Manobala: ದಿಡೀರ್ ಎಂದು ಹಾಸ್ಯನಟ ಮನೋಬಾಲ ಸಾವನ್ನಪ್ಪಿದ್ದು ಹೇಗೆ ಗೊತ್ತೇ?? ಅದೊಂದೇ ಕಾರಣಕ್ಕೆ ಯಮನ ಬಳಿ ಹೋದರೆ? ಏನಾಗಿತ್ತು ಗೊತ್ತೇ?
Manobala: ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಒಂದರ ನಂತರ ಒಂದು ದುರಂತಗಳು ನಡೆಯುತ್ತಲೇ ಇದೆ. ಚಿತ್ರರಂಗ ಹಲವು ಕಲಾವಿದರನ್ನು ಕಳೆದುಕೊಳ್ಳುತ್ತಿದೆ. ಕಲಾವಿದರು ಹೀಗೆ ಹೋಗುತ್ತಿರುವುದನ್ನು ನೋಡಿ ಚಿತ್ರರಂಗವೇ ಶಾಕ್ ಆಗಿದೆ. ಇತ್ತೀಚೆಗೆ ಕಾಲಿವುಡ್ ನ ಖ್ಯಾತ ಹಾಸ್ಯನಟ ಮನೋಬಾಲ (Manobala) ಅವರು 69ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.. ತಮಿಳು ಚಿತ್ರರಂಗದಲ್ಲಿ ಇವರು ಡಬ್ಬಿಂಗ್ ಆರ್ಟಿಸ್ಟ್ ಅಫಿ, ನಟನಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ಹೆಸರು ಮಾಡಿದ್ದಾರೆ. 1953 ರ ಡಿಸೆಂಬರ್ 8ರಂದು ಇವರು ತಂಜಾವೂರಿನಲ್ಲಿ ಜನಿಸಿದರು. ಇವರ ನಿಜವಾದ ಹೆಸರು ಬಾಲಚಂದರ್.
ಆರ್ಟ್ಸ್ ಓದುತ್ತಿದ್ದ ಇವರು ಚೆನ್ನೈಗೆ ಬಂದು, ನಿರ್ದೇಶಕ ಭಾರತಿರಾಜ (Bharatiraja) ಅವರೊಡನೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆರಿಯರ್ ಶುರು ಮಾಡಿದರು. ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವಾಗಲೇ ಹಲವು ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಅಮಾಡಿದರು. ಪುದಿಯ ವಾರ್ಪುಗಳ್ ಎನ್ನುವ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ (K S Ravikumar) ಅವರ ಪತ್ಪುಕ್ಕಗ ಸಿನಿಮಾ ಇಂದ ಪರಿಪೂರ್ಣ ನಟರಾದರು. ನಿರ್ದೇಶಕರಾಗಿ ಆಗಾಯ ಗಂಗೈ ಸಿನಿಮಾ ನಿರ್ದೇಶನ ಮಾಡಿದರು.
ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಊರ್ಕ್ಕಾವಲನ್, ವಿಜಯ್ ಕಾಂತ್ (Vijay Kanth) ಅವರ ಎನ್ ಪುರುಷ ಎನಕ್ಕು ಮಟ್ಟುಮ್ ದಾನ್ ಸಿನಿಮಾ ನಿರ್ದೇಶಕ ಮಾಡಿದರು. ತಮಿಳು ಚಿತ್ರರಂಗದಲ್ಲಿ ಕೆ.ಭಾಗ್ಯರಾಜ್ (K Bhagyaraj), ಮಣಿವಣ್ಣನ್ (Manivannan), ಮನೋಜ್ ಕುಮಾರ್ ಅವರಂಥ ಟಾಪ್ ನಿರ್ದೇಶಕರ ಸಾಲಿನಲ್ಲಿ ಇವರು ಕೂಡ ಇದ್ದರು. ಹಾಗೆಯೇ ಹಾಸ್ಯನಟನಾಗಿ ಬಹಳ ಹೆಸರು ಮಾಡಿದರು. ಆದರೆ ಇವರು ವಿಧಿವಶರಾಗುವುದಕ್ಕೆ, ಧೂಮಪಾನದ ಅಭ್ಯಾಸವೇ ಕಾರಣ ಎಂದು ಹೇಳಲಾಗುತ್ತಿದೆ..ನಿರ್ದೇಶನ ಶುರು ಮಾಡಿದ ಸಮಯದಲ್ಲಿ ಸ್ಮೋಕಿಂಗ್ ಅಭ್ಯಾಸ ಶುರು ಮಾಡಿಕೊಂಡರು.
ದಿನಕ್ಕೆ ಬರೋಬ್ಬರಿ 200 ಸಿಗರೇಟ್ ಸೇದುತ್ತಿದ್ದರು, ಇದರಿಂದ ಅವರ ಲಿವರ್ ಗೆ ಡ್ಯಾಮೇಜ್ ಆಗಿತ್ತು. ಕೆಲ ಸಮಯದ ನಂತರ ಮನೋಬಾಲ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ವೈದ್ಯರು ಕೊಡುತ್ತಿದ್ದ ಚಿಕಿತ್ಸೆ ಫಲಿಸದೆ, ಮನೋಬಾಲ ಅವರು ಬುಧವಾರ ವಿಧಿವಶರಾದರು. ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ ಮನೋಬಾಲ ಅವರು. ಇವರು ವಿಧಿವಶರಾಗಿದ್ದಕ್ಕೆ ತಮಿಳು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
Comments are closed.