Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?
Business: ಈಗ ಅಡುಗೆ ಮಾಡಲು ಬಹಳ ಮುಖ್ಯವಾಗಿ ಬೇಕಾದದ್ದು ಗ್ಯಾಸ್ ಸಿಲಿಂಡರ್, ಹಳೆಯ ಕಾಲದ ಹಾಗೆ ಅಡುಗೆ ಮಾಡುವುದಕ್ಕಿಂತ, ಈಗ ಎಲ್ಲರೂ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಕೇಂದ್ರ ಸರ್ಕಾರವು, ಮಹಿಳೆಯವರಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ನೀವು ಬ್ಯುಸಿನೆಸ್ ಮಾಡುವ ಪ್ಲಾನ್ ನಲ್ಲಿದ್ದರೆ, ಗ್ಯಾಸ್ ಸಿಲಿಂಡರ್ ಏಜೆನ್ಸಿ ಶುರು ಮಾಡುವುದು ಒಂದು ಬ್ಯುಸಿನೆಸ್ ಐಡಿಯಾ ಆಗಿದೆ, ಇದು ಯಾವಾಗಲೂ ಬೇಡಿಕೆಯಲ್ಲಿರುವ ಬ್ಯುಸಿನೆಸ್. ಹಾಗಿದ್ದರೆ, ಈ ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಗ್ಯಾಸ್ ಸಿಲಿಂಡರ್ ಏಜೆನ್ಸಿ ಶುರು ಮಾಡಲು ಮೊದಲು ನಿಮಗೆ ಡೀಲರ್ಶಿಪ್ ಬೇಕು, ಇದನ್ನು ಪಡೆಯುವುದು ಸ್ವಲ್ಪ ಕಷ್ಟವೇ. ಪತ್ರಿಕೆಯಲ್ಲಿ ಇದರ ಬಗ್ಗೆ ವರದಿ ಬಂದಾಗ ನೋಡಿಕೊಂಡು ಅಪ್ಲೈ ಮಾಡಬೇಕು. ಇನ್ನು ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಹಾಗು ಭಾರತ್ ಪೆಟ್ರೋಲಿಯಂ, ಈ ಮೂರರಲ್ಲಿ ಒಂದು ಸಂಸ್ಥೆಯಿಂದ ಡೀಲರ್ಶಿಪ್ ಏಜೆನ್ಸಿ ಪಡೆಯಬಹುದು..ಡೀಲರ್ಶಿಪ್ ಗಾಗಿ ಅರ್ಜಿ ಹಾಕುವವರಿಗೆ ಕನಿಷ್ಠ 21 ವರ್ಷ ಆಗಿರಬೇಕು, 10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ನಿಮ್ಮ ಬಳಿ ಸ್ವಂತ ಜಾಗ ಇರಬೇಕು. ಗ್ಯಾಸ್ ಸಿಲಿಂಡರ್ ಏಜೆನ್ಸಿ ಆಫೀಸ್ ಹಾಗು ಸಿಲಿಂಡರ್ ಗೋಡೌನ್ ಗೆ ಸಾಕಾಗುವಷ್ಟು ಜಾಗ ಇರಬೇಕು. ಒಂದು ವೇಳೆ ಸ್ವಾತಂತ್ರ್ಯ ಹೋರಾಟಗಾರರು ಈ ಡೀಲರ್ಶಿಪ್ ಪಡೆಯುವುದಾದರೆ ಅವರಿಗೆ ವಯಸ್ಸಿನ ಲಿಮಿಟ್ಸ್ ಇರುವುದಿಲ್ಲ. 60 ವರ್ಷದ ನಂತರವೂ ಪಡೆಯಬಹುದು. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??
ಜಾಹಿರಾತು ನೋಡಿಕೊಂಡು ಏಜೆನ್ಸಿ ಡೀಲರ್ಶಿಪ್ ಗೆ ಅದರ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಅಪ್ಲೈ ಮಾಡಿ, ಬಳಿಕ ನಿಮಗೆ ಇಂಟರ್ವ್ಯೂ ಹಾಗೂ ಜಾಗದ ಪರಿಶೀಲನೆ ಇರುತ್ತದೆ. ಅದೆಲ್ಲವೂ ನಡೆದ ಬಳಿಕ ಕಂಪನಿ ನಿಮಗೆ ಸಮಯ ಕೊಡುತ್ತದೆ, ಅಷ್ಟರ ಒಳಗೆ ನೀವು ಏಜೆನ್ಸಿ ಶುರು ಮಾಡಬೇಕು, ಇಲ್ಲದೆ ಹೋದರೆ ನಿಮ್ಮ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ನಗರದಲ್ಲಿ ಈ ಡೀಲರ್ಶಿಪ್ ಪಡೆಯಲು, ಸಾಮಾನ್ಯ ವರ್ಗಾವರು 10,000 ರೂಪಾಯಿಗಳನ್ನು ಅರ್ಜಿ ಸಲ್ಲಿಸುವಾಗ ಪಾವತಿ ಮಾಡಬೇಕು, ಹಿಂದುಳಿದ ವರ್ಗದವರು 5000 ಪಾವತಿ ಮಾಡಬೇಕು, ಎಸ್.ಸಿ/ಎಸ್.ಟಿ ಗೆ ಸೇರಿದವರು 3000 ಪಾವತಿ ಮಾಡಬೇಕು.
ಹಳ್ಳಿಗಳಲ್ಲಿ ಡೀಲರ್ಶಿಪ್ ಪಡೆಯಲು, ಸಾಮಾನ್ಯ. ವರ್ಗದವರು 8000 ಪಾವತಿ ಮಾಡಬೇಕು, ಹಿಂದುಳಿದ ವರ್ಗದವರು 4000 ಪಾವತಿ ಮಾಡಬೇಕು, ಹಾಗೆಯೇ ಎಸ್.ಸಿ/ಎಸ್.ಟಿ ವರ್ಗದವರು 2500 ರೂಪಾಯಿ ಪಾವತಿ ಮಾಡಬೇಕು. ಇನ್ನು ಏಜೆನ್ಸಿ ಶುರು ಮಾಡಲು ಹಣವನ್ನು ಠೇವಣಿ ಕೂಡ ಇಡಬೇಕು, ಈ ಹಣ ಹಿಂದಿರುಗಿ ಕೊಡುವುದಿಲ್ಲ. ನಗರಗಳಲ್ಲಿ ಗ್ಯಾಸ್ ಏಜೆನ್ಸಿ ಶುರು ಮಾಡಲು 50,000 ಠೇವಣಿ ಇಡಬೇಕು, ಹಳ್ಳಿ ಕಡೆ ಶುರುಮಾಡಲು 40,000 ಠೇವಣಿ ಇಡಬೇಕು. ಈ ಬ್ಯುಸಿನೆಸ್ ನಲ್ಲಿ ನಿಮಗೆ 10 ರಿಂದ 15 ಲಕ್ಷ ಖರ್ಚು ಬರುತ್ತದೆ. ಆದರೆ ನಷ್ಟ ಆಗುವುದಿಲ್ಲ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??
Comments are closed.