Neer Dose Karnataka
Take a fresh look at your lifestyle.

Kannada News: ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಸಾವಿನ ಹಿಂದಿನ ಅಸಲಿ ರಹಸ್ಯ: ಆರೋಗ್ಯವಾಗಿದ್ದವರು ದಿಡೀರ್ ಎಂದು ಸ್ವರ್ಗ ಸೇರಿದ್ದು ಯಾಕೆ ಗೊತ್ತೆ?

Kannada News: ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ಅಭಿನವ ಭಾರ್ಗವ ವಿಷ್ಣುವರ್ಧನ್ ಅವರು ನಮ್ಮ ಚಿತ್ರರಂಗ ಕಂಡ ಶ್ರೇಷ್ಠ ನಟ ಮಾತ್ರವಲ್ಲ, ಅವರೊಬ್ಬ ಶ್ರೇಷ್ಠವಾದ ಮನುಷ್ಯರು ಕೂಡ ಆಗಿದ್ದರು. ವಿಷ್ಣುವರ್ಧನ್ ಅವರು ಈ ಪ್ರಪಂಚವನ್ನು ಬಿಟ್ಟು ಹೋಗಿ 13 ವರ್ಷ ಕಳೆದು ಹೋಗಿದೆ, ಆದರೆ ಇಂದಿಗೂ ಅವರ ಅಭಿಮಾನಿಗಳು ಆ ನೋವಿನಿಂದ ಹೊರಬಂದಿಲ್ಲ. ವಿಷ್ಣುವರ್ಧನ್ ಅವರು ಇಹಲೋಕ ತ್ಯಜಿಸಿದಾಗ ಅವರಿಗೆ ಕೇವಲ 59 ವರ್ಷ ವಯಸ್ಸಾಗಿತ್ತು, ಅಷ್ಟು ಚಿಕ್ಕ ವಯಸ್ಸಿಗೆ ವಿಷ್ಣುವರ್ಧನ್ ಅವರಿಗೆ ಆ ರೀತಿ ಆಗಿದ್ದು ಯಾಕೆ ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿ ಇದೆ. ಆ ಘಟನೆ ನಡೆದದ್ದು 2009ರ ಡಿಸೆಂಬರ್ 30ರಂದು, ಈ ದುರ್ಘಟನೆ ನಡೆದಾಗ, ಹಾಗಾಗಿದ್ದು ಯಾಕೆ ಎಂದು ಹಲವರು ಹಲವು ರೀತಿಗಳಲ್ಲಿ ಮಾತನಾಡಿಕೊಂಡರು. ವಿಷ್ಣುವರ್ಧನ್ ಅವರಿಗೆ ಏನೋ ಆಗಿದೆ, ಅವರಿಗೆ ಸಂತೋಷದ ಸಾವು ಬಂತು, ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದ ಕಡೆಗೆ ಒಲವು ಇತ್ತು, ಅವರದ್ದು ಇಚ್ಛಾಮರಣ, ಹೀಗೆ ಹಲವು ಸುದ್ದಿಗಳು ಕೇಳಿಬಂದವು.

ಆದರೆ ಅಸಲಿ ವಿಚಾರ ಬೇರೆಯೇ ಇದೆ, ವಿಷ್ಣುವರ್ಧನ್ ಅವರಿಗೆ ನಿಜಕ್ಕೂ ಆಗಿದ್ದೇನು ಎಂದು ಇಂದು ನಿಮಗೆ ತಿಳಿಸುತ್ತೇವೆ. ವಿಷ್ಣುವರ್ಧನ್ ಅವರು ಆಪ್ತರಕ್ಷಕ ಸಿನಿಮಾದಲ್ಲಿ ನಟಿಸುವ ಕೆಲ ಸಮಯಕ್ಕಿಂತ ಮೊದಲು, ಅವರು ದಪ್ಪವಾಗಿದ್ದರು. ಆಗ ಕೆಲವರು ವಿಷ್ಣುವರ್ಧನ್ ಅವರಿಗೆ ಬೇರೆ ದೇಶಕ್ಕೆ ಹೋಗಿ, ಚಿಕಿತ್ಸೆ ಪಡೆದು ಸಣ್ಣ ಆಗಿ ಎಂದು ಸಲಹೆ ನೀಡಿದರು, ಆಗ ವಿಷ್ಣುವರ್ಧನ್ ಅವರು ತಮ್ಮನ್ನು ನಂಬಿರುವ ನಿರ್ಮಾಪಕರು, ನಿರ್ದೇಶಕರು ಇದ್ದಾರೆ, ಅಭಿಮಾನಿಗಳು ತಮ್ಮನ್ನು ನಂಬಿ ಸಿನಿಮಾ ನೋಡಲು ಬರುತ್ತಾರೆ, ಅವರಿಗೆ ನಾನು ಮನರಂಜನೆ ಕೊಡಬೇಕು ಎಂದು ವಿಷ್ಣುವರ್ಧನ್ ಅವರು ಟ್ರೀಟ್ಮೆಂಟ್ ಪಡೆಯುವ ನಿರ್ದಾರ ಮಾಡಿ, ಟ್ರೀಟ್ಮೆಂಟ್ ಪಡೆಯುತ್ತಾರೆ. ಆದರೆ ಟ್ರೀಟ್ಮೆಂಟ್ ಪಡೆದುಕೊಂಡ ನಂತರ, ವಿಷ್ಣುವರ್ಧನ್ ಅವರಿಗೆ ಸಮಸ್ಯೆ ಶುರುವಾಗುತ್ತದೆ. ಅವರಿಗೆ ಬಿಪಿ ಸಮಸ್ಯೆ ಶುರುವಾಗುತ್ತದೆ. ಇದನ್ನು ಓದಿ..Kannada News: ದೇಶದ ಮೈ ರೋಮವೇ ಎದ್ದು ನಿಲ್ಲುವಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಸಿನ್ ಬ್ಯಾನ್ ಆಗಿದ್ದು ಯಾಕೆ ಗೊತ್ತೇ?? ಯಪ್ಪಾ ಚಿತ್ರರಂಗದಲ್ಲಿ ಹಿಂಗೆಲ್ಲ ನಡೆಯುತ್ತಾ.

ಹಾಗೆಯೇ ಆ ಘಟನೆ ನಡೆಯುವ ಸ್ವಲ್ಪ ಸಮಯದ ಮುಂಚೆ ವಿಷ್ಣುವರ್ಧನ್ ಅವರಿಗೆ ಡೈಯಾಬಿಟಿಸ್ ಸಮಸ್ಯೆ ಸಹ ಶುರುವಾಗುತ್ತದೆ, ಅವರ ಕಾಲಿಗೆ ಗಾಯವಾಗಿ, ಅದರಿಂದ ನೋವು, ಅದರ ಜೊತೆಗೆ ಬಿಪಿ ಡೈಯಾಬಿಟಿಕ್ ಸಮಸ್ಯೆ ಇಂದ ವಿಷ್ಣುವರ್ಧನ್ ಅವರು ಬಳಲುತ್ತಿರುತ್ತಾರೆ, ಅಷ್ಟೇ ಅಲ್ಲದೆ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಸಹ ಇರುತ್ತದೆ, ಆದರೆ ಈ ವಿಚಾರ ಅವರ ಕುಟುಂಬಕ್ಕೆ ಹೊರತುಪಡಿಸಿ ಬೇರೆ ಯಾರಿಗು ಗೊತ್ತಿರುವುದಿಲ್ಲ. ಹಾಗಾಗಿಯೇ ಅವರು ಮೈಸೂರಿಗೆ ಹೋಗಿ ಫಿಸಿಯೋಥೆರಪಿ ಮಾಡಿಸುವುದರ ಜೊತೆಗೆ, ಹೃದಯಕ್ಕೆ ಟ್ರೀಟ್ಮೆಂಟ್ ಸಹ ಪಡೆದುಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ತಮ್ಮ ಮೂವರು ತಂಗಿಯರನ್ನು ಕಳೆದುಕೊಂಡು ಮಾನಸಿಕವಾಗಿ ತುಂಬಾ ನೋವಿನಲ್ಲಿರುತ್ತಾರೆ ಸಾಹಸಸಿಂಹ ವಿಷ್ಣುವರ್ಧನ್. ಆ ಸಮಯದಲ್ಲಿ ಅವರು ಮಾನಸಿಕವಾಗಿ ಬಹಳ ವೀಕ್ ಆಗಿರುತ್ತಾರೆ, ಸಣ್ಣ ಸಣ್ಣ ವಿಚಾರಕ್ಕೂ ಅವರ ಮನಸ್ಸಿಗೆ ಬಹಳ ನೋವಾಗುತ್ತಿತ್ತಂತೆ, ಹಾಗಾಗಿ ಅಂಬರೀಶ್ ಅವರು ಆ ಸಮಯದಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ಇರುತ್ತಿದ್ದರಂತೆ.

ಹಾಗೆಯೇ, ವಿಷ್ಣುವರ್ಧನ್ ಅವರಿಗೆ ಈ ರೀತಿ ಆಗುವ ಹಿಂದಿನ ದಿನ ಅವರಿಗೆ ಬಹಳ ಆಪ್ತರಾಗಿದ್ದ ಸಿ.ಅಶ್ವಥ್ ಅವರು ವಿಧಿವಶರಾಗುತ್ತಾರೆ, ಅದರಿಂದಲೂ ವಿಷ್ಣುವರ್ಧನ್ ಅವರಿಗೆ ಬಹಳ ನೋವಾಗಿತ್ತು, ಅದೆಲ್ಲವನ್ನು ನೋಡಿ, ಒಬ್ಬ ಮನುಷ್ಯ ಹೋದರೆ ಈ ರೀತಿ ಹೋಗಬೇಕು, ಜನರು ಈ ರೀತಿ ಪ್ರೀತಿಸಬೇಕು ಎಂದು ಹೇಳುತ್ತಿದ್ದರಂತೆ. ಈ ವಿಚಾರವನ್ನು ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಹೇಳಿದ್ದರು. ಆದರೆ ಮರುದಿನವೇ ವಿಷ್ಣುವರ್ಧನ್ ಅವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿಬಂದಿತು. ಮೈಸೂರಿನಲ್ಲಿ ಆ ರೀತಿ ಆಗಿ, ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಎಲ್ಲಾ ಕಾರ್ಯಗಳನ್ನು ನಡೆಸಲಾಗಿತ್ತು. ಆ ಸಮಯದಲ್ಲಿ ಕೂಡ ಕೆಲವು ವಿಚಾರಕ್ಕೆ ವಿವಾದಗಳು ನಡೆದಿದ್ದವು ಎಂದು ಎಲ್ಲರಿಗು ಗೊತ್ತಿದೆ. ವಿಷ್ಣುವರ್ಧನ್ ಅವರು ಅಷ್ಟು ಚಿಕ್ಕ ವಯಸ್ಸಿಗೆ ಯಾಕೆ ವಿಧಿವಶರಾದರು ಎನ್ನುವ ಪ್ರಶ್ನೆಗೆ ಉತ್ತರ ಇದಾಗಿದೆ. ಇದನ್ನು ಓದಿ..Kannada News: ತಂದೆ ನಟ ಅಂತ ಗೊತ್ತು: ಆದರೆ ಅದನ್ನು ಮೀರಿಸಿದ ಪವಿತ್ರ ರವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ? IAS ಆಗಬೇಕಾಗಿದ್ದವರು ನಟಿಯಾಗಿದ್ದು ಯಾಕೆ ಗೊತ್ತೇ??

Comments are closed.