Neer Dose Karnataka
Take a fresh look at your lifestyle.

Kannada News: ಕುಂಭ ಮಹೋತ್ಸವಕ್ಕೆ ಮಾತ್ರ ಕಾಣಿಸಿಕೊಳ್ಳುವ ಸಾಧುಗಳು, ದಿಡೀರ್ ಎಂದು ಕಣ್ಮರೆಯಾಗುವುದು ಎಲ್ಲಿಗೆ ಗೊತ್ತೇ?

Kannada News: ಇದೀಗ ಕುಂಭ ಮಹಾರಥೋತ್ಸವ ನಡೆಯುತ್ತಿದೆ, ಇದರ ಮುಖ್ಯ ಆಕರ್ಷಣೆ ನಾಗ ಸಾಧುಗಳು ಎಂದರೆ ತಪ್ಪಲ್ಲ. ಇವರುಗಳ ದರ್ಶನ ಪಡೆಯುವುದಕ್ಕಾಗಿಯೇ ಅನೇಕರು ಕುಂಭ ಮಹಾರಥೋತ್ಸವಕ್ಕೆ ಬರುತ್ತಾರೆ. ನಾಗಸಾಧು ಎನ್ನುವ ಈ ಹೆಸರುಗಳನ್ನು ನೀವು ಕೇಳಿರಬಹುದು, ಹಾಗೆಯೇ ನೋಡಿರಲುಬಹುದು. ಇವರು ಮಹಾ ಕುಂಭ ರಥೋತ್ಸವದಲ್ಲಿ ಹಾಡುತ್ತಾವ, ಕುಣಿಯುತ್ತಾರೆ. ಅವರನ್ನು ನೋಡಿದರೆ ನಿಮಗೆ ಆಶ್ಚರ್ಯ ಅನ್ನಿಸುವುದು ಖಂಡಿತ ಖಂಡಿತ. ಈ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ನಾಗಸಾಧುಗಳು ಕುಂಭ ಮಹಾರಥೋತ್ಸವ ಮುಗಿದ ನಂತರ ಎಲ್ಲಿಗೆ ಹೋಗುತ್ತಾರೆ? ಇವರು ಎಲ್ಲಿರುತ್ತಾರೆ, ಹೇಗೆ ಜೀವನ ನಡೆಸುತ್ತಾರೆ ಇದೆಲ್ಲವೂ ಹಲವರಿಗೆ ಗೊತ್ತಿರದ ವಿಚಾರ. ಅದರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಮೊದಲಿಗೆ ನಾಗಸಾಧು ಆಗುವುದು ಹೇಗೆ ಎಂದು ನೋಡುವುದಾದರೆ..ಒಬ್ಬ ಮನುಷ್ಯ ನಾಗಸಾಧು ಆಗಬೇಕು ಎಂದು ಹೋದಾಗ, ಮೊದಲು ಅವರ ಪೂರ್ತಿ ಹಿನ್ನಲೆ ತಿಳಿದುಕೊಳ್ಳುತ್ತಾರೆ, ಅದೆಲ್ಲವು ಮನವರಿಕೆ ಆದ ನಂತರ ಅವರಿಗೆ ಒಂದೊಂದೇ ಪರೀಕ್ಷೆ ನೀಡಲಾಗುತ್ತದೆ, ತಪಸ್ಸು, ಬ್ರಹ್ಮಚರ್ಯ ನಿರಾಸಕ್ತಿ, ಧ್ಯಾನ, ಸನ್ಯಾಸ, ಧರ್ಮ ದೀಕ್ಷೆ ಇದೆಲ್ಲವನ್ನು ಕೂಡ ನೀಡಲಾಗುತ್ತದೆ. ಇದೆಲ್ಲವೂ ಮುಗಿಯಲು 1 ರಿಂದ 12 ವರ್ಶಗಳ ಸಮಯವಾಗುತ್ತದೆ. ದೀಕ್ಷೆ ಪಡೆಯುವ ಮೊದಲು, ಇದೆಲ್ಲವೂ ಸರಿಯಾಗಿದ್ದರೆ ಮಾತ್ರ ಮುಂದಿನ ಪ್ರಕ್ರಿಯೆಗೆ ಹೋಗುತ್ತಾರೆ. ಎರಡನೆಯ ಪ್ರಕ್ರಿಯೆಯಲ್ಲಿ ಇವರು ತಮ್ಮ ಕೂದಲನ್ನು ತೆಗೆಸುತ್ತಾರೆ, ಪಿಂಡದಾನ ಮಾಡುತ್ತಾರೆ, ಬಳಿಕ ಇವರ ಜೀವನ ಸಮಾಜಕ್ಕೆ ಮೀಸಲಾಗಿರುತ್ತದೆ. ಮನೆ ಕುಟುಂಬ ಇದೆಲ್ಲವನ್ನು ಬಿಟ್ಟು ಪೂರ್ತಿಯಾಗಿ ಲೌಖಿಕ ಜೀವನದಲ್ಲಿರುತ್ತಾರೆ. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದ ತೋರಿಸುತ್ತ, ದೇಶವೇ ಬೂದಿಯಾಗುವ ಹಾಗೆ ಡಾನ್ಸ್ ಮಾಡಿದ ಯುವತಿ. ನೋಡಲು ಎರಡು ಕಣ್ಣು ಸಾಲದು. ವಿಡಿಯೋ ಹೇಗಿದೆ ಗೊತ್ತೆ?

ತಾನು ಈ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಇನ್ನಿಲ್ಲ ಎಂದು ಹೇಳಿ ತನಗೆ ತಾನೇ ಶ್ರಾದ್ಧ ಮಾಡುವುದೇ ಪಿಂಡದಾನ. ನಂತರ ಅಲ್ಲಿನ ಗುರುಗಳು ಇವರಿಗೆ ಹೊಸ ಹೆಸರು ಮತ್ತು ಹೊಸ ಗುರುತನ್ನು ನೀಡುತ್ತಾರೆ. ನಾಗಸಾಧು ಆದ ನಂತರ ದೇಹದ ಮೇಲೆ ಬೂದಿ ಭಸ್ಮ ಬಳಿದುಕೊಳ್ಳುತ್ತಾರೆ. ಇದನ್ನು ತಯಾರಿಸಲು ಬಹಳ ಸಮಯ ಬೇಕಾಗುತ್ತದೆ. ಒಂದು ಮೃತದೇಹದ ಚಿತಾಭಸ್ಮವನ್ನು ತೆಗೆದುಕೊಂಡು ಅದನ್ನು ಶುದ್ದೀಕರಿಸಿದ ನಂತರ ಮೈಮೇಲೆ ಹಾಕಿಕೊಳ್ಳುತ್ತಾರೆ. ಇಲ್ಲದೆ ಹೋದರೆ ಹವನ ಅಥವಾ ಬೂದಿಯನ್ನು ಮೈಗೆಬಳಿದುಕೊಳ್ಳುತ್ತಾರೆ. ಇವರು ಎಲ್ಲಿ ವಾಸ ಮಾಡುತ್ತಾರೆ ಎಂದು ನೋಡುವುದಾದರೆ, ಕಾಶಿ, ಗುಜರಾಜ್ ಹಾಗೂ ಉತ್ತರಕಾಂಡದ ಗುಡ್ಡಗಾಡಿನ ಪ್ರದೇಶಗಳಲ್ಲಿ ಇರುತ್ತಾರೆ.

ಜನರಿಂದ ದೂರ ಇರುವ ಗುಹೆಗಳಲ್ಲಿ ವಾಸ ಮಾಡುತ್ತಾರೆ. ಇವರು ಆಗಾಗ ತಮ್ಮ ಜಾಗಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಕಾಡಿನಲ್ಲೇ ಇರುವ ಇವರು ಕುಂಭ ರಥೋತ್ಸವದಲ್ಲಿ ಮಾತ್ರ ಬರುತ್ತಾರೆ. ಇವರು 24 ಗಂಟೆಗೆ ಒಂದು ಸಾರಿ ಊಟ ಮಾಡುತ್ತಾರೆ. ಭಿಕ್ಷೆ ಬೇಡಿ ಊಟ ಪಡೆದುಕೊಳ್ಳುತ್ತಾರೆ, ಒಂದು ಸಾರಿ ಆರು ಅಥವಾ ಏಳು ಮನೆಗಳಿಂದ ಭಿಕ್ಷೆ ತೆಗೆದುಕೊಳ್ಳಬಹುದು. ಒಂದು ವೇಳೆ ಏಳು ಮನೆಯಲ್ಲಿ ಭಿಕ್ಷೆ ಸಿಗದೆ ಹೋದರೆ, ಇವರು ಉಪವಾಸ ಇರಬೇಕಾಗುತ್ತದೆ. ಇದನ್ನು ಓದಿ..Jio Recharge Plans: ಹೆಚ್ಚು ಬೇಡ, ಒಮ್ಮೆ 895 ರಿಚಾರ್ಜ್ ಮಾಡಿದರೆ, ಜಿಯೋ ವ್ಯಾಲಿಡಿಟಿ ಕೇಳಿದರೆ, ಇರುವ ಪ್ಯಾಕ್ ಬಿಟ್ಟು ಇದುನ್ನ ರಿಚಾರ್ಜ್ ಮಾಡುತ್ತೀರಿ. ಅದೆಷ್ಟು ಲಾಭ ಗೊತ್ತೇ?

Comments are closed.