Neer Dose Karnataka
Take a fresh look at your lifestyle.

RCB IPL 2023: RCB ಗೆ ಸೇರಿದ ತಕ್ಷಣ ಫಾರ್ಮ್ ಕಳೆದುಕೊಳ್ಳುವವರ ನಡುವೆ, ವಿಲ್ ಜಾಕ್ಸ್ ಆರ್ಸಿಬಿ ಸೇರಿದ ನಂತರ ರೊಚ್ಚಿಗೆದ್ದು ಆಟವಾಡಿದ್ದು ಹೇಗೆ ಗೊತ್ತೇ? ಆರ್ಸಿಬಿಗೆ ಆನೆ ಬಲ.

RCB IPL 2023: ಸೌತ್ ಆಫ್ರಿಕಾದಲ್ಲಿ ಈಗ ಟಿ20 ಲೀಗ್ ಪಂದ್ಯಗಳು ನಡೆಯುತ್ತಿದೆ. ಈ ಲೀಗ್ ನಲ್ಲಿ ಪ್ರತಿಯೊಂದು ಪಂದ್ಯ ಕೂಡ, ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದು, ಇದರಲ್ಲಿ ಆಡಿರುವ ಒಬ್ಬ ಆಟಗಾರನ ಸ್ಫೋಟಕ ಪ್ರದರ್ಶನದಿಂದ ಆರ್ಸಿಬಿ ಅಭಿಮಾನಿಗಳು ಬಹಳ ಸಂತೋಷಗೊಂಡಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ, ಆರ್ಸಿಬಿ ತಂಡವು ಹರಾಜಿನಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ವಿಲ್ ಜಾಕ್ಸ್ ಅವರು. ಸೌತ್ ಆಫ್ರಿಕಾದ ಲೀಗ್ ಪಂದ್ಯಗಳಲ್ಲಿ ಇವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಪ್ರಿಟೋರಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿತು, ಓಪನರ್ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿದ ವಿಲ್ ಜಾಕ್ಸ್ ಅವರು ಅದ್ಬುತ ಪ್ರದರ್ಶನ ನೀಡಿ, 46 ಎಸೆತಗಳಲ್ಲಿ ಬರೋಬ್ಬರಿ 92 ರನ್ಸ್ ಗಳಿಸಿದ್ದಾರೆ, ಇದರಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಗಳು ಸೇರಿವೆ. ಇದರಿಂದ ಪ್ರಿಟೋರಿಯಾ ತಂಡ 216 ರನ್ ಗಳ ಭರ್ಜರಿ ಟಾರ್ಗೆಟ್ ಅನ್ನು ಸನ್ ರೈರರ್ಸ್ ಈಸ್ಟರ್ನ್ ಹಾಫ್ ತಂಡಕ್ಕೆ ನೀಡಿತು. ವಿಲ್ ಜಾಕ್ಸ್ ಅವರ ಈ ಪ್ರದರ್ಶನ ನೋಡಿ, ಆರ್ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನು ಓದಿ.. RCB IPL 2023: ಕಪ್ ಗೆಲ್ಲುವ ಸ್ಕೆಚ್ ಹಾಕಿದ ಆರ್ಸಿಬಿ: ಆರಂಭಿಕ ಸ್ಥಾನ ಯಾರದ್ದು ಗೊತ್ತೇ?? ತಿಳಿದರೆ ಶೇಕ್ ಆಗಿ ಬಿಡ್ತೀರಾ. ಎಬಿಡಿ ಪ್ಲಾನ್ ಆರಂಭ.

ಯಾಕೆಂದರೆ, ಸಾಮಾನ್ಯವಾಗಿ ಈ ಹಿಂದೆ ಒಳ್ಳೆಯ ಫಾರ್ಮ್ ನಲ್ಲಿದ್ದ ಕೆಲವು ಆಟಗಾರರು ಆರ್ಸಿಬಿ ತಂಡಕ್ಕೆ ಬಂದ ನಂತರ ಫಾರ್ಮ್ ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಆದರೆ ವಿಲ್ ಜಾಕ್ಸ್ ಅವರು ಆರ್ಸಿಬಿ ತಂಡಕ್ಕೆ ಆಯ್ಕೆಯಾದ ನಂತರ ಇನ್ನು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಐಪಿಎಲ್ ಆಕ್ಷನ್ ನಲ್ಲಿ ವಿಲ್ ಜಾಕ್ಸ್ ಅವರ ಮೂಲ ಬೆಲೆ 1.50 ಕೋಟಿ ರೂಪಾಯಿ ಆಗಿತ್ತು, ರಾಜಸ್ತಾನ್ ರಾಯಲ್ಸ್ ಮತ್ತು ಆರ್ಸಿಬಿ ತಂಡದ ನಡುವೆ ಇವರನ್ನು ಖರೀದಿ ಮಾಡಲು ಪೈಪೋಟಿ ನಡೆಸಲಾಗಿತ್ತು. ಕೊನೆಗೆ ಆರ್ಸಿಬಿ ತಂಡವು 3.20 ಕೋಟಿ ರೂಪಾಯಿ ಕೊಟ್ಟು ವಿಲ್ ಜಾಕ್ಸ್ ಅವರನ್ನು ಖರೀದಿ ಮಾಡಿತು, ಇವರು ಒಳ್ಳೆಯ ಫಾರ್ಮ್ ನಲ್ಲಿರುವುದು ಮುಂಬರುವ ಐಪಿಎಲ್ ಸೀಸನ್ ನಲ್ಲಿ ಆರ್ಸಿಬಿ ತಂಡಕ್ಕೆ ಒಳ್ಳೆಯ ವಿಚಾರ ಆಗಿದೆ. ಇದನ್ನು ಓದಿ..RCB IPL 2023: ಆರ್ಸಿಬಿ ತಂಡದಲ್ಲಿ ಒಟ್ಟು ಇದ್ದಾರೇ 8 ವಿದೇಶಿಗರು, ಯಾರ್ಯಾರು ಗೊತ್ತೇ? ಯಾರನ್ನು ಆಡಿಸಬೇಕು? ಡುಪ್ಲೆಸಿಸ್ ಹೊರಹೋದರೆ ಒಳ್ಳೆಯದೇ??

Comments are closed.