Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್; ಮೋದಿಯ ಉತ್ತರಾಧಿಕಾರಿ ಸ್ಥಾನದ ಬಗ್ಗೆ ಯೋಗಿ ಪ್ರತಿಕ್ರಿಯೆ. ಯಾರಾಗಲಿದ್ದಾರೆ ಮೋದಿ ನಂತರದ ಪ್ರಧಾನಿ??

Kannada News: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಮಂತ್ರಿ ಸ್ಥಾನದ ಅವಧಿ ಇನ್ನೇನು ಮುಕ್ತಾಯವಾಗುತ್ತದೆ. 2024ರಲ್ಲಿ ಮುಗಿಯುತ್ತದೆ, ಮೋದಿ ಅವರು 2014ರಲ್ಲಿ ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾದರು. ಎರಡನೇ ಸಾರಿ ಕೂಡ ಮೋದಿ ಅವರೇ ಮುಂದುವರೆದರು. ಮೋದಿ ಅವರ ಆಡಳಿತದ ಸಮಯದಲ್ಲಿ ಭಾರತದಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ನಡೆದಿದೆ, ಪ್ರಗತಿ ಕಂಡಿದೆ. ಹಾಗಾಗಿ ಮೋದಿ ಅವರ ಬಳಿಕ ಪ್ರಧಾನ ಮಂತ್ರಿ ಆಗುವ ಮುಂದಿನ ಅಭ್ಯರ್ಥಿ ಯಾರು ಎನ್ನುವ ಮತ್ತೊಂದು ಪ್ರಶ್ನೆ ಈಗ ಶುರುವಾಗಿದೆ.

ಕೆಲವರು ಮೋದಿ ಅವರೇ ಮತ್ತೊಂದು ಸಾರಿ ಪ್ರಧಾನಿ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಈಗ ರೂಲ್ಸ್ ನಲ್ಲಿ ಬದಲಾವಣೆ ಮಾಡಿರುವುದರಿಂದ ಮೋದಿ ಅವರ ವಯಸ್ಸು ಹೆಚ್ಚಾಗಿರುವ ಕಾರಣ ಅವರು ಮತ್ತೊಮ್ಮೆ ಪ್ರಧಾನಿ ಆಗಲು ಸಾಧ್ಯವಿಲ್ಲ. ಹಾಗಾಗಿ ಮೋದಿ ಅವರ ನಂತರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿಯ ಸ್ಥಾನಕ್ಕೆ ಬರಬಹುದು ಎನ್ನಲಾಗುತ್ತಿದ್ದು, ಬಿಜೆಪಿಯ ಇನ್ನಷ್ಟು ಸಿಎಂ ಗಳ ಹೆಸರು ಕೇಳಿಬರುತ್ತಿದೆ. 2024ರ ಲೋಕಸಭಾ ಚುನಾವಣೆ ನಂತರ ಪ್ರಧಾನಿ ಮಂತ್ರಿಗಳ ಆಯ್ಕೆ ಆಗಲಿದೆ. ಮೋದಿ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಅವರು ಉತ್ತರ ಕೊಟ್ಟಿದ್ದಾರೆ.. ಇದನ್ನು ಓದಿ..Kannada News: ದಿಡೀರ್ ಎಂದು ಬದಲಾದ ನಕ್ಷತ್ರ: ಇದೇಗೆ ಸಾಧ್ಯ ಎಂದ ನೆಟ್ಟಿಗರು. ಆದರೂ ಇದು ಚೆನ್ನಾಗಿದೆ ಎಂದದ್ದು ಯಾಕೆ ಗೊತ್ತೇ??

“2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 2019ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ನಾನು ಯಾವುದೇ ಹುದ್ದೆಗೆ ಆಸಕ್ತಿ ಪಡುತ್ತಿಲ್ಲ. ಉತ್ತರ ಪ್ರದೇಶದಲ್ಲೇ ಇರಬೇಕು ಎಂದು ನನಗೆ ಆಸೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಶಕ್ತಿ. ಮೋದಿ ಅವರು ನಾಯಕ ಆಗಿದ್ದಾಗ, ಭಾರತ ದೇಶ ಹೊಸ ಗುರುತು ಕಂಡುಕೊಂಡಿದೆ. 2014ರಲ್ಲಿ ಮೋದಿ ಅವರು ಪ್ರಧಾನ ಮಂತ್ರಿ ಆದಾಗಿನಿಂದ ನಮ್ಮ ದೇಶದ ಎಲ್ಲಾ ವರ್ಗದ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ. ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ..” ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ಸುಂದರಿ ರಾಕುಲ್ ಜೀವನವನ್ನು ಅಂತ್ಯಗೊಳಿಸಿದ ತೆಲುಗು ಖ್ಯಾತ ನಟ ನಾಗಾರ್ಜುನ: ಅಂದು ಮಾಡಿದ್ದೇನು ಗೊತ್ತೇ?? ನಾಗಾರ್ಜುನ ಚಿಕ್ಕ ಹುಡುಗಿ ಎಂದು ನೋಡದೆ ಮಾಡಿದ್ದು ಸರೀನಾ?.

Comments are closed.