ನಾನು ಯಶ್ ತಂಗಿ ಎಂದು ಎಲ್ಲಿಯೂ ಕೂಡ ದೀಪಿಕಾ ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇರಲಿ ಅಥವಾ ಇನ್ಯಾವುದೇ ಚಿತ್ರರಂಗದಲ್ಲಿ ಇರಲಿ ಒಬ್ಬರು ನಟ-ನಟಿ ಬೆಳೆಯ ಬೇಕು ಎಂದರೆ ಅದು ಸುಲಭದ ಮಾತಾಗಿರುವುದಿಲ್ಲ, ಅದೇ ನೀವು ಯಾವುದಾದರೂ ಸೆಲೆಬ್ರಿಟಿಯ ಸಂಬಂಧಿಕರಾಗಿದ್ದರೇ ನಿಮಗೆ ಅವಕಾಶಗಳು ಬಹಳ ಸುಲಭವಾಗಿ ಸಿಗುತ್ತವೆ. ಒಮ್ಮೆ ಅವಕಾಶ ಸಿಕ್ಕ ಮೇಲೆ ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಕಂಡಿತ ನೀವು ಯಶಸ್ಸಿನ ಉತ್ತುಂಗಕ್ಕೆ ಏರುತ್ತೀರಿ.

ಆದರೆ ಹೀಗೆ ನೀವು ಎಷ್ಟೇ ಬೆಳೆದರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕೆಲವರು ಇವರು ಇನ್ನೊಬ್ಬರ ಹೆಸರು ಹೇಳಿಕೊಂಡು ಅವಕಾಶ ಗಿಟ್ಟಿಸಿಕೊಂಡರು ಎಂಬ ಮಾತುಗಳನ್ನು ಆಡುತ್ತಾರೆ. ಇನ್ನು ದೀಪಿಕಾ ದಾಸ್ ರವರು ಕನ್ನಡದ ನಾಗಿಣಿ ಧಾರವಾಹಿಯ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ .ನಟಿ ದೀಪಿಕಾ ದಾಸ್ ಅವರು ಕೂಡ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ಯಶ್ ಅವರ ತಂಗಿ. ಅಂದರೆ ಚಿಕ್ಕಮ್ಮನ ಮಗಳು.

ಹಾಗೆಂದ ಮಾತ್ರಕ್ಕೆ ನಟಿ ದೀಪಿಕಾ ದಾಸ್ ಅವರು ಯಶ್ ರವರ ಹೆಸರು ಹೇಳಿ ಅವಕಾಶ ಗಿಟ್ಟಿಸಿಕೊಂಡಿಲ್ಲ, ಹೌದು ಸ್ನೇಹಿತರೇ ದೀಪಿಕಾ ದಾಸ್ ರವರು ಯಶ್ ರವರ ತಂಗಿ ಆಗಿದ್ದರೂ ಕೂಡ ಎಲ್ಲಿಯೂ ಕೂಡ ನಾನು ಯಶ್ ಅವರ ತಂಗಿ ಎಂದು ಹೇಳಿ ಕೊಳ್ಳುವುದಿಲ್ಲ. ಇಬ್ಬರ ನಡುವಿನ ಸಂಬಂಧ ಬಹಳ ಚೆನ್ನಾಗಿದ್ದರೂ ಕೂಡ ನಾನು ಅಣ್ಣನ ಹೆಸರು ಹೇಳಿಕೊಂಡು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಥವಾ ಜನಪ್ರಿಯತೆ ಪಡೆದು ಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗೆ ಜನರು ಕೂಡ ಹಾಗೆ ಮಾತನಾಡಿದರೇ ಚೆನ್ನಾಗಿ ಇರುವುದಿಲ್ಲ ಎಂದು ಹೇಳಿ ಇಲ್ಲಿಯವರೆಗೂ ಯಾವುದೇ ಕಾರಣಕ್ಕೂ ಯಶ್ ರವರ ಹೆಸರು ಬಳಸಿ ಕೊಂಡು ಯಾವುದೇ ಕೆಲಸವನ್ನು ಮಾಡಿಸಿಕೊಂಡಿಲ್ಲ