ವಿನೋದ್ ಪ್ರಭಾಕರ್ ಹೆಂಡತಿ ಹೇಗಿದ್ದಾರೆ ಗೊತ್ತೆ? ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಸ್ಥಾನ ಪಡೆದು ಕೊಂಡಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಟೈಗರ್ ಪ್ರಭಾಕರ್ ಅವರನ್ನು ಕನ್ನಡ ಚಿತ್ರರಂಗದ ಎಂದಿಗೂ ಮರೆಯಲು ಸಾಧ್ಯವಿಲ್ಲ, ಇನ್ನು ಇದೀಗ ಮರಿ ಟೈಗರ್ ಅಂದರೆ ಪ್ರಭಾಕರ್ ಅವರ ಹಿರಿಯ ಮಗ ವಿನೋದ್ ಪ್ರಭಾಕರ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ಒಂದು ಬ್ರೇಕ್ ಗಾಗಿ ಕಾಯುತ್ತಿರುವ ವಿನೋದ್ ಪ್ರಭಾಕರ್ ಅವರು ಖಂಡಿತ ಒಂದು ಬ್ರೇಕ್ ಸಿಕ್ಕರೆ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ವಿನೋದ್ ಪ್ರಭಾಕರ್ ಅವರು ಕನ್ನಡದ ಯಂಗ್ ಹಾಗೂ ಟ್ಯಾಲೆಂಟೆಡ್ ಹೀರೋ ಎಂದರೆ ತಪ್ಪಾಗಲಾರದು. ಇನ್ನು ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ

ವಿನೋದ್ ಪ್ರಭಾಕರ್ ಅವರು 2014ರಲ್ಲಿ ದಾಂಪತ್ಯ ಜೀವನಕ್ಕೆ ನಿಶಾ ರವರ ಜೊತೆ ಕಾಲಿಟ್ಟಿದ್ದಾರೆ, ಮದುವೆಗೂ ಮುನ್ನ ಬರೋಬ್ಬರಿ ಹದಿನೈದು ವರ್ಷಗಳ ಕಾಲ ಪ್ರೀತಿಸಿ ಜೋಡಿಯು ಮದುವೆಯಾಗಿದ್ದು, ಹೈದರಾಬಾದ್ ನಗರದ ತೆಲುಗು ಕುಟುಂಬಕ್ಕೆ ನಿಶಾ ರವರು ಸೇರಿದ್ದಾರೆ. ಇನ್ನು ನೋಡಲು ಯಾವುದೇ ಹೀರೋಯಿನ್ ಗಳಿಗಿಂತ ಕಡಿಮೆ ಇಲ್ಲ ಎನಿಸುವ ನಿಶಾ ಅವರ ತಂದೆ ಆರ್ಮಿ ಆಫೀಸರ್.

1999ರಲ್ಲಿ ಭೇಟಿಯಾಗಿದ್ದ ವಿನೋದ್ ಮತ್ತು ನಿಶಾ ಅವರು ಸ್ವತಹ ನಿಶಾ ಅವರೇ ವಿನೋದ್ ಪ್ರಭಾಕರ್ ರವರಿಗೆ ಪ್ರೇಮ ನಿವೇದನೆ ಮಾಡಿದ್ದರು, ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮುಗಿಸಿರುವ ನಿಶಾ ಅವರು ವಿನೋದ್ ರವರ ಕಾಸ್ಟ್ಯೂಮ್ ಹಾಗೂ ಲುಕ್ ನೋಡಿಕೊಳ್ಳುತ್ತಾರೆ. ಮದುವೆಯಾದಾಗ ವಿನೋದ್ ಪ್ರಭಾಕರ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳು ಇರುವಾಗಲೂ ಕೂಡ ನಿಶಾ ರವರು ಜೊತೆಯಾಗಿ ನಿಂತು ಜೀವನ ನಡೆಸಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನ ಹೀಗೆ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.