ಬಿಗ್ ನ್ಯೂಸ್: ಘೋಷಣೆಯಾಯಿತು ಬಿಗ್ ಬಾಸ್ ಮನೆಯ ಮೊದಲ ಸ್ಪರ್ದಿಯ ಅಧಿಕೃತ ಹೆಸರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇನ್ನು ಕೆಲವೇ ಕೆಲವು ದಿನಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಕಾದು ಕುಳಿತಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಹಲವಾರು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದ್ದು, ಸ್ಪರ್ಧಿಗಳ ಲಿಸ್ಟ್ ನೋಡುತ್ತಿದ್ದರೆ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಗುವುದು ಖಚಿತವಾಗಿದೆ

ಇಂತಹ ಸಂದರ್ಭದಲ್ಲಿ ಇದೀಗ ಹಲವಾರು ಸ್ಪರ್ಧಿಗಳ ಹೆಸರು ದಿನೇ ದಿನೇ ಕೇಳಿಬರುತ್ತಿದ್ದು, ಮೊದಲಿನಿಂದಲೂ ಕೇಳಿ ಬರುತ್ತಿದ್ದ ಹೆಸರು ಒಂದು ಕಡೆ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಘೋಷಣೆ ಮಾಡಿದರೇ ಮತ್ತೊಂದೆಡೆ ಒಬ್ಬರು ಅಭ್ಯರ್ಥಿ ಬಿಗ್ ಬಾಸ್ ಮನೆಗೆ ಹೋಗುವುದು ಖಚಿತವಾಗಿದೆ.

ಹೌದು ಸ್ನೇಹಿತರೇ ಇದೀಗ ಮೊದಲನೆಯಾಗಿ ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ರವರು ಖಚಿತಪಡಿಸಿದ್ದಾರೆ, ನಾನು ಒಂದು ಸಿನಿಮಾದಲ್ಲಿ ಬಿಜಿಯಾಗಿದ್ದು ಆಫರ್ ಬಂದಿದ್ದು ನಿಜ. ಆದರೆ ನಾನು ಮನೆಗೆ ಹೋಗುವುದು ಸಾಧ್ಯವಿಲ್ಲ ಎಂದು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರವಾಹಿಯ ಮೂಲಕ ಮನೆ ಮಾತಾದ ಪಾತ್ರದಾರಿ ಗೀತಾರವರು ಬಿಗ್ ಬಾಸ್ ಮನೆಗೆ ಹೋಗುವುದು ಖಚಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ