಮಾಡಿದರು. ಸಿನಿಮಾದಲ್ಲಿ ಎಷ್ಟು ಬ್ಯುಸಿ ಆಗಿದ್ದ ಕಾರಣ ಸಿವಿಲ್ ಸರ್ವಿಸ್ ಗೆ ಸೇರಬೇಕು ಎನ್ನುವ ಆಸೆ ಬಿಡಬೇಕಾಯಿತು. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಒಳ್ಳೆಯ ಅವಕಾಶಗಳು ಇವರಿಗೆ ಸಿಕ್ಕವು. ಕನ್ನಡ ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಮದುವೆಯಾದರು ಪವಿತ್ರಾ ಲೋಕೇಶ್. ಆದರೆ ಅದಕ್ಕಿಂತ ಮೊದಲು ಪವಿತ್ರಾ ಲೋಕೇಶ್ ಅವರಿಗೆ ಮತ್ತೊಂದು ಮದುವೆ ಆಗಿ, ವಿಚ್ಛೇದನ ಪಡೆದಿದ್ದರು. ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಜಗಳವಾಗಿ ಇಬ್ಬರು ದೂರವಾದರು. ನರೇಶ್ ಅವರ ಜೊತೆಗೆ ನಟಿಸುವಾಗ, ಇಬ್ಬರಿಗೂ ಪ್ರೀತಿ ಶುರುವಾಗಿ, ಈಗ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಇದನ್ನು ಓದಿ.. Kannada News: ಮನೆಯಿಂದ ಹೊರಬಂದ ಮೇಲೆ ಸೋನು ರವರಿಗೆ ಕೈ ಕೊಟ್ಟ ರಾಕೇಶ್ ಅಡಿಗ: ಸುತ್ತಾಡುತ್ತಿರುವುದು ಯಾರ ಜೊತೆ ಗೊತ್ತೇ??

Comments are closed.