ನೆನಪಿದ್ದಾರಾ ಅಂಕಿತ ಕುಂಡು?? ಈಗ ಹೇಗಿದ್ದಾರೆ ಗೊತ್ತಾ?? ಇವರ ಪಿ,ಯು.ಸಿ ಮಾರ್ಕ್ಸ್ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಾರಿ ಪ್ರಸಿದ್ದಿಯನ್ನು ಪಡೆದುಕೊಂಡಿರುವ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಶೋ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಈಗಾಗಲೇ 10ಕ್ಕೂ ಹೆಚ್ಚು ಸೀಸನ್ ಗಳ ಮೂಲಕ ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿರುವ ಈ ಕಾರ್ಯಕ್ರಮ ಹಲವಾರು ಪ್ರತಿಭಾವಂತರನ್ನು ಮುನ್ನೆಲೆಗೆ ತಂದಿದೆ. ಎಲ್ಲೋ ತೆರೆ ಮರೆಯ ಕಾಯಿಯಂತೆ ಇರುವ ಹಲವಾರು ಸ್ಪರ್ಧಿಗಳನ್ನು ಉತ್ತಮ ವೇದಿಕೆ ಸರಿಗಮಪ ಶೋ ಗುರುತಿಸಿಕೊಂಡಿದೆ.

ಇದೇ ಶೋನ ಮೂಲಕ ಪಶ್ಚಿಮ ಬಂಗಾಳದಿಂದ ಒಂದು ಪುಟ್ಟ ಬಾಲಕಿ ವೇದಿಕೆಯ ಮೇಲೆ ಬಂದು ಅಕ್ಷರಸಹ ತಲ್ಲಣವನ್ನು ಸೃಷ್ಟಿಸಿದ್ದರು. 2015ರಲ್ಲಿ ನಡೆದ ಸರಿಗಮಪ ಸೀಸನ್ ನಲ್ಲಿ ಫೈನಲ್ ತಲುಪಿ, ಫೈನಲ್ನಲ್ಲಿ ಸುಪ್ರಿಯ ಜೋಷಿ ರವರ ಜೊತೆ ಸ್ಪರ್ಧಿಸಿ ಕೊನೆಗೆ ದ್ವಿತೀಯ ಸ್ಥಾನ ಪಡೆದುಕೊಂಡು ತಮ್ಮ ಸರಿಗಮಪ ಜರ್ನಿಯನ್ನು ಮುಗಿಸಿದ್ದ ಅಂಕಿತಾ ಕುಂಡು ರವರ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ತಮ್ಮ ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಕೂಡ ಕನ್ನಡ ಗೀತೆಗಳನ್ನು ಸ್ಪಷ್ಟವಾಗಿ ಹಾಡಿ ಸೈ ಎನಿಸಿಕೊಂಡಿದ್ದರು.

ಇಲ್ಲಿಯವರೆಗೂ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನೆಲೆ ಧ್ವನಿಯಾಗಿ ಹಾಡಿರುವ ಅಂಕಿತ ರವರು ಕೇವಲ ಸಂಗೀತದಲ್ಲಿ ಅಷ್ಟೇ ಅಲ್ಲದೆ ದ್ವಿತೀಯ ಪಿಯುಸಿ ಅಲ್ಲಿಯೂ ಕೂಡ ಕಮಲ್ ಮಾಡಿದ್ದಾರೆ. ಹೌದು ಸ್ನೇಹಿತರೇ ಇದೀಗ ತಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು ಸಂಗೀತಾಭ್ಯಾಸದ ಜೊತೆ ತಮ್ಮ ಓದಿನ ಕಡೆ ಗಮನ ನೀಡಿ 85 ಪರ್ಸೆಂಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಾಕಷ್ಟು ಸಂಗೀತಾಭ್ಯಾಸ ಸಿನಿಮಾ ಹಾಡುಗಳು ಗಳಲ್ಲಿ ಬ್ಯುಸಿಯಾಗಿರುವ ಅಂಕಿತ ಅವರು ತಮ್ಮ ಓದಿನ ಕಡೆ ಕೂಡ ಹೆಚ್ಚಿನ ಗಮನ ಹರಿಸುತ್ತಾರೆ ಎಂಬುದು ಇದರಿಂದ ತಿಳಿದು ಬಂದಿದೆ.