Neer Dose Karnataka
Take a fresh look at your lifestyle.

Madhoo Shah: ಕೊನೆಗೂ ಬಯಲಾಯ್ತು ಸತ್ಯ: ರವಿಚಂದ್ರನ್ ರವರ ಜೊತೆ ನಟಿಸಿದ್ದ ನಟಿ, ಕನ್ನಡದಿಂದ ದೂರ ಹೋಗಿದ್ದು ಯಾಕೆ ಗೊತ್ತೇ?? ಪಾಪ ಏನಾಗಿದೆ ಗೊತ್ತೇ?

627

Madhoo Shah: ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಅಣ್ಣಯ್ಯ (Annayya) ಸಿನಿಮಾದ ಹೀರೋಯಿನ್ ನಟಿ ಮಧೂ (Madhoo) ಅವರು 90ರ ದಶಕದಲ್ಲಿ ಎಲ್ಲಾ ಹುಡುಗರ ಕ್ರಶ್ ಆಗಿದ್ದರು. ಕನ್ನಡ, ತಮಿಳು, ತೆಲುಗು ಬಾಲಿವುಡ್ ಎಂದು ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳ ಜೊತೆಗೂ ತೆರೆಹಂಚಿಕೊಂಡು, ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿದ್ದ ಮಧು ಅವರು ಮಧ್ಯದಲ್ಲಿ ಮದುವೆ ನಂತರ ದೊಡ್ಡ ಬ್ರೇಕ್ ಪಡೆದುಕೊಂಡರು. ಅದಾದ ನಂತರ ಸೆಕೆಂಡ್ ಇನ್ನಿಂಗ್ಸ್ ಅನ್ನು ಕೂಡ ಶುರು ಮಾಡಿದರು.

ರೋಜಾ (Roja) ಅಂತಹ ಅದ್ಬುತ ಸಿನಿಮಾದಲ್ಲಿ ನಟಿಸಿದ್ದ ಮಧೂ ಅವರು ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ತಮ್ಮ ಕೆರಿಯರ್ ಬಗ್ಗೆ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ತಮ್ಮ ಕೆರಿಯರ್ ಮುಗಿಯುವ ಹಂತದಲ್ಲಿ ಇದ್ದಾಗ, ಒಳ್ಳೆಯ ಅವಕಾಶಗಳೇ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. “ಈಗಿನ ಹೀರೋಯಿನ್ ಗಳು ದೀಪಿಕಾ ಪಡುಕೋಣೆ (Deepika Padukone), ಆಲಿಯಾ ಭಟ್ (Alia Bhatt), ಪ್ರಿಯಾಂಕ ಚೋಪ್ರಾ (Priyanka Chopra) ಇವರೆಲ್ಲ ಮದುವೆ ಬಳಿಕ ಸಿನಿಮಾದಲ್ಲಿ ನಟಿಸಿ, ಯಶಸ್ವಿಯಾಗಿದ್ದಾರೆ. ಆದರೆ ನಾವೆಲ್ಲಾ ಆಗ ಟೈಪ್ ಕ್ಯಾಸ್ಟ್ ಆಗಿದ್ವಿ.. ಇದನ್ನು ಓದಿ..Roopesh Shetty: ಮತ್ತೊಮ್ಮೆ ಸದ್ದು ಮಾಡಿದ ರೂಪೇಶ್ ಶೆಟ್ಟಿ: ಸಿಹಿ ಸುದ್ದಿ ಕೊಟ್ಟೆ ಬಿಟ್ರಾ? ಖ್ಯಾತ ನಟಿಯ ಜೊತೆ ಫೋಟೋ ಹಾಕಿ ತಲೆಗೆ ಹುಳ ಬಿಟ್ಟದ್ದು ಹೇಗೆ ಗೊತ್ತೇ??

ನಮ್ಮ ಸಮಯದಲ್ಲಿ ಹೀರೋಯಿನ್ ಅಂದ್ರೆ ಹಾಡುಗಳು, ಡ್ಯಾನ್ಸ್ ಹಾಗೂ ರೊಮ್ಯಾಂಟಿಕ್ ಸನ್ನಿವೇಶಗಳಿಗೆ ಸೀಮಿತವಾಗಿ ಮಾಡಿದ್ರು. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ, ಅದರ ಬಗ್ಗೆ ರಿಗ್ರೇಟ್ ಇಲ್ಲ. ನನಗೆ ಇಷ್ಟ ಆಗುವಂತಹ ಪಾತ್ರಗಳು ಸಿಗುತ್ತಿರಲಿಲ್ಲ, ಅದೇ ಕಾರಣದಿಂದ ಚಿತ್ರರಂಗದಿಂದ ದೂರ ಉಳಿದೆ., ಆ ವೇಳೆ ನನಗೆ ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂದು ಅನ್ನಿಸಿತ್ತು, ಆದರೆ ಒಳ್ಳೆಯ ಅವಕಾಶಗಳು ಸಿಗಲಿಲ್ಲ.. ರೋಜಾ ಸಿನಿಮಾದಲ್ಲಿ ನಟಿಸಿದ್ದೇ, ಹಾಗೆಯೇ ಯೋಧ ಅಂತಹ ಹಲವು ಆಕ್ಷನ್ ಸಿನಿಮಾಗಳಲ್ಲೂ ನಟಿಸಿದ್ದೇನೆ.

ಸೌತ್ ಇಂದಲೂ ಅಂತಹ ಪಾತ್ರಗಳು ಬರಬೇಕು ಎಂದು ಆಶಿಸಿದೆ.. ಅದು ಸಾಧ್ಯವಾಗದ ಕಾರಣ, ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದೆ..ಅದರ ಬಗ್ಗೆ ನನಗೆ ಪಶ್ಚಾತ್ತಾಪ ಇಲ್ಲ..” ಎಂದು ಹೇಳಿದ್ದಾರೆ ನಟಿ ಮಧು. ಈ ಮೂಲಕ ತಾವು ಸಿನಿಮಾ ಇಂದ ದೂರ ಉಳಿದಿದ್ದು ಯಾಕೆ ಎನ್ನುವುದನ್ನು ತಿಳಿಸಿದ್ದಾರೆ. ಅಣ್ಣಯ್ಯ ನಂತರ ಕನ್ನಡದಲ್ಲಿ ರನ್ನ, ನಾನು ಮತ್ತು ವರಲಕ್ಷ್ಮೀ, ಸೀತಾರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ ಸಿನಿಮಾಗಳಲ್ಲಿ ನಟಿಸಿದ್ದರು. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Leave A Reply

Your email address will not be published.