Neer Dose Karnataka
Take a fresh look at your lifestyle.

Kannada News: ಮತ್ತೊಂದು ವಿವಾದ ಕ್ರಾಂತಿಗೆ ಅಡ್ಡಿ; ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟರೆ ರಚಿತಾ ರಾಮ್?? ಗಡಿಪಾರು ಮಾಡಲು ಆಗ್ರಹ.

Kannada News: ಚಿತ್ರರಂಗದಲ್ಲಿ ಇರುವ ಸೆಲೆಬ್ರಿಟಿಗಳು ಎಷ್ಟೇ ಹುಷಾರಾಗಿ ಇದ್ದರೂ ಕೂಡ ಅದು ಕಡಿಮೆಯೇ, ಅವರು ಲೈಮ್ ಲೈಟ್ ನಲ್ಲಿರುವ ಕಾರಣ, ಅವರು ಕೊಡುವ ಒಂದೊಂದು ಹೇಳಿಕೆಗಳನ್ನು ಜನರು ಗಮನಿಸುತ್ತಾ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೊಡುವ ಹೇಳಿಕೆಗಳು ದೊಡ್ಡ ವಿವಾದಗಳಾಗಿ ಬಿಡುತ್ತದೆ. ಇಂಥದ್ದೇ ಪರಿಸ್ಥಿತಿಯಲ್ಲಿ ಈಗ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಸಿಲುಕಿಕೊಂಡಿದ್ದಾರೆ. ರಚಿತಾ ರಾಮ್ (Rachita Ram) ಅವರು ಕ್ರಾಂತಿ (Kranthi) ಸಿನಿಮಾದ ಟ್ರೈಲರ್ ಲಾಂಚ್ ದಿನ ನೀಡಿದ ಆ ಒಂದು ಹೇಳಿಕೆ ಈಗ ಅವರನ್ನು ಗಡಿಪಾರು ಮಾಡಬೇಕು ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ..

ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಬಳಿಕ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ರಚಿತಾ ರಾಮ್, ಜನವರಿ 26 ಗಣರಾಜ್ಯೋತ್ಸವ ಎನ್ನುವುದನ್ನ ಮರೆತುಬಿಡಿ, ಈ ವರ್ಷ ಕ್ರಾಂತಿ ಉತ್ಸವ ಮಾಡಿ.. ಎಂದಿದ್ದರು. ಈ ಮಾತಿಗೆ ಹಲವರ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಹೇಳಿಕೆ ನೀಡಿದ ಕಾರಣಕ್ಕೆ ರಚಿತಾ ರಾಮ್ ಅವರ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ, “ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ, ಆದರೆ ನಮ್ಮ ಸಂವಿಧಾನಕ್ಕೆ ಈಗಲೂ ತೊಂದರೆ, ಅವಮಾನ ಆಗುತ್ತಲೇ ಇದೆ ಇತ್ತೀಚೆಗೆ ನಟಿ ರಚಿತಾ ರಾಮ್ ಗಣರಾಜ್ಯೋತ್ಸವ ಬಿಡಿ, ಕ್ರಾಂತಿಯೋತ್ಸವ ಮಾಡಿ ಎನ್ನುವ ಮಾತನ್ನು ಹೇಳಿದ್ದಾರೆ.. ಇದನ್ನು ಓದಿ.. Kannada News: ಕ್ರಾಂತಿ ಸಿನೆಮಾ ಬಿಡುಗಡೆಗೂ ಮುನ್ನವೇ ಬಿಗ್ ಶಾಕ್: ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭವಾದ 24 ಗಂಟೆಯಲ್ಲಿ ಬಿಗ್ ಶಾಕ್. ಏನಾಗಿದೆ ಗೊತ್ತೇ??

ಇದು ಸಂವಿಧಾನದ ವಿರೋಧ ಮಾಡುವ ಹೇಳಿಕೆ, ಸಂವಿಧಾನವನ್ನು ಜಾರಿಗೆ ತಂದ ದಿನಕ್ಕೆ ಮಾಡಿರುವ ಅವಮಾನ ಇದು. ಇದು ದೇಹದ್ರೋಹದ ಹೇಳಿಕೆ, ಹಾಗಾಗಿ ನಾವು ರಚಿತಾ ರಾಮ್ ಅವರ ಮೇಲೆ ದೇಶದ್ರೋಹದ ಆರೋಪದ ಮೇಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ರಚಿತಾ ರಾಮ್ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಕೇಳಿಕೊಂಡಿದ್ದೇವೆ..” ಎಂದು ಹೇಳಿದ್ದಾರೆ. ರಚಿತಾ ರಾಮ್ ಅವರ ಈ ಹೇಳಿಕೆ ಈಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದೆ ಇದು ಸಿನಿಮಾಗೆ ಯಾವ ರೀತಿ ಎಫೆಕ್ಟ್ ಮಾಡುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Rashmika Mandanna: ಶರ್ಟ್ ಇಲ್ಲದೆ ತಿರುಗಾಡಿ, ಅಂದವನ್ನು ಉಣಬಡಿಸುತ್ತಿರುವ ರಶ್ಮಿಕಾ: ಹದ್ದು ಮೀರಲು ಕಾರಣ ಏನು ಗೊತ್ತೇ? ಅದಕ್ಕಾಗಿಯೇ ಹೇಗೆ ಮಾಡಿದ್ರ??

Comments are closed.